ಸತ್ಕಾರ್ಯ ಮಾಡಿ ಜನರ ಪ್ರೀತಿ ಗಳಿಸಿ: ಚಿನ್ಮಯಾನಂದ ಶ್ರೀ
ಮಹಾಲಿಂಗಪುರ 22: ಸಾರ್ವಜನಿಕರು ನೀಡಿದ ಅಧಿಕಾರದ ಅವಧಿಯ ಸದುಪಯೋಗವಾಗಬೇಕಿದ್ದರೆ ಜನಪ್ರತಿನಿಧಿಗಳು ಸಮಾಜದ ಅಭಿವೃದ್ದಿ ಮತ್ತು ಸತ್ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಆಗ ತಾವು ಜನತೆಯ ಪ್ರೀತಿಗೆ ಪಾತ್ರರಾಗುತ್ತಿರಿ ಎಂದು ಹಾಲುಮತ ಸಮಾಜದ ಗುರುಗಳಾದ ಚಿನ್ಮಯಾನಂದ ಸ್ವಾಮೀಜಿ ಹೇಳಿದರು.
ಬುಧವಾರ ಪಟ್ಟಣದ ಕರಿಸಿದ್ದೇಶ್ವರ ದೇವಸ್ಥಾನದಲ್ಲಿ ರಬಕವಿ-ಬನಹಟ್ಟಿ ತಾಲೂಕಾ ಕುರುಬರ ಸಂಘ, ತೇರದಾಳ ಮತಕ್ಷೇತ್ರ ಕುರುಬರ ಕ್ಷೇಮಾಭಿವೃದ್ಧಿ ಸಂಘ, ಹಾಲುಮತ ಮಹಾಸಭಾ ರಬಕವಿ-ಬನಹಟ್ಟಿ, ರಬಕವಿ-ಬನಹಟ್ಟಿ ಕುರುಬರ ಸಂಘಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ತೇರದಾಳ ಮತಕ್ಷೇತ್ರ ವ್ಯಾಪ್ತಿಯ ವಿವಿಧ ಗ್ರಾಪಂ, ಪುರಸಭೆ, ನಗರಸಭೆ, ಪಿಕೆಪಿಎಸ್ ಚುನಾಯಿತ ಹಾಲುಮತ ಕುರುಬ ಸಮಾಜದ ಜನಪ್ರತಿನಿಧಿಗಳ ಸನ್ಮಾನ ಸಮಾರಂಭದ ಸಾನಿಧ್ಯವಹಿಸಿ ಮಾತನಾಡಿದ ಅವರು ಜನಪ್ರತಿನಿಧಿಗಳು ಸಮಾಜದ ಅಭಿವೃದ್ಧಿ, ಬಡಮಕ್ಕಳಿಗೆ ಶಿಕ್ಷಣ ಆಲ್ಲದೆ ಭವಿಷ್ಯದ ಚಿಂತನೆಗಳನ್ನು ಅಳವಡಿಸಿಕೊಂಡು, ಅಧಿಕಾರದಲ್ಲಿರುವವರೆವಿಗೂ ಉತ್ತಮ ಕೆಲಸಗಳನ್ನು ಮಾಡಿ ಜನರ ಪ್ರೀತಿಗೆ ಪಾತ್ರರಾಗಬೇಕು ಎಂದರು.
ಸಮಾಜದ ಮುಖಂಡ ರಂಗನಗೌಡ ಪಾಟೀಲ, ಅಲ್ಲಪ್ಪ ಪೂಜಾರಿ ಮಾತನಾಡುತ್ತಾ ಜನಪ್ರತಿನಿಧಿಗಳಾದವರು ಸಮಾಜದ ಅಭಿವೃದ್ಧಿಗೆ ಶ್ರಮಿಸಿ ಸಮಾಜದ ಋಣ ತೀರಿಸಿ ಎಂದರು.
ತೇರದಾಳ ಮತಕ್ಷೇತ್ರ ವ್ಯಾಪ್ತಿಯ ವಿವಿಧ ಗ್ರಾಪಂ, ಪುರಸಭೆ, ನಗರಸಭೆ, ಪಿಕೆಪಿಎಸ್ ಚುನಾಯಿತ ಹಾಲುಮತ ಕುರುಬ ಸಮಾಜದ ಸುಮಾರು 80ಕ್ಕೂ ಅಧಿಕ ಜನಪ್ರತಿನಿಧಿಗಳನ್ನು ಸನ್ಮಾನಿಸಲಾಯಿತು.
ಕನಕದಾಸ ಸೊಸೈಟಿ ಅಧ್ಯಕ್ಷ ಮಹಾಲಿಂಗಪ್ಪ ಜಕ್ಕನ್ನವರ ಅಧ್ಯಕ್ಷತೆವಹಿಸಿದ್ದರು. ರಾಯಪ್ಪ ಪೂಜಾರಿ, ಗೌಡಪ್ಪಗೌಡ ಪಾಟೀಲ, ಗಂಗಾಧರ ಮೇಟಿ, ಮಹಾಲಿಂಗಪ್ಪ ಸನದಿ, ಮಲ್ಲಪ್ಪ ಸಿಂಗಾಡಿ, ಜಿ.ಆರ್.ಶೇಗುಣಸಿ, ಶಿವಗೊಂಡ ಸನದಿ, ಮಾಳು ಹಿಪ್ಪರಗಿ, ಸಿದ್ದರಾಮ ಕಾಗಿ, ಪಾಂಡಪ್ಪ ಜಾಲಿಕಟ್ಟಿ, ಪ್ರಭು ತಂಬೂರಿ, ಮಹಾಲಿಂಗ ಮಾಯನ್ನವರ, ಜ್ಯೋತೆಪ್ಪ ಕಪರಟ್ಟಿ, ಲಕ್ಷ್ಮಣ ಕಿಶೋರಿ, ಅಲಗೌಡ ಪಾಟೀಲ, ವಿಠ್ಠಲ ಸಂಶಿ, ಸತ್ಯಪ್ಪ ಹುದ್ದಾರ, ಪರಶುರಾಮ ಕೊಣ್ಣುರ, ಸಿದ್ರಾಮ ಯರಗಟ್ಟಿ, ಭೀಮಸಿ ತಿಮ್ಮಾಪೂರ, ರಾಮನಗೌಡ ಪಾಟೀಲ, ವಿಠ್ಠಲ ಢವಳೇಶ್ವರ, ಮಲ್ಲಪ್ಪ ಬನಾಜ, ಶ್ರೀಶೈಲ ಅವಟಿ ಸೇರಿದಂತೆ ಹಲವರಿದ್ದು ವರದಿಗಾರ ಲಕ್ಷ್ಮಣ ಕಿಶೋರ ನಿರೂಪಿಸಿ, ಜೋತ್ಯಪ್ಪ ಕಪರಟ್ಟಿ ವಂದಿಸಿದರು.