ಬೆಳಗಾವಿ ಅಧಿಕಾರಿ ಮನೆಯಲ್ಲಿ 5.96 ಕೆಜಿ ಚಿನ್ನ, 3 ಕೋಟಿ ಹಣ ಸೇರಿ 14 ಕೋಟಿ ಮೇಲ್ಪಟ್ಟ ಆಸ್ತಿ ಪತ್ತೆ

ಬೆಳಗಾವಿ ಅಧಿಕಾರಿ ಮನೆಯಲ್ಲಿ 5.96 ಕೆಜಿ ಚಿನ್ನ, 3 ಕೋಟಿ ಹಣ ಸೇರಿ 14 ಕೋಟಿ ಮೇಲ್ಪಟ್ಟ ಆಸ್ತಿ ಪತ್ತೆ

ಬೆಳಗಾವಿ : ಬೆಳಗಾವಿ ಜಿಲ್ಲಾ ನಗರಾಭಿವೃದ್ಧಿ ಕೋಶ, ಜಿಲ್ಲಾಧಿಕಾರಿಗಳ ಕಛೇರಿ, ಬೆಳಗಾವಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಜಯಸಿಂಗ ಬಾಪಸಿಂಗ ರಜಪೂತ, ಎಇಇ ಇವರ ವಿರುದ್ದ ಸಮರ ಸಾರಿದ್ದ ಬೆಳಗಾವಿ ಲೋಕಾಯುಕ್ತ ಅಧಿಕಾರಿಗಳು ಸುಮಾರು 14 ಕೋಟಿಕಿಂತಲು ಹೆಚ್ವು ಚಿನ್ನಾಭರಣ, ನಗದು ಹಣ ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. 

    ಇತ್ತೀಚೆಗೆ ಬೆಳಗಾವಿಯ ಜಿಲ್ಲಾ ನಗರಾಭಿವೃದ್ಧಿ ಕೋಶ, ಜಿಲ್ಲಾಧಿಕಾರಿಗಳ ಕಛೇರಿ, ಬೆಳಗಾವಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಜಯಸಿಂಗ ಬಾಪಸಿಂಗ ರಜಪೂತ ಅವರಿಗೆ ಸೇರಿದ ಸ್ಥಳಗಳಲ್ಲಿ ದಾಳಿ ನಡೆಸಿದ್ದರು. 

ರಜಪೂತ ಅವರ ವಿರುದ್ದ ಭ್ರಷ್ಟಾಚಾರ ತಡೆಕಾಯ್ದೆ ಅಡಿಯಲ್ಲಿ ಕರ್ನಾಟಕ ಲೋಕಾಯುಕ್ತ ಪೊಲೀಸ್ ಠಾಣೆ ಬೆಳಗಾವಿಯಲ್ಲಿ ದಾಖಲಾದ ಪ್ರಕರಣಕ್ಕೆ

ಸಂಬಂಧಿಸಿದಂತೆ ಸದರಿಯವರ ಮನೆ, ಕಛೇರಿ, ಬ್ಯಾಂಕ ಲಾಕರ್ ಸೇರಿದಂತೆ ಒಟ್ಟು 7 ಸ್ಥಳಗಳಲ್ಲಿ ಶೋಧ ಕಾರ್ಯವನ್ನು ಲೋಕಾಯುಕ್ತ ಅಧಿಕಾರಿಗಳು ಕೈಗೊಂಡಿದ್ದರು. 

  ಶೋಧನೆ ವೇಳೆ ರಜಪೂತ ಅವರಿಗೆ ಸೇರಿದ ಬೆಳಗಾವಿ ನಗರದಲ್ಲಿ 3 ಮನೆ, ಸವದತ್ತಿ, ಹುಕ್ಕೇರಿ ಹಾಗೂ ಹುಬ್ಬಳ್ಳಿ ನಗರ ಸೇರಿ 5 ನಿವೇಶನ, 5 ಕೆಜಿ 960 ಗ್ರಾಂ ಚಿನ್ನ ಹಾಗೂ ವಜ್ರದ ಆಭರಣಗಳು, 5 ಕೆಜಿ ಬೆಳ್ಳಿಯ ಆಭರಣ ಹಾಗೂ ವಸ್ತುಗಳು, 3 ಕೋಟಿ 12 ಲಕ್ಷ ಬ್ಯಾಂಕ ಎಫ್‌ಡಿ, ಒಂದು ಕಾರ ಹಾಗೂ ಬೈಕ. ಸೇರಿ ಒಟ್ಟು 14 ಕೋಟಿಗಿಂತ ಹೆಚ್ಚಿನ ಆಸ್ತಿಯನ್ನು ಪತ್ತೆ ಹಚ್ಚಿರುತ್ತಾರೆ

   ಸದರಿಯವರ ವಿರುದ್ಧ ಇನ್ನೂ ತನಿಖೆ ಮುಂದುವರೆದಿದೆ ಎಂದು ಬೆಳಗಾವಿ ಲೋಕಾಯುಕ್ತ ಅಧಿಕಾರಿಗಳ

ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಸುದ್ದಿ ಓದಿ