66ನೇ ಕರ್ನಾಟಕ ರಾಜ್ಯೋತ್ಸವ ಪೂರ್ವ ಭಾವಿ ಸಿದ್ಧತೆ ಸಭೆ
ಸಿರುಗುಪ್ಪ 28: ತಾಲ್ಲೂಕು ಆಡಳಿತದಿಂದ 66ನೇ ಕರ್ನಾಟಕ ರಾಜ್ಯೋತ್ಸವ ನವೆಂಬರ್ 1ರಂದು ಮೆರವಣಿಗೆಗೆ ಅವಕಾಶ ವಿಲ್ಲ ಅರ್ಥ ಪೂರ್ಣ ವಾಗಿ ಸರಳವಾಗಿ ಆಚರಿಸ ಲಾಗುವುದು ಎಂದು ತಹಶೀಲ್ದಾರ್ ಎನ್.ಆರ್. ಮಂಜುನಾಥ ಸ್ವಾಮಿ ಸ್ಪಷ್ಟಪಡಿಸಿದರು.
ಮಿನಿ ವಿಧಾನಸೌಧದ ತಾಲೂಕು ಕಚೇರಿ ಸಭಾಂಗಣದಲ್ಲಿ ಬುಧವಾರ ಸಂಜೆ ನಡೆದ ಪೂರ್ವಭಾವಿ ಸಿದ್ಧತೆ ಸಭೆ ಯಲ್ಲಿ ಅವರು ಮಾತನಾಡುತ್ತಾ ಗುರುವಾರ 11ಗಂಟೆಗೆ ರಾಷ್ಟ್ರಕವಿ ಕುವೆಂಪು ರಚಿಸಿದ ಬಾರಿಸು ಕನ್ನಡ ಡಿಂಡಿಮ, ಕೆ.ಎಸ್ .ನಿಸಾರ್ ಅಹ್ಮದ್ ಅವರ ಜೋಗದ ಸಿರಿ ಬೆಳಕಿನಲ್ಲಿ ಮತ್ತು ಹಂಸಲೇಖ ಅವರ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಈ 3ಹಾಡುಗಳನ್ನು ಏಕಕಾಲದಲ್ಲಿ ನಗರಸಭಾ ಶಾಲಾ ಕಾಲೇಜುಗಳಲ್ಲಿ ಗೀತಗಾಯನ ಹಮ್ಮಿಕೊಳ್ಳಲಾಗಿದೆ. ಎಂದರು ಶಾಸಕ ಎಂ. ಎಸ್. ಸೋಮಲಿಂಗಪ್ಪ ಮಾತನಾಡಿ ಕೊರೊನಾ ವೈರಸ್ ಹಿನ್ನೆಲೆ ಸರ್ಕಾರದ ಮಾರ್ಗ ಸೂಚಿಯಂತೆ ರಾಜ್ಯೋತ್ಸವ ಆಚರಿಸಬೇಕು ಎಂದರು. ಬೆಳಿಗ್ಗೆ ತಾಲ್ಲೂಕಿನ ಎಲ್ಲಾ ಕಚೇರಿ ಶಾಲಾ ಕಾಲೇಜುಗಳಲ್ಲಿ ಕಡ್ಡಾಯವಾಗಿ ರಾಜ್ಯೋತ್ಸವ ಆಚರಿಸಬೇಕು. ತಾಲ್ಲೂಕ ಕಚೇರಿ ಮೈದಾನದಲ್ಲಿ ನವೆಂಬರ್ 1ರಂದು ಬೆಳ್ಳಿಗೆ 9ಗಂಟೆಗೆ ತಹಸೀಲ್ದಾರ ಎನ್. ಆರ್ . ಮಂಜುನಾಥ ಸ್ವಾಮಿ ಅವರು ರಾಷ್ಟ್ರ ಧ್ವಜ ನೆರವೇರಿಸುವರು. ಶಾಸಕ ಎಂ. ಎಸ್. ಸೋಮಲಿಂಗಪ್ಪ ಅಧ್ಯಕ್ಷತೆ ವಹಿಸುವರು. ಕರ್ನಾಟಕ ರಾಜ್ಯೋತ್ಸವ ಹಾಡನ್ನು ಸಮಾಜ ಸೇವಕ ಎ .ಅಬ್ದುಲ್ ನಬಿ ಹಾಡುವರು ಭಾಷಣ ಉಪನ್ಯಾಸವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಪಿ .ಡಿ .ಭಜಂತ್ರಿ ಅವರಿಂದ ಕನ್ನಡಪರ ಸಂಘಟನೆಯ ಧರ್ಪನಾಯಕ ಕಂಬಳಿ ಮಲ್ಲಿಕಾರ್ಜುನ ಅವರು ಸಭೆಯಲ್ಲಿ ಮಾತನಾಡಿದರು.ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಎಂ. ಸಿದ್ದಯ್ಯ, ಹಿಂದುಳಿದ ವರ್ಗಗಳ ಅಲ್ಪಸಂಖ್ಯಾತರ ಅಧಿಕಾರಿ ಗಾದಿಲಿಂಗಪ್ಪ, ಪರಿಶಿಷ್ಟ ಪಂಗಡದ ಅಧಿಕಾರಿ ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ವಿಶ್ವನಾಥ ಗೌಡ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಯೋಜನಾಧಿಕಾರಿ ಜಲಾಲಪ್ಪ ,ದೈಹಿಕ ಶಿಕ್ಷಕ ವಿಜಯರಂಗರೆಡ್ಡಿ, ತಾಲ್ಲೂಕು ಪಂಚಾಯಿತಿ ವ್ಯವಸ್ಥಾಪಕ ಅಲ್ಲಾಭಕ್ಷ ನೀರಾವರಿ ನಗರಸಭೆ ಪೊಲೀಸ್ ಇಲಾಖೆ ಸೇರಿದಂತೆ ಎಲ್ಲಾ ಅಧಿಕಾರಿಗಳು ಸಂಘ ಸಂಸ್ಥೆ ಪದಾಧಿಕಾರಿಗಳು ಪತ್ರಕರ್ತರು ಹಾಜರಾಗಿ ಸಲಹೆ ಸೂಚನೆ ನೀಡಿದರು.