ಬ್ರೆಜಿಲ್: 24 ಗಂಟೆಯಲ್ಲಿ ಕರೋನ ಸೋಂಕಿಗೆ 858 ರೋಗಿಗಳ ಸಾವು
ಬ್ರೆಸಿಲಿಯಾ, ಸೆಪ್ಟೆಂಬರ್ 19: ಬ್ರೆಜಿಲ್‌ನಲ್ಲಿ ಕಳೆದ 24 ಗಂಟೆಗಳಲ್ಲಿ ಕರೋನದಿಂದ 858 ರೋಗಿಗಳು ಸಾವನ್ನಪ್ಪಿದ್ದು, ಪರಿಣಾಮ ದೇಶದಲ್ಲಿ ಈವರೆಗೆ ಮೃತಪಟ್ಟವರ ಸಂಖ್ಯೆ 1ಲಕ್ಷದ 35ಸಾವಿರದ 793 ಕ್ಕೆ ಏರಿಕೆಯಾಗಿದೆ ಎಂದು ಬ್ರೆಜಿಲ್ ಆರೋಗ್ಯ ಸಚಿವಾಲಯ ಶನಿವಾರ ತಿಳಿಸಿದೆ.
ಈ ನಡುವೆ , ಕಳೆದ 24 ಗಂಟೆಗಳಲ್ಲಿ 39,797 ಹೊಸ ಪ್ರಕರಣಗಳು ದಾಖಲಾಗಿದ್ದು, ಒಟ್ಟು ಸೋಂಕು ಪ್ರಕರಣಗಳ ಸಂಖ್ಯೆ 4,495,183 ಕ್ಕೆ ತಲುಪಿದೆ .
ದಿನಕ್ಕೆ ಸರಾಸರಿ ಹೊಸ ಪ್ರಕರಣಗಳ ಸಂಖ್ಯೆ ಕೂಡ ಕುಸಿಯುತ್ತಿದೆ, ಕಳೆದ ಏಳು ದಿನಗಳಲ್ಲಿ 31,097 ಕ್ಕೆ ಇಳಿದಿದೆ, ಹಿಂದಿನ ಎರಡು ವಾರಗಳಿಗಿಂತ 22 ಶೇಕಡಾ ಕಡಿಮೆಯಾಗಿದೆ.
ಬ್ರೆಜಿಲ್‌ನಲ್ಲಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯವಾದ ಸಾವೊ ಪಾಲೊದಲ್ಲಿ 924,532 ಸೋಂಕು ಮತ್ತು 33,678 ಸಾವು, ನಂತರ ರಿಯೋ ಡಿಜೆನರೋದಲ್ಲಿ249, 798 ಸೋಂಕು ಮತ್ತು 17, 575 ಸಾವಿನ ಪ್ರಕರಣಗಳು ವರದಿಯಾಗಿದೆ.