ಮುಧೋಳ

ಅರುವಿನ ಗುರುವಿಗೆ ಕೋಟಿ ನಮನ ವಿಶೇಷ ಕಾರ್ಯಕ್ರಮ

ಅರುವಿನ ಗುರುವಿಗೆ ಕೋಟಿ ನಮನ ವಿಶೇಷ ಕಾರ್ಯಕ್ರಮ
ಹಿರಿಯ ಜೀವಗಳನ್ನು ಗೌರವದಿಂದ ಕಾಣಬೇಕು: ನಿತ್ಯಾನಂದ ಮಹಾಸ್ವಾಮೀಜಿ
ಮುಧೋಳ 14: ನಾವಿರದ ಜಗತ್ತಿನಲ್ಲಿ ನಾವಿರಬೇಕಾದರೆ ನಾವಿದ್ದಾಗ ಸಮಾಜದಲ್ಲಿ ಏನನ್ನಾದರೂ ಬಿಟ್ಟುಹೋಗಬೇಕು ಮನೆಯಲ್ಲಿ ಕುಟುಂಬ ಸದಸ್ಯರ ಜೊತೆಗೆ ಹಿರಿಯ ಜೀವಗಳನ್ನು ಗೌರವದಿಂದ ಕಂಡಾಗ ಮಾತ್ರ ಎಂದು ರೂಗಿ ಅಡವಿ ಆಶ್ರಮದ ನಿತ್ಯಾನಂದ ಮಹಾಸ್ವಾಮೀಜಿ ಹೇಳಿದರು.
ಭಾನುವಾರ ನಗರದ ಬಸವ ಪ್ರಭು ಕತ್ತಿ ಕಲ್ಯಾಣ ಮಂಟಪದ ಸಭಾ ಭವನದಲ್ಲಿ 1980 ರಿಂದ 1990 ನೇ ಸಾಲಿನಲ್ಲಿ 1 ನೇ ತರಗತಿಯಿಂದ 10 ನೇ ತರಗತಿವರೆಗೆ ಮುಧೋಳ ಪಟ್ಟಣದಲ್ಲಿ ಅಧ್ಯಯನ ಮಾಡಿದ ವಿದ್ಯಾರ್ಥಿಗಳ ಸಹಪಾಠಿಗಳ ಹಮ್ಮಿಕೊಂಡ ಅರಿವಿನ ಗುರುವಿಗೆ ಕೋಟಿ ನಮನ, ಬಾಲ್ಯ ಸ್ನೇಹಿತರ ಪುನರಮಿಲನ ಹಾಗೂ ಗುರುವಂದನಾ ಸಮಾರಂಭ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು
ಕೈಲಾಸ ಬೇರೆ ಇಲ್ಲ ನಾವು ಮಾಡುವ ಕಾಯಕ,ದಾಸೋಹದಲ್ಲಿ,ಒಳ್ಳೆಯ ಕಾರ್ಯದಲ್ಲಿಮಕ್ಕಳ,ವೃದ್ಧರ ಪೋಷಣೆಯಲ್ಲಿ ಇದೆ,ಈ ಕಾರಣಕ್ಕಾಗಿ ನಿತ್ಯದ ಬದುಕಿನಲ್ಲಿ ಅಲ್ಪ ಸಮಯವನ್ನಾದರೂ ಸತ್ಸಂಗ ಕಾರ್ಯದಲ್ಲಿ ತೊಡಗಿಕೊಳ್ಳಿ,ಕಷ್ಟದಲ್ಲಿರುವ ನಿಮ್ಮ ಗೆಳೆಯರಿಗೆ ನಿರುದ್ಯೋಗದಲ್ಲಿರುವ ಬಾಲ್ಯಸ್ನೇಹಿತರಿಗೆ ಉದ್ಯೋಗ ಕೊಡುವ ಕಾರ್ಯದಲ್ಲಿ ಕೈಲಾಸವಿದೆ ಗುರುವಿಗೆ ಕೊಡುವ ಈ ಗೌರವ ಶ್ರೇಷ್ಠವಾದುದು ಮತ್ತು ಶ್ಲಾಘನೀಯವಾದುದು ಎಂದು ಅವರು ಹೇಳಿದರು
ಈ ಸಂದರ್ಭದಲ್ಲಿ ಮಾತನಾಡಿದ ಹಿರಿಯ ಶಿಕ್ಷಕರಾದ ವಿ.ಎಸ್.ಜೈನಾಪೂರ ನಾವು ಮತ್ತೊಬ್ಬರನ್ನು ಪ್ರೀತಿಸುವಕ್ಕಂತ ಮನೆಯ ಸದಸ್ಯರನ್ನು ಪ್ರೀತಿಸೋಣ,ಹಿರಿಯ ಜೀವಗಳ ಜೊತೆಗೆ ಕಾಲ ಕಳೆಯುವ ಕಾರ್ಯ ಮಾಡೋಣ ಅಂದಾಗ ಮಾತ್ರ ಈ ಜೀವನ ಸಾರ್ಥಕ ಕಾಣುತ್ತದೆ, ನಮ್ಮ ಬಳಿ ಕಲಿತ ಶಿμÀ್ಯರಾದ ನೀವು ಕೃಷಿ, ವರ್ತಕರು, ಇಂಜಿನಿಯರ್,  ಡಾಕ್ಟರ್, ಉಪನ್ಯಾಸಕರು,  ಶಿಕ್ಷಕರು,  ಉತ್ತಮ ಗೃಹಿಣಿಯರು, ಹೀಗೆ ನಿಮ್ಮದೇ ಆದ ಕ್ಷೇತ್ರದಲ್ಲಿ ತಾವು ಸಾಧನೆ ಮಾಡಿರುವುದು ಅತ್ಯಂತ ಸಂತೋμÀವಾಗಿದೆ. ನೀವೆಲ್ಲರೂ ಒಟ್ಟಾಗಿ ಸೇರಿರುವುದು ಪುನಹ ನಮಗೆ ಹೈಸ್ಕೂಲ್ ನೆನಪನ್ನು ತಂದುಕೊಟ್ಟಿದೆ.
ಕಾರ್ಯಕ್ರಮದಲ್ಲಿ,ರಾಜು ಬಿಸರಡ್ಡಿ, ಶ್ರೀ  ಶಿರಡಿ ಸಾಯಿನಿಕೇತನ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾದ ರಾಜೇಶ ವಾಲಿ,ಅಪ್ಪಣ್ಣ ರೂಗಿ,ಡಾ.ಸುನೀಲ ಪೂಜಾರಿ,ಶ್ರೀಶೈಲ ಹೂಗಾರ,ಗೋವಿಂದ ಕೊಡಗ,ರಾಚಯ್ಯ ವಸ್ತ್ರದ, ವಿಮಲಾ ಗಜರಗಾಂವಕರ, ಮಂಜು ಸವದಿ, ಸುರೇಶ ರಾಮತೀರ್ಥ, ರಾಮ ಘೋರ್ಪಡೆ,ಡಾ.ರವಿ.ಲಕ್ಷನ್ನೆವರ, ಮಹಾದೇವ ಶಿಂಧೆ, ಗೋಪಾಲ ಮಿರಜಕರ, ಲತಾ ಹೊಕ್ರಾಣಿ, ಮಹಾನಂದಾ ಕರೆಹೊನ್ನ,ಮಂಜುಳಾ ನರಸನ್ನವರ ಇದ್ದರು. ನಿವೃತ್ತ ಶಿಕ್ಷಕರಾದ ಎಸ್.ಎಸ್.ಉಕ್ಕಲಿ, ಎಸ್.ಡಿ.ಬಿಳ್ಳೂರ, ಎಂ.ವ್ಹಿ.ದಾಸರಡ್ಡಿ, ಎಲ್.ಕೆ.ಹಾದಿಮನಿ, ಜಿ.ಆರ್.ಯಡಹಳ್ಳಿ, ಎಸ್.ಬಿ.ಹೆಬ್ಲಿ, ಎಸ್.ಆರ್.ಬೋಳಿಶೆಟ್ಟಿ, ಕೆ.ವ್ಹಿ.ಬಲಕುಂದಿ, ಮೀನಾಕ್ಷಿ ಜುಗಳೂರ, ,ಶಿಕ್ಷಕರಾದ ಬಿ.ಆರ್. ಕಾಳಗಿ,  ವಿಜಯಾ ಹಂಗರಗಿ, ಶಿವಲೀಲಾ ಕರೆಹೊನ್ನ, ಶಿವು ಹಿಪ್ಪರಗಿ, ಬಸಪ್ಪ ಡಂಗಿ, ಬಸು ದಂಡಿನವರ, ಪತ್ರಯ್ಯ ಕಡದಳ್ಳಿಮಠ ಸ್ಭೆರಿದಂತೆ ಎಲ್ಲ ನಿವೃತ್ತ ಹಾಗೂ ವೃತ್ತಿನಿರತ ಶಿಕ್ಷಕರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮಕ್ಕೂ ಮುಂಜೆ ಹಳೆಯ ಸ್ನೇಹಿತರ ಪರಿಚಯ ಹಾಗೂ ಗುಂಪು ಛಾಯಾಚಿತ್ರ,ಹಾಗೂ ಅತಿಥಿಗಳು ಮತ್ತು ಹಿರಿಯ ಶಿP್ಪ್ಷಕರಿಗೆ ಪುಷ್ಪವೃಷ್ಠಿ ಕಾರ್ಯಕ್ರಮ ಜರುಗಿತು.ಸುಮಾರು 500ಕ್ಕೂ ಅಧಿಕ ಹಳೆಯ ವಿದ್ಯಾರ್ಥಿಗಳು ಭಾಗಿಯಾಗಿದ್ದರು.ಡಾ.ಸುನಿಲ ಪ್ರಜಾರಿ ಸ್ವಾಗತಿಸಿದರು,ರಾಚಯ್ಯ ವಸ್ತ್ರದ ನಿರೂಪಿಸಿ ವಂದಿಸಿದರು

ಸುದ್ದಿ ಓದಿ