ಕಂಠ ಪೂರ್ತಿ ಕುಡಿದು ಬಾರ್ ಮಾಲಿಕನಿಗೆ ಚಿಕ್ಕಮಕ್ಕಳ 500 ಮುಖಬೆಲೆಯ ನಕಲಿ ನೋಟು ನೀಡುತ್ತಿದ್ದ ಮೂವರ ಬಂಧನ : 473 ನೋಟುಗಳು ವಶಕ್ಕೆ

ಕಂಠ ಪೂರ್ತಿ ಕುಡಿದು ಬಾರ್ ಮಾಲಿಕನಿಗೆ ಚಿಕ್ಕಮಕ್ಕಳ 500 ಮುಖಬೆಲೆಯ ನಕಲಿ ನೋಟು ನೀಡುತ್ತಿದ್ದ ಮೂವರ ಬಂಧನ : 473 ನೋಟುಗಳು ವಶಕ್ಕೆ

ಬೆಳಗಾವಿ, ಆ, 31 : ಬಾರ್ ಒಂದರಲ್ಲಿ ಕುಳಿತು ಕಂಠಪೂರ್ತಿ ಕುಡಿದು ಕೊನೆಗೆ ಮಂದ ಬೆಳಕಿನಲ್ಲಿ ಬಾರ್ ಮಾಲಿಕನಿಗೆ ಚಿಕ್ಕಮಕ್ಕಳ ಬಳಕೆಯ 500 ಮುಖಬೆಲೆಯ ನಕಲಿ ನೋಟು ನೀಡಿ ವಂಚಿಸಲು ಯತ್ನಿಸಿದ ಮೂವರು ಖದೀಮರನ್ನು ವಶಕ್ಕೆ ಪಡೆಯುವಲ್ಲಿ ಜಿಲ್ಲೆಯ ಘಟಪ್ರಭಾ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಜಿಲ್ಲಾ ಪೊಲೀಸ ಅಧಿಕಾರಿ ಸಂಜೀವ ಪಾಟೀಲ ತಿಳಿದಿದ್ದಾರೆ.

    ಮಂಗಳವಾರ ರಾತ್ರಿ ಘಟಪ್ರಭಾ ಪೊಲೀಸ್ ಠಾಣಾ ವ್ಯಾಪ್ತಿಯ ಬಾರ್ ಒಂದರಲ್ಲಿ ಮೂವರು ಖದೀಮರು ಕಂಠಪೂರ್ತಿ ಮದ್ಯ ಕುಡಿದು ಕೊನೆಯಲ್ಲಿ ಬಾರ್ ಮಾಲಿಕನಿಗೆ ಚಿಕ್ಕಮಕ್ಕಳು ಉಪಯೋಗಿಸುವ ನಕಲಿ 500 ಮುಖಬೆಲೆಯ ನೋಟುಗಳನ್ನು ನೀಡಲು ಪ್ರಯತ್ನಿಸಿದ  ಮೂವರನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದರು. ಅಲ್ಲದೆ ಬಂಧಿತರಿಂದ 473 ಚಿಕ್ಕಮಕ್ಕಳ ನೋಟುಗಳನ್ನು ಘಟಪ್ರಭಾ ಪೊಲೀಸರು ವಶಪಡಿಕೊಂಡಿದ್ದಾರೆ. ಈ ಕುರಿತು ಘಟಪ್ರಭಾ ಪೊಲೀಸ ಠಾಣೆಯ ಲ್ಲಿ ದೂರು ದಾಖಲಾಗಿದೆ ಎಂದು ಎಸ್ ಪಿ ಸಂಜೀವ ಪಾಟೀಲ ತಿಳಿಸಿದರು.

ಸುದ್ದಿ ಓದಿ