ಕೋವಿಡ್ : ದೇಶದಲ್ಲಿ ಕಳೆದ ಒಂದೇ ದಿನ 44,643 ಹೊಸ ಪ್ರಕರಣ ದಾಖಲು

ಕೋವಿಡ್ : ದೇಶದಲ್ಲಿ ಕಳೆದ ಒಂದೇ ದಿನ 44,643 ಹೊಸ ಪ್ರಕರಣ ದಾಖಲು

  ನವದೆಹಲಿ, ಆಗಸ್ಟ್ 6 ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 44,643 ಹೊಸ ಕೊರೋನಾ ವೈರಸ್ ಪ್ರಕರಣಗಳನ್ನು ದಾಖಲಿಸಿದ್ದು, ಇದರೊಂದಿಗೆ ಸೋಂಕಿತರ ಒಟ್ಟು ಸಂಖ್ಯೆ 31,856,757 ಕ್ಕೆ ತಲುಪಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಶುಕ್ರವಾರ ತಿಳಿಸಿದೆ.
  ಕೋವಿಡ್ ನಿಂದ ಮೃತಪಟ್ಟವರ ಸಂಖ್ಯೆ 426,754 ಕ್ಕೆ ತಲುಪಿದ್ದು, ಕಳೆದ ದಿನ 464 ಹೊಸ ಸಾವುಗಳು ದಾಖಲಾಗಿವೆ. ಈವರೆಗೆ ಒಟ್ಟು 31,015,844 ಜನರು ಚೇತರಿಸಿಕೊಂಡಿದ್ದಾರೆ. ಇದರೊಂದಿಗೆ, ಚೇತರಿಕೆಯ ದರವು ಈಗ ಶೇಕಡಾ 97.37 ರಷ್ಟಿದೆ. ಸಕ್ರಿಯ ಪ್ರಕರಣಗಳು ದೇಶದ ಒಟ್ಟು ಪ್ರಕರಣಗಳಲ್ಲಿ ಶೇಕಡಾ 1.30 ರಷ್ಟಿದೆ.
  ಸಾಂಕ್ರಾಮಿಕ ರೋಗವು ದೇಶವನ್ನು ಅಪ್ಪಳಿಸಿದ ನಂತರ 47,65,33,650 ಮಾದರಿಗಳನ್ನು ಸೋಂಕು ಪತ್ತೆಗಾಗಿ ಪರೀಕ್ಷಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಐಸಿಎಂಆರ್ ಹೇಳಿದ್ದು. ಈ ಪೈಕಿ 16,40,287 ಪರೀಕ್ಷೆಗಳನ್ನು ಗುರುವಾರ ನಡೆಸಲಾಗಿದೆ.
  ಏತನ್ಮಧ್ಯೆ ಸೋಂಕು ನಿಯಂತ್ರಣಕ್ಕಾಗಿ  57,97,808 ಪ್ರಮಾಣದಷ್ಟು ಲಸಿಕೆ ನೀಡಲಾಗಿದೆ.  ಈ ವರ್ಷದ ಆರಂಭದಲ್ಲಿ ಆರಂಭಿಸಲಾದ ರಾಷ್ಟ್ರವ್ಯಾಪಿ ಲಸಿಕೆ ಅಭಿಯಾನದ ಭಾಗವಾಗಿ ಒಟ್ಟು 49,53,27,595 ರಷ್ಟು ಲಸಿಕೆ ನೀಡಲಾಗಿದೆ.
  ಅತಿ ಹೆಚ್ಚು ಕೋವಿಡ್ ಸೋಂಕಿತರನ್ನು ಹೊಂದಿರುವ ರಾಷ್ಟ್ರಗಳಲ್ಲಿ ಅಮೆರಿಕ ಮೊದಲ ಸ್ಥಾನದಲ್ಲಿದ್ದು 35.43 ದಶಲಕ್ಷಕ್ಕೂ ಹೆಚ್ಚು ರೋಗಿಗಳಿದ್ದಾರೆ.  ಭಾರತ ಎರಡನೇ ಸ್ಥಾನದಲ್ಲಿದೆ.
  ವಿಶ್ವ ಆರೋಗ್ಯ ಸಂಸ್ಥೆ ಡಬ್ಲ್ಯುಎಚ್‌ಒ 2020 ಮಾರ್ಚ್ 11 ರಂದು ಕೋವಿಡ್ 19 ಏಕಾಏಕಿ ಎದುರಾದ ಸಾಂಕ್ರಾಮಿಕ ಎಂದು ಘೋಷಿಸಿತು. ಇಲ್ಲಿಯವರೆಗೆ, ವಿಶ್ವದಾದ್ಯಂತ 200.81 ದಶಲಕ್ಷಕ್ಕೂ ಹೆಚ್ಚು ಜನರು ಕೊರೋನಾ ವೈರಸ್ ಸೋಂಕಿಗೆ ಒಳಗಾಗಿದ್ದಾರೆ, 4.26 ಮಿಲಿಯನ್‌ಗಿಂತಲೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ತಿಳಿಸಿದೆ.

ಸುದ್ದಿ ಓದಿ