ಇಸ್ರೇಲ್ ನಲ್ಲಿ 4,300 ಹೊಸ ಕರೋನ ಪ್ರಕರಣ, 30 ಸಾವು
ಜೆರುಸಲೆಮ್, ಸೆಪ್ಟೆಂಬರ್ 21: ಇಸ್ರೇಲ್ ನಲ್ಲಿ ಹೊಸದಾಗಿ ಭಾನುವಾರ 4,300 ಹೊಸ ಕರೋನ ಪ್ರಕರಣ ಪ್ರಕರಣ ವರದಿಯಾಗಿದ್ದು ದೇಶದಲ್ಲಿ ಈವರೆಗೆ ಒಟ್ಟು ಸೋಂಕಿತರ ಸಂಖ್ಯೆ 187,902 ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಸಚಿವಾಲಯವು ಹೇಳಿದೆ.
ಹೊಸದಾಗಿ 30 ರೋಗಿಗಳ ಸಾವುಗಳೊಂದಿಗೆ ಈವರೆಗೆ ಮೃತಪಟ್ಟವರ ಸಂಖ್ಯೆ 1,256 ಕ್ಕೆ ತಲುಪಿದೆ , ಗಂಭೀರ ಸ್ಥಿತಿಯಲ್ಲಿರುವ ರೋಗಿಗಳ ಸಂಖ್ಯೆ 604 ರಿಂದ ದಾಖಲೆಯ ಗರಿಷ್ಠ 643 ಕ್ಕೆ ತಲುಪಿದೆ.1,620 ಜನರು ಚೇತರಿಸಿಕೊಂಡಿದ್ದಾರೆ.
ಇಸ್ರೇಲ್ ನಲ್ಲಿ 20 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯುವಕರಲ್ಲಿ ಕೊರೊನಾ ಸೋಂಕು ಪ್ರಕರಣಗಳ ಪ್ರಮಾಣ ಗಮನಾರ್ಹವಾಗಿ ಏರಿಕೆಯಾಗಿದೆ ಎಂದೂ ಆರೋಗ್ಯ ಸಚಿವಾಲಯ ಭಾನುವಾರ ಬಿಡುಗಡೆ ಮಾಡಿದ ವರದಿಯಲ್ಲಿ ಹೇಳಲಾಗಿದೆ.