ಜೀವನದುದ್ದಕ್ಕೂ ಅನೋನ್ಯತೆಯಿಂದ ಬದುಕಿ ಸಾವಿನಲ್ಲಿಯೂ ಒಂದಾದ ದಂಪತಿ
ಮಹಾಲಿಂಗಪುರ 06: ದಂಪತಿಗಳು ಜೀವನದುದ್ದಕ್ಕೂ ಅನೋನ್ಯತೆಯಿಂದ ಬದುಕಿ ಸಾವಿನಲ್ಲಿಯೂ ಒಂದಾಗಿರುವ ವಿಶಿಷ್ಟ ಘಟನೆ ಮಹಾಲಿಂಗಪುರದಲ್ಲಿ ಜರುಗಿದೆ. ಹರಳಯ್ಯ ಸಮಾಜದವರೂ ಪಟ್ಟಣದ ಬಸವ ನಗರದ ನಿವಾಸಿಗಳಾದ ಆದ ಪತಿ ದುಂಡಪ್ಪ ರಾಜಪ್ಪ ಸಣ್ಣಕ್ಕಿ (67) ಸತಿ ನಾಗವ್ವ ದುಂಡಪ್ಪ ಸಣ್ಣಕ್ಕಿ (62) ದಂಪತಿಗಳು ಕೇವಲ 12 ಗಂಟೆಗಳ ಅಂತರದ ಅವಧಿಯಲ್ಲಿ ಈ ಇಬ್ಬರೂ ಮೃತರಾಗಿದ್ದಾರೆ. ಇವರಿಗೆ ಇಬ್ಬರು ಹೆಣ್ಣು ಮಕ್ಕಳು, ಒಬ್ಬ ಮಗ ಇದ್ದು ತಮ್ಮ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಇವರು ಜೀವನದುದ್ದಕ್ಕೂ ಅನೋನ್ಯತೆಯಿಂದ ಬಾಳಿ ಬದುಕಿದ ಜೀವಿಗಳು. ಈಗೆ ಸುಮಾರು ಒಂದು ವಾರದ ಹಿಂದೆ ಪತಿ ದುಂಡಪ್ಪ ಅನಾರೋಗ್ಯಕ್ಕೀಡಾಗಿ ಮನೆಯಲ್ಲಿ ಶುಶ್ರೂಷೆ ಪಡೆಯುತ್ತಿದ್ದರು. ಇತ್ತೀಚೆಗಂತೂ ಅವರ ಆರೋಗ್ಯ ತೀರ ಹದಗೆಟ್ಟು ಅನ್ನ, ನೀರು ಬಿಟ್ಟಿರುವುದರಿಂದ ಚಿಂತಾಕ್ರಾಂತಳಾಗಿದ್ದಳು ಸತಿ. ನಾಗವ್ವಳು ಇನ್ನು ಪತಿರಾಯ ಬದುಕುವುದಿಲ್ಲವೆಂದೂ ಖಾತರಿಪಡಿಸಿಕೊಂಡು ಅಧೈರ್ಯಗೊಂಡು ಬುಧವಾರ ಸಂಜೆ 07ಗಂಟೆಗೆ ಅಸುನೀಗಿದ್ದಳು. ತಡರಾತ್ರಿ ಅವರ ಅಂತ್ಯಸಂಸ್ಕಾರವನ್ನೂ ಪರಿವಾರದವರು ನೆರವೇರಿಸಿದ್ದಾರೆ.ಆದರೆ ಬೆಳಗ್ಗೆ ಏಳುತ್ತಲೇ ಪರಿವಾರದವರಿಗೆ ಮತ್ತೊಂದು ಆಘಾತ ಕಾದಿತ್ತು. ಈ ವಿಷಯವನ್ನು ತಿಳಿದು ಮರುದಿವಸ ಗುರುವಾರ ಮುಂಜಾನೆ 07ಗಂಟೆಗೆ ಪತಿ ದುಂಡಪ್ಪ ಕೂಡ ತೀರಿಕೊಂಡಿದ್ದಾರೆ. ಇವರ ಅಂತ್ಯಸಂಸ್ಕಾರವನ್ನು ಕೂಡ ಬೆಳಗ್ಗೆಯೇ ನೆರವೇರಿಸಿದ್ದಾರೆ. ಸತಿ-ಪತಿ ಜೀವನದಲ್ಲಿ ಒಟ್ಟಿಗೆ ಬಾಳಿ, ಬದುಕಿ ವಿಧಿವಿಲಾಸದಂತೆ ಸಾವಿನಲ್ಲಿಯೂ ಕೂಡ ಒಂದಾಗಿ ತಮ್ಮ ಮೋಕ್ಷದ ದಾರಿಯನ್ನು ಹಿಡಿದರು