ಬಳ್ಳಾರಿ ಜಿಲ್ಲೆಯಲ್ಲಿ 4.71ಲಕ್ಷ ಜನರಿಗೆ ಕ್ಷಯರೋಗ ಸಮೀಕ್ಷೆ: ಡಾ.ನಿಜಾಮುದ್ದೀನ್

ಬಳ್ಳಾರಿ ಜಿಲ್ಲೆಯಲ್ಲಿ 4.71ಲಕ್ಷ ಜನರಿಗೆ ಕ್ಷಯರೋಗ ಸಮೀಕ್ಷೆ: ಡಾ.ನಿಜಾಮುದ್ದೀನ್


ಬಳ್ಳಾರಿ03: ಜಿಲ್ಲೆಯಲ್ಲಿ ಕ್ಷಯರೋಗಕ್ಕೆ ಸಂಬಂಧಿಸಿದ ಆಯ್ದ ಸೂಕ್ಷ್ಮ ಪ್ರದೇಶಗಳಲ್ಲಿ ಒಟ್ಟು 94182 ಮನೆಗಳಲ್ಲಿರುವ 4.71ಲಕ್ಷ ಜನರಿಗೆ ಸಮೀಕ್ಷೆಯನ್ನು ಜು.2ರಿಂದ ಆರಂಭಿಸಲಾಗಿದ್ದು,ಜು.16ರವರೆಗೆ ನಡೆಯಲಿದೆ ಎಂದು ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ನಿಜಾಮುದ್ದೀನ್ ಅವರು ತಿಳಿಸಿದ್ದಾರೆ.

ಈ ಸಕ್ರಿಯ ಕ್ಷಯರೋಗ ಪತ್ತೆ ಹಚ್ಚುವ ಆಂದೋಲನ ಕಾರ್ಯಕ್ಕೆ 453 ತಂಡಗಳನ್ನು ರಚಿಸಲಾಗಿದ್ದು, ಪ್ರತಿ ತಂಡದಲ್ಲಿ ಒಬ್ಬ ಆರೋಗ್ಯ ಕಾರ್ಯಕರ್ತರು,ಒಬ್ಬ ಆಶಾ ಕಾರ್ಯಕತರ್ೆಯರು ಇರಲಿದ್ದು, ಮನೆ ಮನೆಗೆ ತೆರಳಿ ಮನೆಯಲ್ಲಿರುವವರಿಗೆ ಕ್ಷಯರೋಗ ಹಾಗೂ ಅದರ ಲಕ್ಷಣಗಳ ಬಗ್ಗೆ ವಿವರಿಸಲಿದ್ದಾರೆ ಎಂದು ಅವರು ಹೇಳಿದ್ದಾರೆ.

ಕ್ಷಯರೋಗದ ಲಕ್ಷಣಗಳುಳ್ಳ ವ್ಯಕ್ತಿಗೆ ಕಫ ಪರೀಕ್ಷೆ, ಎಕ್ಸರೇ ಪರೀಕ್ಷೆಗಳಿಗೆ ಪ್ರೋತ್ಸಾಹಿಸಿ, ಕ್ಷಯರೋಗ ಎಂದು ದೃಢಪಟ್ಟಿದ್ದಲ್ಲಿ ಸಂಬಂಧಿಸಿದ ಆರೋಗ್ಯ ಕೇಂದ್ರಗಳಲ್ಲಿ ಉಚಿತ ಚಿಕಿತ್ಸೆ ಪ್ರಾರಂಭ ಮಡಲಾಗುತ್ತದೆ ಎಂದು ವಿವರಿಸಿರುವ ಅವರು, ಈ ಆಂದೋಲನಕ್ಕೆ ವಿವಿಧ ಇಲಾಖೆಗಳು,ಸಂಘ-ಸಂಸ್ಥೆಗಳು, ಸಾರ್ವಜನಿಕರು ಕೈಜೋಡಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ. 

ಸುದ್ದಿ ಓದಿ