ಬೆಳಗಾವಿ ಬಳಿ 400 ಕೋಟಿ ದರೋಡೆ : ಐವರು ಪೊಲೀಸ್ ವಶಕ್ಕೆ, ಇನ್ನುಳಿದವರಿಗೆ ಶೋಧ
ಬೆಳಗಾವಿ : ದೇಶವನ್ನೆ ಬೆಚ್ವಿಬೀಳಿಸುವಂತ ಹಾಗೂ ಬೆಳಗಾವಿ ಗಡಿಯಲ್ಲಿ ನಡೆದ 2 ಲಾರಿಗಳಲ್ಲಿದ್ದ 400 ಕೋಟಿ ದರೋಡೆ ಪ್ರಕರಣವು ತಡವಾಗಿ ಬೆಳಕಿಗೆ ಬಂದಿದ್ದು, ಈ ಪ್ರಕರಣದಲ್ಲಿ ಮಹಾರಾಷ್ಟ್ರ ಪೊಲೀಸರು ಸದ್ಯ ಐದು ಜನರನ್ನು ವಶಕ್ಕೆ ಪಡೆದಿದ್ದು, ಇನ್ನುಳಿದವರಿಗಾಗಿ ಹುಡಕಾಟ ನಡೆಸಿದ್ದಾರೆ. ಈ ಪ್ರಕರಣದಲ್ಲಿ ಮಹಾರಾಷ್ಟ್ರ ಪೊಲೀಸರಿಗೆ ಬೆಳಗಾವಿ ಪೊಲೀಸರು ಕೂಡಾ ಸಾಥ್ ನೀಡಿದ್ದಾರೆ.
ಮಹಾರಾಷ್ಟ್ರ ರಿಯಲ್ ಎಸ್ಟೇಟ್ ಉದ್ಯಮಿ ಕಿಶೋರ್ ಶೇಟ್ ಎಂಬುವವರಿಗೆ ಸೇರಿದ ಹಣವನ್ನು 2025ರ ಅಕ್ಟೋಬರ್ 16ರಂದು ಬೆಳಗಾವಿ ಜಿಲ್ಲೆಯ ಗಡಿಭಾಗವಾದ ಖಾನಾಪೂರ ತಾಲೂಕಿನ ಚೋರ್ಲಾ ಘಾಟ ಮೂಲಕ ಗೋವಾದಿಂದ ಮಹಾರಾಷ್ಟ್ರಕ್ಕೆ 2 ಕಂಟೇನರ್ ವಾಹನಗಳಲ್ಲಿ ಹೊರಟಿದ್ದ 400 ಕೋಟಿ ರೂ. ನಗದು ಹಣವನ್ನು ಕೆಲ ಕಿಡಿಗೇಡಿಗಳು ಲಾರಿಗಳ ಸಮೇತವಾಗಿ ಹಣವನ್ನು ಹೈಜಾಕ ಮಾಡಿ ದೋಚಿದ್ದರು.
ದೇಶದ ಅತೀ ದೊಡ್ಡ ರಾಬರಿ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಚೋರ್ಲಾ ಘಾಟ್ ನಲ್ಲಿ ಕಂಟೇನರ್ ಹೈಜಾಕ್‌ಮಾಡಿದ್ದ ಈ ಪ್ರಕರಣವು ಮಹಾರಾಷ್ಟ್ರದಲ್ಲಿ ಸಂಚಲನ ಮೂಡಿಸಿತ್ತು.
400 ಕೋಟಿ ಹೊತ್ತು ಸಾಗಿದ 2 ಕಂಟೇನರ್ ಗಳ ಹುಡುಕಾಟಕ್ಕಿಳಿದ ಕರ್ನಾಟಕ, ಮಹಾರಾಷ್ಟ್ರ, ಗೋವಾ ಪೊಲೀಸರು.ಈ ಪ್ರಕರಣ ಗಂಭೀರವಾಗಿ ಪರಿಗಣಿಸಿದ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಈ ಪ್ರಕರಣ ತನಿಖೆಗೆ ಎಸ್ಐಟಿ ರಚಿಸಿ ಆದೇಶ ಹೊರಡಿಸಿದ್ದಾರೆ.
ಮಹಾರಾಷ್ಟ್ರ ರಿಯಲ್ ಎಸ್ಟೇಟ್ ಉದ್ಯಮಿ ಕಿಶೋರ್ ಶೇಟ್ ಎಂಬುವವರಿಗೆ ಸೇರಿದ ಹಣ ಇದಾಗಿದೆ ಎನ್ನಲಾಗಿದೆ. ಮಹಾರಾಷ್ಟ್ರ ದ ನಾಸಿಕ್ ಮೂಲದ ಸಂದೀಪ್ ಪಾಟೀಲ್ ಎಂಬ ವ್ಯಕ್ತಿ ಅಪಹರಣದಿಂದ ಪ್ರಕರಣ ಬೆಳಕಿಗೆ ಬಂದಿದೆ. ಬೆಳಗಾವಿ ಗೋವಾ ಗಡಿ ಚೋರ್ಲಾ ಘಾಟ್ ದಿಂದ ಕಂಟೇನರ್ ವಾಹನಗಳು ಹೈಜಾಕ್ ಆಗಿವೆ. ಈ ಸಂಬಂಧ ಮಹಾರಾಷ್ಟ್ರ ಪೊಲೀಸರು ಐವರು ಆರೋಪಿತರನ್ನು ವಶಕ್ಕೆ ಪಡೆದಿದ್ದಾರೆ.
ಇನ್ನೂಳಿದ ಆರೋಪಿತರಿಗಾಗಿ ಹುಡುಕಾಟ ನಡೆಸಿದ್ದು, ಇದಕ್ಕೆ ಸಹಕಾರ ನೀಡುವಂತೆ ಮಹಾರಾಷ್ಟ್ರ ಪೊಲೀಸರು ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್ ಅವರಿಗೆ ಪತ್ರದ ಮೂಲಕ ವಿನಂತಿಸಿದ್ದಾರೆ. ಇದಕ್ಕೆ ಸ್ಪಂದಿಸಿದ ಎಸ್ ಪಿ ತಮ್ಮ ತಂಡವನ್ನು ಕೂಡಾ ಖದೀಮರ ಹುಡುಕಾಟಕ್ಕೆ ರವಾನಿಸಿದ್ದಾರೆ.