ದಾಖಲೆ ಇಲ್ಲದೆ ಸಾಗಿಸುತ್ತಿದ್ದ 70 ಲಕ್ಷ ನಗದು ವಶಪಡಿಸಿಕೊಂಡ ಕಾಗವಾಡ ಪೊಲೀಸರು : ಇಬ್ಬರ ವಿಚಾರಣೆ, ಹಾರೊಗೇರಿಯಲ್ಲಿ 2.30 ಲಕ್ಷ ಹಣ ಪತ್ತೆ

ದಾಖಲೆ ಇಲ್ಲದೆ ಸಾಗಿಸುತ್ತಿದ್ದ 70 ಲಕ್ಷ ನಗದು ವಶಪಡಿಸಿಕೊಂಡ ಕಾಗವಾಡ ಪೊಲೀಸರು : ಇಬ್ಬರ ವಿಚಾರಣೆ, ಹಾರೊಗೇರಿಯಲ್ಲಿ 2.30 ಲಕ್ಷ ಹಣ ಪತ್ತೆ

ಬೆಳಗಾವಿ : ಚುನಾವಣೆ ಘೋಷಣೆ ಬೆನ್ನಲ್ಲೆ ಚಿಕ್ಕೋಡಿ ಉಪವಿಭಾಗದಲ್ಲಿ ಅಧಿಕಾರಿ ವರ್ಗವು ಹೈಅಲರ್ಟ ಆಗಿದ್ದು, ದಾಖಲೆ ಇಲ್ಲದೆ ಸಾಗಿಸುತ್ತಿದ 70 ಲಕ್ಷ ರೂಪಾಯಿಗಳನ್ನು ವಶಕ್ಕೆ ಪಡೆದಿರುವ ಘಟನೆ ಜಿಲ್ಲೆಯ ಕಾಗವಾಡ ಚೆಕ್ ಪೊಸ್ಟ್‍ನಲ್ಲಿ ಬುಧವಾರ ಸಂಜೆ ನಡೆದಿದ್ದು, ಈ ಬಗ್ಗೆ ಇಬ್ಬರನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
    ಬೆಳಗಾವಿ ಜಿಲ್ಲೆಯ ಕಾಗವಾಡ ಪಟ್ಟಣದ ಹೊರವಲಯದ ಕರ್ನಾಟಕದ ಮತ್ತು ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವ ಕಾಗವಾಡ ಮತ್ತು ಮೀರಜ ಚೆಕ್‍ಪೆÇಸ್ಟ್ ಬಳಿಯಲ್ಲಿ ಈ ಹಣವನ್ನು ವಶಕ್ಕೆ ಪಡೆಯಲಾಗಿದೆ. ಮಹಾರಾಷ್ಟ್ರದ ಮಿರಜದಿಂದ ಇಂಡಿಕಾ ಕಾರಿನಲ್ಲಿ ದಾಖಲೆ ಇಲ್ಲದೆ ಬೆಳಗಾವಿ ಜಿಲ್ಲೆಯಲ್ಲಿ ಸಾಗಿಸುತ್ತಿದ ಹಣವನ್ನು ಚೆಕ್ ಪೊಸ್ಟ್‍ನಲ್ಲಿ ಅಧಿಕಾರಿ ವಶಕ್ಕೆ ಪಡೆದಿದ್ದಾರೆ.
     ಕಾರಿನಲ್ಲಿ ಇರಿಸಲಾಗಿದ್ದ ಬ್ಯಾಗನಲ್ಲಿ 70 ಲಕ್ಷ ಹಣ ತುಂಬಿಕೊಂಡು ಸಾಗಿಸುತ್ತಿದ್ದ ಹಣ ದೊರೆತಿದೆ. ಹಣ ಸಾಗಿಸುತ್ತಿದ್ದ ಇಬ್ಬರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಸಾಗಾಟ ಮಾಡುತ್ತಿದ್ದ 70 ಲಕ್ಷ ಹಣದ ಮೂಲವನ್ನು ಕಾಗವಾಡ ಪೆÇಲೀಸರು ಹುಡುಕುತ್ತಿದ್ದಾರೆ. ಖಾಸಗಿ ಬ್ಯಾಂಕ್‍ಗೆ ಸೇರಿದ ಈ ಹಣವು ಎಂದು ಮಾಹಿತಿ ಲಭ್ಯವಾಗಿದ್ದು, ಆದರೆ ಯಾವದೇ ದಾಖಲಾತಿಗಳು ದೊರೆತಿರುವದಿಲ್ಲ ಎನ್ನಲಾಗಿದೆ. ಈ ಕುರಿತು ಜಿಲ್ಲೆಯ ಕಾಗವಾಡ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಾರೋಗೇರಿಯಲ್ಲಿ 2.30 ಲಕ್ಷ ಅಕ್ರಮ ಹಣ ಪತ್ತೆ :
     ದಾಖಲೆ ಇಲ್ಲದೆ ಸಾಗಿಸುತ್ತಿದ್ದ 2 ಲಕ್ಷ 30 ಸಾವಿರ ಹಣ ಹಾರೊಗೇರಿ ಪೆÇಲೀಸ್ ಠಾಣಾ ವ್ಯಾಪ್ತಿಯ ಹಾರೊಗೇರಿ ಕ್ರಾಸ್‍ನಲ್ಲಿ ಪತ್ತೆಯಾಗಿದೆ. ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹಾರೂಗೇರಿ ಕ್ರಾಸ್ ಬಳಿಯಲ್ಲಿ ಈ ಹಣ ಸೀಜ್ ಮಾಡಿ ಪೆÇಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

ಸುದ್ದಿ ಓದಿ