ಸಿರುಗುಪ್ಪ

7ನೇ ಅಂತರ ರಾಷ್ಟ್ರೀಯ ಯೋಗ ದಿನ ಸ್ವಚ್ಛತೆ ಪಾಲಿಸಿ: ಅಬ್ದುಲ್ ನಬಿ

7ನೇ ಅಂತರ ರಾಷ್ಟ್ರೀಯ ಯೋಗ ದಿನ ಸ್ವಚ್ಛತೆ ಪಾಲಿಸಿ: ಅಬ್ದುಲ್ ನಬಿ

ಸಿರುಗುಪ್ಪ 21: ಕೊರೊನಾ ಹಿನ್ನೆಲೆಯಲ್ಲಿ ಆರೋಗ್ಯದ ಹಿತ ದೃಷ್ಟಿಯಿಂದ ಅಮೂಲ್ಯ ನೀರನ್ನು ಮಿತವಾಗಿ ಬಳಸಿ ಕೈ ಮುಖ ಕಾಲುಗಳನ್ನು ಸ್ವಚ್ಛತೆ ಗೊಳಿಸಿ ಈ ಮಾಸ್ಕ್‌ ಧರಿಸಿ ಅಂತರವನ್ನು ಪಾಲಿಸಿ ನಮ್ಮ ವೈ ವೈವಿಧ್ಯಮಯ ಸಂಸ್ಕೃತಿಯ ಶ್ರೇಷ್ಠ ಪರಂಪರೆಯನ್ನು ಗೌರವಿಸುವುದು ಮತ್ತು ರಕ್ಷಿಸುವುದು ಪ್ರತಿಯೊಬ್ಬ ಭಾರತೀಯನ ಸಂವಿಧಾನಬದ್ಧ ಮೂಲಭೂತ ಕರ್ತವ್ಯ ಎಂದು ಭಾರತ ವಿಕಾಸ ರತ್ನ ಸುವರ್ಣ ಕರ್ನಾಟಕ ಪತಂಜಲಿ ಯೋಗ ರತ್ನ ಸಮಾಜ ಸುಧಾರಕ ಎ. ಅಬ್ದುಲ್ ನಬಿ ಹೇಳಿದರು. 

ಸೌದಾಗರ್ ಮೊಹಲ್ಲಾ ಇಬ್ರಾಹಿಂ ಮಂಜಿಲ್‌ನಲ್ಲಿ 7ನೇ  ಅಂತರ ರಾಷ್ಟ್ರೀಯ ಯೋಗ ದಿನವನ್ನು ನೆನಪಿಸಿ ಅವರು ಮಾತನಾಡುತ್ತಾ  ದೈಹಿಕ ಮಾನಸಿಕ ಮತ್ತು ಆಧ್ಯಾತ್ಮಿಕ ಯೋಗ ಕ್ಷೇಮಕ್ಕಾಗಿ ಮಾಡುವ ಅಭ್ಯಾಸ ವಾಗಿರುತ್ತದೆ. ಜಗತ್ತಿನಲ್ಲಿ ಶಾಂತಿ ಮತ್ತು ಸೌಹಾರ್ದತೆಗೆ ದಯೆ ಕರುಣೆ ಮಿತ್ರತ್ವ ತ್ಯಾಗ ಕೂಡಿದಾಗ ಅಸೂಯೆ ದ್ವೇಷ ಅಳಿಯುತ್ತದೆ. ಅಂತರಂಗ  ಶುದ್ಧಿ ಮತ್ತು ಬಹಿರಂಗ ಶುದ್ಧಿ ನಿಲವು ದೇಹ ಮತ್ತು ಮನಸ್ಸಿನ ಆರೋಗ್ಯ ಅಲ್ಲಾಹನ ಪ್ರವಾದಿ ಗಳವರ ಜಗದ್ಗುರುಗಳ ಹಿರಿಯರ ತತ್ತ್ವ ಸಿದ್ಧಾಂತ ಪ್ರಾರ್ಥನೆ ಆರಾಧನೆ ಧ್ಯಾನ ವ್ಯಾಯಾಮ ಯೋಗ ನಿರಂತರ ಜೀವನದಲ್ಲಿ ಅಳವಡಿಸಿ ಪಾಲಿಸಬೇಕು ನಡೆ ನುಡಿ ಚಟುವಟಿಕೆ ಉಳಿಸಿ ಬೆಳೆಸಿ ಎಂದು ಅಬ್ದುಲ್ ನಬಿ ವಿವರಿಸಿ ಹೇಳಿದರು. 

ಸಾಕ್ಷರತಾ ಕ್ಷೇತ್ರ ಗೌರವ ಸಂಯೋಜಕ ಜೆ .ನಾಗೇಂದ್ರ ಗೌಡ ಅವರು ಮಾತನಾಡಿ ಯೋಗ ಜೀವನದ ಕುಶಲತೆ ಮಾನಸಿಕ ಆರೋಗ್ಯ ವೃದ್ಧಿ ಯಾಗುತ್ತದೆ ಎಂದರು. ಈ ಸಂದರ್ಭದಲ್ಲಿ ಎ. ಮೊಹಮ್ಮದ್ ಇಬ್ರಾಹಿಂ ,ಎ. ಮೊಹಮ್ಮದ್ ರಫಿ, ಎ .ಮೊಹಮ್ಮದ್ ನೌಶಾದ್ ಅಲಿ, ಎ .ಮೊಹಮ್ಮದ್ ನಿಜಾಮುದ್ದೀನ್, ಎ. ಮೊಹಮ್ಮದ್ ಹಾಜಿ ಇತರರು ಉಪಸ್ಥಿತರಿದ್ದರು . 


ಸುದ್ದಿ ಓದಿ