ಗಾಣಿಗೆ ಸಮಾಜಕ್ಕೆ ಪ್ರತ್ಯೇಕ ನಿಗಮ ಶಾಸಕ ಸವದಿಗೆ ಸನ್ಮಾನ
ಮಹಾಲಿಂಗಪುರ : ರಾಜ್ಯ ಸರ್ಕಾರ ಗಾಣಿಗ ಸಮಾಜಕ್ಕೆ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪಿಸಿದ ಪ್ರಯುಕ್ತ ಮಹಾಲಿಂಗಪುರ ಗಾಣಿಗ ಸಮಾಜವತಿಯಿಂದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಕೃತಜ್ಞತೆ ಸಲ್ಲಿಸಿ ತೇರದಾಳ ಮತಕ್ಷೇತ್ರದ ಶಾಸಕ ಸಿದ್ದು ಸವದಿ ಅವರಿಗೆ ಸನ್ಮಾನ ಮಾಡಿದರು.ಈ ಸಂದರ್ಭದಲ್ಲಿ ಮಹಾಲಿಂಗಪುರ ನಗರದ ಗಾಣಿಗ ಸಮಾಜದ ಮುಖಂಡರಾದ ಈಶ್ವರ ಆದೇಪ್ಪನವರ, ಶಿವಪ್ಪ ಆದೆಪ್ಪನವರ, ಬಸವರಾಜ ಗಾಣಿಗೇರ, ಬಸವರಾಜ್ ಹುಕ್ಕೇರಿ,ಡಾ ವಿನೋದ್ ಮೇತ್ರಿ,ಮಹಾಲಿಂಗಪ್ಪ ಇಂಗಳಗಿ, ಮಹಲಿಂಗಪ್ಪ ಕಲಾಗತಿ, ಮಲ್ಲು ಭೂಸಣ್ಣವರ್, ಮಹಾಲಿಂಗ ಬುದ್ನಿ,ಚೆನ್ನಪ್ಪ ಸ ಕಲಾಗತಿ,ಬಸವರಾಜ ತೇಲಿ, ತಮ್ಮನಪ್ಪ ಆದೆಪ್ಪನವರ್, ಚೆನ್ನಪ್ಪ ಆದೆಪ್ಪನವರ್, ಇನ್ನೂ ಸಮಾಜದ ಹಿರಿಯರು ಮತ್ತು ಯುವಕರು ಭಾಗಿಯಾಗಿದ್ದರು.