ಮಹಲಿಂಗಪುರ

ಸೈದಾಪುರ ಕ್ಲಸ್ಟರ್ ನ ಅದ್ಧೂರಿ ಕಲಿಕಾ ಹಬ್ಬ.

ಸೈದಾಪುರ ಕ್ಲಸ್ಟರ್ ನ ಅದ್ಧೂರಿ ಕಲಿಕಾ ಹಬ್ಬ.

ಮಹಾಲಿಂಗಪುರ: ಸಮೀಪದ ಕೆಸರಗೊಪ್ಪ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ 2022-23ನೇ ಸಾಲಿನ ಕಲಿಕಾ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಯಿತು. ಬುಧವಾರ ಸೈದಾಪುರ ಕ್ಲಸ್ಟರ್ ನ 10 ಸರ್ಕಾರಿ ಶಾಲೆಗಳ ಆಯ್ದ  ವಿದ್ಯಾರ್ಥಿನಿಯರು ಮತ್ತು ಶಿಕ್ಷಕಿಯರು ಇಳಕಲ್ ಸೀರೆ ಉಟ್ಟ ಕುಂಭ ಮೇಳ, ಅಲಂಕೃತ ಎತ್ತಿನ ಗಾಡಿಗಳ ಭವ್ಯ ಮೆರವಣಿಗೆ ವಾದ್ಯ ಮೇಳಗಳೊಂದಿಗೆ ಶ್ರೀ ಸೀಮಿ ಲಕ್ಷ್ಮೀ ದೇವಾಲಯದಿಂದ ಶಾಲಾ ಆವರಣದವರೆಗೆ ಜರುಗಿತು.  

ಎಸ್ ಡಿ ಎಮ್ ಸಿ ಅಧ್ಯಕ್ಷ ವಿಠ್ಠಲ ಬನಾಜ ಉದ್ಘಾಟಿಸಿದರು, ತಾಲೂಕಾ ದೈಹಿಕ ಪರವೀಕ್ಷಕ ಎಸ್‌.ಎಂ.ಕುರಣಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಗ್ರಾಪಂ ಸದಸ್ಯ ಮಾರುತಿ ಕರೋಶಿ, ಮುಖಂಡ ಶ್ರೀಶೈಲ ಉಳ್ಳಾಗಡ್ಡಿ ಮಾತನಾಡಿದರು.  ಗ್ರಾಪಂ ಉಪಾಧ್ಯಕ್ಷ ಹನುಮಂತ ಮೋಪಗಾರ, ಪರ​‍್ಪ ಬ್ಯಾಕೋಡ, ಭೀಮಶಿ ಸಸಾಲಟ್ಟಿ, ಮಹಾಲಿಂಗ ಶಿರೋಳ, ಮಹಾಲಿಂಗ ಕಡಕಬಾವಿ, ಬಸಪ್ಪ ಜಾಲಿಕಟ್ಟಿ, ಶಿವಲಿಂಗಪ್ಪ ಕಾರಜೋಳ, ಅಲ್ಲಪ್ಪ ದಡ್ಡಿಮನಿ, ಬಸವರಾಜ ಮರನೂರ, ಬಸವರಾಜ ಮಿರ್ಜಿ, ಮಹೇಶ ತೇಲಿ, ಲಾಲಸಾಬ ಪೆಂಡಾರಿ, ಶಿವಪ್ಪ ಜಾಧವ, ಮಲ್ಲಿಕಾರ್ಜುನ ಖಾನಟ್ಟಿ, ಮಲ್ಲು ಬಾಡಗಿ, ಮಹಾದೇವ ಕಲ್ಲಟ್ಟಿ, ಬಸಪ್ಪ ಹುದ್ದಾರ, ಸಿದ್ದಪ್ಪ ದಡ್ಡಿಮನಿ, ನಾಗಪ್ಪ ಉತ್ತೂರ, ಮಲ್ಲಪ್ಪ ಭದ್ರಶೆಟ್ಟಿ, ಶ್ರೀಶೈಲ ಚಿನಗುಂಡಿ, ಬಸವರಾಜ ಜಿಡ್ಡಿಮನಿ, ಚನ್ನಪ್ಪ ಬನಹಟ್ಟಿ, ಭಗವಂತ ಸೋನಾರ, ಬಾಳಪ್ಪ ದಡ್ಡಿಮನಿ, ಮಲ್ಲಪ್ಪ ಢವಳೇಶ್ವರ, ಸಿಆರ್ ಪಿಗಳಾದ ಟಿ. ಎಂ. ನಾಯಕವಾಡಿ, ಎಸ್‌.ಎನ್‌.ಬ್ಯಾಳಿ, ವೈ.ಎಸ್‌.ಲಮಾಣಿ ಇತರರಿದ್ದರು.  ಮುಖ್ಯೋಪಾಧ್ಯಾಯ ಸಿ. ವ್ಹಿ. ಚೌಧರಿ ಸ್ವಾಗತಿಸಿ, ಎಸ್‌.ಎಸ್‌.ಹಾದಿಮನಿ ನಿರೂಪಿಸಿದರು.  ಸಂಪನ್ಮೂಲ ವ್ಯಕ್ತಿಗಳಾದ ಡಿ.ಎಚ್‌.ಮುಜಾವರ, ವಿಠ್ಠಲ ಹಡಪದ, ಎಸ್‌. ಐ. ಬಡಿಗೇರ, ವೀಣಾ ಕುಲಕರ್ಣಿ, ಜಯಶ್ರೀ ಪ್ರಭಣ್ಣವರ ತರಬೇತಿ ನೀಡಿ ಮಕ್ಕಳಿಗೆ ಹಾಡು-ಮಾಡು, ಹಾಡು-ಆಡು, ಊರು ತಿಳಿಯೋಣ, ಕಾಗದ ಕತ್ತರಿ ಮುಂತಾದ ಪ್ರಾತ್ಯಕ್ಷಿಕ ಜ್ಞಾನವನ್ನು ಒದಗಿಸಿದರು. ಸ್ಥಳೀಯ ಪ್ರೌಢಶಾಲಾ ವಿದ್ಯಾರ್ಥಿನಿಯರು ಇಳಕಲ್ ಸೀರೆ ಉಟ್ಟು, ಆರತಿ ಎತ್ತಿ ಆಗಮಿಸಿದ ಸರ್ವರನ್ನು ಸ್ವಾಗತಿಸಿದ್ದು ಗಮನ ಸೆಳೆಯಿತು. 


ಸುದ್ದಿ ಓದಿ