ಮಹಲಿಂಗಪುರ

ಶರಣ ಮೇದಾರ ಕೇತಯ್ಯನವರ 897 ನೇ ಜಯಂತಿ

ಶರಣ ಮೇದಾರ ಕೇತಯ್ಯನವರ 897 ನೇ ಜಯಂತಿ


ಮಹಾಲಿಂಗಪುರ 07: ಶ್ರೇಷ್ಠ ವಚನಕಾರ ಬಿದಿರುಬುಟ್ಟಿ, ಮೊರ ಮುಂತಾದವುಗಳನ್ನು ತಯಾರಿಸಿ ಮಾರಾಟ ಮಾಡಿ ಬಂದ ಹಣದಲ್ಲಿ ನಿಸ್ವಾರ್ಥ ದಾಸೋಹ ಸೇವೆ ನಡೆಸಿ, ಪವಿತ್ರಜೀವನದ ಬಸವ ತತ್ವ ಬೋಧಿಸಿದ ಶರಣ ಮೇದಾರ ಕೇತಯ್ಯನವರ 897 ನೇ ಜನ್ಮ ಜಯಂತಿಯನ್ನು ಪಟ್ಟಣದಲ್ಲಿ ಮೇದಾರ ಸಮುದಾಯದವರು ಶೃದ್ಧೆ ಭಕ್ತಿಯಿಂದ ಆಚರಿಸಿದರು. ಸಮುದಾಯದ ಗುರುಗಳಾದ ಮೇದಾರ ಕೇತಯ್ಯನವರ ಭಾವಚಿತ್ರವನ್ನು ಪುಷ್ಪ ಹಾರಗಳಿಂದ ಅಲಂಕರಿಸಿ, ಕಾಯಿ ಕರ​‍್ೂರ ಬೆಳಗಿ ಜಯಂತಿಯನ್ನು ಅರ್ಥಪೂರ್ಣವಾಗಿಸಿದರು.  

ಈ ಸಂದರ್ಭದಲ್ಲಿ ಮೇದಾರ ಸಮಾಜದ ಹಣ್ಮಂತ ಬುರುಡ, ಬಾಗಲಕೋಟ ಜಿಲ್ಲಾ ಉಪಾಧ್ಯಕ್ಷ ಗಂಗಪ್ಪ ಮೇದಾರ, ಈರ​‍್ಪ ಮೇದಾರ, ಶಿಕ್ಷಕ ಶಿವಾನಂದ ಬುರುಡ, ಪರಶುರಾಮ ಮೇದಾರ, ಸುನೀಲ್ ಹಿರೇರಮೇಶ್ ಬಡಿಗೇರ, ಮೋನೇಶ ಬಡಿಗೇರ, ವಿಜಯರಾಜ ಬಡಿಗೇರ, ಭೀಮಶಿ ಮೇದಾರ, ಸಾಗರ ಮೇದಾರ, ಯಮನಪ್ಪ ಕಾನಟ್ಟಿ, ದಶರಥ ಬಡಿಗೇರ, ಧರೆಪ್ಪ ಮೇದಾರ, ಮಹಾಂತೇಶ ಬುರುಡ, ಸಂಜು ಬುರುಡ, ಮಲ್ಲಪ್ಪ ಬುರುಡ, ಆನಂದ ಬುರುಡ, ಸಂಗಮೇಶ ಬುರುಡ ಮುಂತಾದವರಿದ್ದರು. 


ಸುದ್ದಿ ಓದಿ