ಗ್ರಾ ಪಂ ನೌಕರರ ಸಂಘದ 5ನೇ ತಾಲೂಕು ಸಮ್ಮೇಳನ

ಗ್ರಾ ಪಂ ನೌಕರರ ಸಂಘದ 5ನೇ ತಾಲೂಕು ಸಮ್ಮೇಳನ

ರಾಯಬಾಗ 25: ಗ್ರಾಮೀಣ ಪಂಚಾಯತ ಸಭಾಂಗಣದಲ್ಲಿ ನಡೆದ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ ನೌಕರರ ಸಂಘದ 5ನೇ ತಾಲೂಕು ಸಮ್ಮೇಳನದಲ್ಲಿ ನೂತನವಾಗಿ ತಾಲೂಕು ಸಮಿತಿಗೆ ಅವಿರೋಧವಾಗಿ ಆಯ್ಕೆಯಾದ ಅಧ್ಯಕ್ಷ ಬಾಬು ಘೇನಾನೆ, ಉಪಾಧ್ಯಕ್ಷ ಮಹಾದೇವ ನಾಗರಾಳೆ, ಕಾರ್ಯದರ್ಶಿ ಕೃಷ್ಣಪ್ಪ ಸಲಗರೆ, ಸಹ ಕಾರ್ಯದರ್ಶಿ ಮಹಾವೀರ ಶಿಂಗೆ, ಖಜಾಂಚಿ ಲಕ್ಷ್ಮಣ ತೋಳೆ, ಸದಸ್ಯರಾದ ಇಸುಫ ಮಕಾನದಾರ, ಅಜೀತ ದಳವಾಯಿ, ಮಹಾದೇವ ತುಂಗಳ, ಕಿರಣ ಪಾಂಡವ, ಮಹಾಂತೇಶ ಪಾಟೀಲ, ದೊಡ್ಡವ್ವ ಕಾಂಬಳೆ ಹಾಗೂ ಗ್ರಾ.ಪಂ.ಯಿಂದ ಪದೋನ್ನತಿ ಹೊಂದಿದ ನೌಕರರನ್ನು ಸತ್ಕರಿಸಲಾಯಿತು. ಜಿಲ್ಲಾ ಸಮಿತಿ ಅಧ್ಯಕ್ಷ ಗೈಬು ಜೈನೆಖಾನ, ಚನ್ಮಮ್ಮ ಗಡಕರಿ, ವೀರಭದ್ರ ಕಂಪ್ಲಿ, ಹಣಮಂತ ಗಸ್ತಿ ಸೇರಿ ಅನೇಕರು ಇದ್ದರು. 


ಸುದ್ದಿ ಓದಿ