ಮಹಾಲಿಂಗಪುರದಲ್ಲಿ 2 ದಿನದಲ್ಲಿ 6 ಕೊರೊನಾ ಪ್ರಕರಣ ಪತ್ತೆ: ಯಶಸ್ವಿಯಾದ ಜನತಾ ಕರ್ಫ್ಯೂ
ಮಹಾಲಿಂಗಪುರ : 14 ದಿನದ ಜನತಾ ಕರ್ಫ್ಯೂ ಆರಂಭದ ಬುಧವಾರ ಮುಂಜಾನೆ 10 ರಿಂದ ಸ್ವ ಇಚ್ಛೆಯಿಂದ ಪಟ್ಟಣದ ಎಲ್ಲ ವ್ಯಾಪಾರಸ್ಥರು ಹಾಗೂ ಸಾರ್ವಜನಿಕರು ಜನತಾ ಕರ್್ಯೂಗೆ ಬೆಂಬಲ ನೀಡಿ, ಸರ್ಕಾರ ಕೈಗೊಂಡಿರುವ ಬಿಗಿ ಕ್ರಮಗಳಿಗೆ ಸ್ಪಂದಿಸಿದ್ದಾರೆ.
ಬುಧವಾರ ಬೆಳಿಗ್ಗೆ 6 ರಿಂದ 10 ವರೆಗೆ ಅಗತ್ಯ ವಸ್ತುಗಳನ್ನು ಖರೀದಿಸಿ ಸುತ್ತಮುತ್ತಲಿನ ಹಳ್ಳಿಗಳ ಹಾಗೂ ಸ್ಥಳೀಯ ಜನತೆ ತಮ್ಮ ತಮ್ಮ ಮನೆಗಳನ್ನು ಸೇರಿದರು.
ಎರಡು ದಿನಗಳಲ್ಲಿ 6 ಕೆಸ್ ಪತ್ತೆ : ಪಟ್ಟಣದಲ್ಲಿ ಎರಡು ದಿನಗಳಲ್ಲಿ ಒಟ್ಟು 6 ಕೊರೋನಾ ಪಾಸಿಟಿವ್ ಕೇಸುಗಳು ಪತ್ತೆಯಾಗಿವೆ. ಅದರಲ್ಲಿ 2 ಶಾಂತಿನಿಕೇತನ ಬಡಾವಣೆ, 1 ಪಿ.ಡಿ ಬುದ್ನಿ ಹಾಗೂ ಇನ್ನು ಮೂರು ಜನರ ಹೆಸರುಗಳು ಪತ್ತೆಯಾಗಿಲ್ಲ, ಇವರಲ್ಲಿ ಮೂವರನ್ನು ಗೃಹ ದಿಗ್ಬಂಧನ ಮಾಡಲಾಗಿ ಒಬ್ಬ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇದುವರೆಗೆ ಪಟ್ಟಣದಲ್ಲಿ ಒಟ್ಟು 39 ಕೊರೋನಾ ಪಾಸಿಟಿವ ಕೇಸ್ ಪತ್ತೆಯಾಗಿವೆ ಎಂದು ಸಮುದಾಯ ಆರೋಗ್ಯ ಕೇಂದ್ರದ ಮುಖ್ಯ ವ್ಯೆದ್ಯಾಧಿಕಾರಿ ಡಾ.ಜಿ.ಎಸ್.ಗಲಗಲಿ ತಿಳಿಸಿದ್ದಾರೆ.
ಸುಮ್ಮನೆ ತಿರುಗಾಡುವವರಿಗೆ ಎಸೈ ಲಾಟಿ ಏಟು: ಪಟ್ಟಣದ ಬನಶಂಕರಿದೇವಿ ಗುಡಿ ಹತ್ತಿರ ಕೊರೋನಾ ನಿಯಮದ ನಿಮಿತ್ಯ ಕಾಯಿಪಲ್ಲೆ ಬಜಾರ ಬೆಳಿಗ್ಗೆ 6 ರಿಂದ 10 ರವರೆಗೆ ಅಗತ್ಯವಸ್ತುಗಳ ಮಾರಾಟ ಹಾಗೂ ಖರೀದಿ ನಡೆಯುತ್ತಿದೆ. ನಿಗದಿತ ವೇಳೆ ಮೀರಿದ ಚಿಕ್ಕ ಹಾಗೂ ದೊಡ್ಡ ವ್ಯಾಪಾರಸ್ಥರ ತಕ್ಕಡಿ ಹಾಗೂ ಇನ್ನಿತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಯಿತು.ಪಟ್ಟಣದ ಬೀದಿ ಹಾಗೂ ಮಾರ್ಕೆಟ್ ಗಳಲ್ಲಿ ಸುಖಾಸುಮ್ಮನೆ ತಿರುಗಾಡುವವರಿಗೆ ಪಿಎಸೈ ಆನಂದ ಆದಗೊಂಡ ಮತ್ತು ಪೊಲೀಸ್ ಸಿಬ್ಬಂದಿ ಲಾಠಿ ರುಚಿ ತೋರಿಸಿದರು.