ವಿದ್ಯುತ್ ಬೆಲೆ ಏರಿಕೆ ಖಂಡಿಸಿ ಇಂದು ಬೃಹತ್ ಪ್ರತಿಭಟನಾ ರ್ಯಾಲಿ.
ಮಹಾಲಿಂಗಪುರ: ದಿಢೀರ್ ವಿದ್ಯುತ್ ದರ ಏರಿಕೆ ಕಂಡಿದ್ದು ಹೊಸ ದರದಂತೆ ದುಪ್ಪಟ್ಟಿಗಿಂತ ಅಧಿಕ ಬಿಲ್ ಬಂದಿರುವಿದರಿಂದ ಮಹಾಲಿಂಗಪುರ ಮತ್ತು ಸುತ್ತಮುತ್ತಲಿನ ರೈತರು,ನೇಕಾರರು,ಕೂಲಿಕಾರ್ಮಿಕ ಸೇರಿದಂತೆ ಸಮಸ್ತ ನಾಗರಿಕರು ನಾಗರಿಕ ಹಿತ ರಕ್ಷಣಾ ಸಮಿತಿ ನೇತೃತ್ವದಲ್ಲಿ ಜು.14 ರ ಬುಧವಾರ ಬೀದಿಗಿಳಿದು ಹೋರಾಟ ನಡೆಸಲಿದ್ದಾರೆ ಎಂದು ನಾಗರಿಕ ಹಿತ ರಕ್ಷಣಾ ವೇದಿಕೆ ಅಧ್ಯಕ್ಷ ಶೇಖರ ಅಂಗಡಿ ಹೇಳಿದರು.
ಪ್ರತಿಭಟನಾ ರ್ಯಾಲಿ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಬಡವರು ತಿಂಗಳಿಡೀ ದುಡಿಯುವ ಪೂರ್ಣ ಹಣವನ್ನು ಕೇವಲ ವಿದ್ಯುತ್ ಬಿಲ್ ಕಟ್ಟಲು ಸುರಿಯುವ ಸ್ಥಿತಿ ಒದಗಿದ್ದು ಅವರ ಬದುಕು ಬೀದಿಗೆ ಬರುವಂತಾಗಿದೆ ಆದ್ದರಿಂದ ವಿದ್ಯುತ್ ದರ ಬೆಲೆ ಏರಿಕೆ ಖಂಡಿಸಿ ಬುಧವಾರ ಬೆಳಿಗ್ಗೆ 9 ಗಂಟೆಗೆ ಸ್ಥಳೀಯ ಬಸವೇಶ್ವರ ವೃತ್ತದಿಂದ ಜೋಡು ರಸ್ತೆ ಮುಖಾಂತರ ನಡುಚೌಕಿ, ಜವಳಿ ಬಜಾರದ ಮೂಲಕ ಕೆ ಇ ಬಿ ವರೆಗೆ ಬೃಹತ್ ಪ್ರತಿಭಟನೆ ನಡೆಸಿ ಸಕರ್ಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಹನಮಂತ ಜಮಾದಾರ, ಮಹಾಲಿಂಗ ಶಿವಣಗಿ, ಮುತ್ತಪ್ಪ ಕುಂದ್ರಾಳ,ವಿಜಯಕುಮಾರ ಸಬಕಾಳೆ,ನಂದು ಲಾತೂರ,ಚಿದಾನಂದ ಚಿಂದಿ, ಶಶಿಧರ ಹಳ್ಳಿ, ಗೋಪಾಲ ಯಾದವಾಡ, ಸುಭಾಸ್ ಮಡಿವಾಳ, ಕಲ್ಲಪ್ಪ ನುಚ್ಚಿ, ಮೌನೇಶ ಬಡಿಗೇರ, ಚನ್ನಪ್ಪ ಬಂಡಿವಡ್ಡರ,ಶಿವಾನಂದ ಹೂಗಾರ ಇತರರಿದ್ದರು