ಬೆಳಗಾವಿಗೆ ಬರುತ್ತಿದ್ದ ವ್ಯಕ್ತಿಗೆ ಬಸ್ ನಲ್ಲಿ ಹೃದಯಾಘಾತ : ಬಸ್ ನಲ್ಲೆ ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದ ಚಾಲಕ, ನಿರ್ವಾಹಕ : ಕೊನೆಗೆ ಬದುಕಲಿಲ್ಲ ಬಡಜೀವ

ಬೆಳಗಾವಿಗೆ ಬರುತ್ತಿದ್ದ ವ್ಯಕ್ತಿಗೆ ಬಸ್ ನಲ್ಲಿ ಹೃದಯಾಘಾತ : ಬಸ್ ನಲ್ಲೆ ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದ ಚಾಲಕ, ನಿರ್ವಾಹಕ : ಕೊನೆಗೆ ಬದುಕಲಿಲ್ಲ ಬಡಜೀವ

ಬೆಳಗಾವಿ : ಖರೀದಿಗಾಗಿ ಬಸ್ ನಲ್ಲಿ ಬೆಳಗಾವಿಗೆ ಬರುತ್ತಿದ್ದ ಬಡ ವ್ಯಾಪಾರಿ ಒಬ್ಬರಿಗೆ ಬಸ್ ನಲ್ಲಿ ಹೃದಯಾ ಘಾತವಾಗಿದ್ದು, ಕೂಡಲೆ ಬಸನಲ್ಲೆ ಆ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸುವ ಮೂಲಕ ಬಸ್ ನ ಚಾಲಕ, ನಿರ್ವಾಹಕ ಮಾನವೀಯತೆ ಮರೆದಿದ್ದರೂ ಆ ವ್ಯಕ್ತಿಯ ಪ್ರಾಣ ಪಕ್ಷಿಯು ಮಾರ್ಗ ಮಧ್ಯದಲ್ಲಿ ಹಾರಿ ಹೋಗಿರುವ ಘಟನೆ ಬೆಳಗಾವಿ ಹತ್ತಿರ ಶನಿವಾರ ಸಂಭವಿಸಿದೆ.

    ಹೌದು ಓದುಗರೇ ಇಂತಹದೊಂದು‌ ದುಃಖದ‌ ಸಂಗತಿ ಬೆಳಗಾವಿಯ ಮಚ್ಚೆ ಬಳಿ ನಡೆದಿರುವ ಬಗ್ಗೆ ವರದಿಯಾಗಿದೆ. ಜಿಲ್ಲೆಯ ಖಾನಾಪೂರ ತಾಲ್ಲೂಕಿನ ಬೀಡಿ ಗ್ರಾಮದ ಪುಟ್ಟ ಅಂಗಡಿಯನ್ನು ನಡೆಸುತ್ತಿದ್ದ  ವ್ಯಾಪಾರಿಯೋರ್ವರು ಅಂಗಡಿಯ ದಿನಸಿ ಖರೀದಿಗಾಗಿ ಬೀಡಿಯಿಂದ ಬಸ್ ನಲ್ಲಿ ಬೆಳಗಾವಿಗೆ ಬರುತ್ತಿದ್ದರು. 

   ಆದರೆ ಬಸ್ಸು ಬೆಳಗಾವಿಯ ಮಚ್ಚೆ ಬಳಿ ಬರುತ್ತಿದ್ದಂತೆ ಆ ವ್ಯಾಪಾರಿಗೆ ಹೃದಯಾಘಾತ ಸಂಭವಿಸಿದೆ ಎನ್ನಲಾಗಿದೆ. ಬಳಿಕ ಪ್ರಜ್ಞಾಹೀನ ನಾಗಿದ್ದ ಆ ವ್ಯಾಪಾರಿಯನ್ನು ಅದೇ ಬಸ್ ನಲ್ಲಿ ಚಾಲಕ, ನಿರ್ವಾಹಕರಿಬ್ಬರು ಸೇರಿ ಆ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು ಎನ್ನಲಾಗಿದೆ. ಆದರೆ ಆಸ್ಪತ್ರೆಯ ವೈದ್ಯರು ಆ ಬಡ ವ್ಯಾಪಾರಿ ತೀವ್ರ ಹೃದಯಾ ಘಾತದಿಂದ ಮೃತರಾಗಿದ್ದಾರೆ ಎಂದು ತಿಳಿಸಿದ್ದಾರೆ ಎನ್ನಲಾಗಿದೆ.

   ಈ ಬಡ ವ್ಯಾಪಾರಿಯೂ ಬೇರೆ ರಾಜ್ಯದವನಾಗಿದ್ದು, ಈತ ಸುಮಾರು ವರ್ಷಗಳಿಂದ ಬೀಡಿ ಗ್ರಾಮದಲ್ಲಿ ಪುಟ್ಟ ಅಂಗಡಿಯನ್ನು ಇಟ್ಟುಕೊಂಡು ಜೀವನ ಸಾಗಿಸುತ್ತಿದ್ಸನು ಎಂದು ಹೇಳಲಾಗಿದೆ.‌

   

ಸುದ್ದಿ ಓದಿ