ಮಹಲಿಂಗಪುರ

ವಿಶ್ವಕೋಶ ಓದುವ ವ್ಯಕ್ತಿ ಜ್ಞಾನದ ಖನಜವಾಗುತ್ತಾನೆ : ಮುಲ್ಲಾ

ವಿಶ್ವಕೋಶ ಓದುವ ವ್ಯಕ್ತಿ ಜ್ಞಾನದ ಖನಜವಾಗುತ್ತಾನೆ : ಮುಲ್ಲಾ

ಮಹಾಲಿಂಗಪುರ : ಮಾತೃಭಾಷೆಯೊಂದಿಗೆ ವಿಶ್ವಕೋಶವನ್ನು ಓದಿದಾಗ ಆ ವ್ಯಕ್ತಿ ಜ್ಞಾನದ ಖನಜವಾಗುವುದರಲ್ಲಿ ಯಾವುದೇ ಸಂಶಯವೇ ಇಲ್ಲ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್ ಎಂ. ಮುಲ್ಲಾ ಹೇಳಿದರು. 

ಬುಧವಾರ ದಾರೂಲ್ ಉಲೂಮ ಮಹಮ್ಮದೀಯ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ಶಾಲಾ ವಾರ್ಷಿಕೋತ್ಸವದ ಸ್ನೇಹ ಸಮ್ಮೇಳನ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು. 

ಪಾಲಕರು ತಮ್ಮ ಜೀವನ ಜಂಜಡ ಸಲುವಾಗಿ ಮಕ್ಕಳ ಶೈಕ್ಷಣಿಕ ಹಂತಗಳನ್ನು ಮೊಟಕುಗೊಳಿಸಬಾರದು.ಮಕ್ಕಳ ಭವಿಷ್ಯವನ್ನು ಹಾಳು ಮಾಡಿದ ಪಾಪ ತಟ್ಟುತ್ತದೆ. ಅವರಿಗೆ ದೇಶದ ಉತ್ತಮ ನಾಗರಿಕರಾಗಲು ಮಾನವೀಯ ಮೌಲ್ಯಗಳ ಜೊತೆಯಲ್ಲಿ ಉತ್ತಮ ಶಿಕ್ಷಣವನ್ನು ಸಹ ಒದಗಿಸಿಕೊಡಬೇಕು. ಯಾವುದೇ ಒಂದು ಸಮುದಾಯ ಅಭಿವೃದ್ಧಿ ಹೊಂದಿದೆ ಎಂದರೆ ಅಲ್ಲಿ ಶಿಕ್ಷಣದ ಪಾತ್ರ ಪ್ರಮುಖವಾಗಿರುತ್ತದೆ. ಆದ್ದರಿಂದ ಹೆಣ್ಣು ಮಕ್ಕಳಾದಿಯಾಗಿ ಮನೆಯ ಸದಸ್ಯರೆಲ್ಲರೂ ಸುಶಿಕ್ಷಿತರಾಗಬೇಕು. ಇದರಿಂದ ಉತ್ತಮ ನಾಗರಿಕರಾಗಿ ದೇಶ ಕಟ್ಟುವ ಕೆಲಸವಾಗುತ್ತದೆ ಎಂದರು. 

ಇದೆ ಸಂದರ್ಭದಲ್ಲಿ ಸಂಸ್ಥೆಯ ಸದಸ್ಯರಾದ ಮೌ.ಜಕ್ರಿಯಾಸಾಹಬ ಮಾತನಾಡಿ ಶಿಕ್ಷಣ ಪಡೆಯದ ವ್ಯಕ್ತಿಯಿಂದ ಸಮುದಾಯದ ಏಳಿಗೆ ಅಸಾಧ್ಯ. ಆದ್ದರಿಂದ ಫಲಾಫೀಕ್ಷೆ ಇಲ್ಲದೆ ಶೈಕ್ಷಣಿಕ ಅವಶ್ಯಕತೆ ಇದ್ದಲ್ಲಿ ಪ್ರತಿಯೊಬ್ಬನೂ ಕೈಜೋಡಿಸಬೇಕು, ಇದು ಎಲ್ಲರ ಆದ್ಯ ಕರ್ತವ್ಯವೂ ಆಗಿದೆ ಎಂದರು.  

ಶಾಲೆಯ ವಿದ್ಯಾರ್ಥಿ/ ನಿಯರಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಅಧ್ಯಕ್ಷತೆಯನ್ನು ಸಂಸ್ಥೆಯ ನಜೀರ್ ಅತ್ತಾರ ವಹಿಸಿ, ಮುಖ್ಯ ಅತಿಥಿಗಳಾಗಿ ಶಿಕ್ಷಣ ಇಲಾಖೆಯ ಎಂ ಆರ್ ಛಬ್ಬಿ, ಎಸ್ ಎಂ.ಕುರ್ಣಿ, ಅತಿಥಿಗಳಾಗಿ ಶ್ರೀಮತಿ ಎಸ್ ಎ. ಸೌದಾಘರ, ಎಸ್ ಡಿ. ಸಾವಳಗಿ, ಎ ಎನ್‌.ನದಾಫ, ವಾಯ್ ಎಸ್‌.ಸವನೂರ, ಎನ್ ಎ.ಕಲಾದಗಿ, ನಿಯಾಜ್ ಪಟೇಲ್, ಮೂಸಾ ಆಲಾಸ್, ಏಜಾಜ್ ಬಾಗೇವಾಡಿ, ಎ ಎಂ. ಕೆಂಬಾವಿ, ಮೌಲಾಲಿ ಮುಜಾವರ, ಜಮೀರ ಯಕ್ಸಂಬಿ, ಬಿ. ಧಾರವಾಡ್ಕರ, ಎಚ್ ಜಿ.ಮುಲ್ಲಾ, ಎಂ ಎಂ.ಪೆಂಡಾರಿ, ಆಗಮಿಸಿ, ಉಪಾಧ್ಯಕ್ಷ ಅಖ್ತರ್ ಯಕ್ಸಂಬಿ, ಕಾರ್ಯದರ್ಶಿ ಡಾ. ಜೆ ಯಕ್ಸಂಬಿ, ಸಹ ಕಾರ್ಯದರ್ಶಿ ಎಂ. ಜೀರಗಾಳ, ಡಿ. ನಗಾರ್ಚಿ, ಎ. ಪೆಂಡಾರಿ, ಎಚ್‌. ಶಿಲೆದಾರ, ಎಸ್‌. ನದಾಫ, ಮೌ.ಸಿರಾಜ್, ಎ. ನದಾಫ, ಎಸ್‌. ರೋಣ, ಎ. ಸಂಗತ್ರಾಸ ಇದ್ದರು. ನಿರೂಪಣೆ ಮುಖ್ಯ ಗುರುಗಳಾದ ಎಂ ಬಿ ಪಣಿಬಂದ ನಿರೂಪಿಸಿ, ವಂದಿಸಿದರು. 


ಸುದ್ದಿ ಓದಿ