ಮಹಲಿಂಗಪುರ

ಮಹಾಲಿಂಗೇಶ್ವರರ ಅಷ್ಟಲಿಂಗ ಮುದ್ರೆಗಳ ಜಾತ್ರೆ

ಮಹಾಲಿಂಗೇಶ್ವರರ ಅಷ್ಟಲಿಂಗ ಮುದ್ರೆಗಳ ಜಾತ್ರೆ

ಮಹಾಲಿಂಗಪುರ 17: ಪವಿತ್ರ ಶ್ರಾವಣ ಮಾಸದ ಎರಡನೆಯ ಸೋಮವಾರದಂದು ಐತಿಹಾಸಿಕ ಹಿನ್ನೆಲೆಯುಳ್ಳ ಪಟ್ಟಣದ ಶ್ರೀಗುರು ಮಹಾಲಿಂಗೇಶ್ವರರ ಅಮೃತ ಹಸ್ತದಿಂದ ಸ್ಥಾಪಿತಗೊಂಡ ಅಷ್ಟಲಿಂಗ ಮುದ್ರೆಗಳ ಜಾತ್ರೆ ಪ್ರತಿವರ್ಷದಂತೆ ಈ ವರ್ಷವೂ ಜರುಗಿತು. 

ಶ್ರೀಗುರು ಮಹಾಲಿಂಗೇಶ್ವರ ದೇವಸ್ಥಾನದಿಂದ ಅಕ್ಕಿಮರಡಿ ರಸ್ತೆಯಲ್ಲಿರುವ ಐತಿಹಾಸಿಕ ಲಿಂಗಮುದ್ರೆಗೆ ನಂದಿಕೋಲುಗಳನ್ನು ಕರಡಿ ಮಜಲಿನೊಂದಿಗೆ ಸದ್ಭಕ್ತರು ಬರಮಾಡಿಕ್ಕೊಂಡು, ಪೂಜೆ-ಪುನಸ್ಕಾರ ನಡೆಸಿ, ಜಾತ್ರೆಗೆ ಬಂದ ಸದ್ಭಕ್ತರಿಗೆ ಅನ್ನಪ್ರಸಾದವನ್ನು ಬಡಿಸಿದರು. 

ಈ ಸಮಯದಲ್ಲಿ ಗುರುಪಾದಯ್ಯ ಚಟ್ಟಿಮಠ, ಮಹಾಲಿಂಗಪ್ಪ ಬಾಳಿಕಾಯಿ ಮಹಾಲಿಂಗಪ್ಪ ಆಳ್ಳಿ ಮುದಕಪ್ಪ(ಕೊಡತಿ) ಮುದಕಪ್ಪ ಅರಮನಿ, ಬಸಪ್ಪ ಬ್ಯಾಳಿ, ಮಹಾಲಿಂಗಪ್ಪ ಕರೆನ್ನರ, ವಿಠ್ಠಲ ಹಲಗನಿ, ಅಶೋಕ ಬಾಳಿಕಾಯಿ, ಪರಶುರಾಮ ತೋಟಗಾರ, ಮಲ್ಲಪ್ಪ ಲಾತೂರ, ಮಹಾಲಿಂಗಪ್ಪ ಲಾತೂರ, ರಾಮಚಂದ್ರ ಕುಲಾಲ, ಬಸಪ್ಪ ಹೊಸಕೋಟೆ, ಶಂಕರ ವಜ್ಜರಮಟ್ಟಿ, ನಾಗಯ ಚಟ್ಟಿಮಠ ಮುಂತಾದವರಿದ್ದರು. 


ಸುದ್ದಿ ಓದಿ