390ನೆ ಗಡ್ಡೆ ಖಾದರ್ ಬಾಷಾ ಉರೂಸ್ ಮುಬಾರಕ್
ಸಿರುಗುಪ್ಪ : ಹಜರತ್ ಸೈಯದ್ ಷಾ ಹುಸೇನ್ ಪೀರ್ ಖಾದ್ರಿ (ರ ಆ) ಇವರ 390ನೇ ಉರೂಸ್ ಮುಬಾರಕ್ ಅಂಗವಾಗಿ ಸಂದಲ್ ಉರುಸ್ ಜಿಯಾರತ್ ಷರೀಫ್, ಹಜರತ್ ಸೈಯದ್ ಶಾ ಗೌಸ್ ಪೀರ್ ಖಾದ್ರಿ (ರ ಆ) ಸಜ್ಜಾದ ನಶೀನ್ ಮತ್ತು ಮುತವಲ್ಲಿ ಅವರ ಮಕ್ಕಳಾದ ಸೈಯ್ಯದ್ ಹಾಷಿಮ್ ಪೀರ್ ಖಾದ್ರಿ ಸೈಯದ್ ಶಾ ಹಸನ ಬಸರಿ ಖಾದ್ರಿ ಸೈಯ್ಯದ್ ಷಾ ಅಮ್ರುಲ್ಲಾ ಷಾ ಖಾದ್ರಿ ಹಾಗೂ ಬಿರಾದರ್ ಸಜ್ಜಾದೆ ಗಾನೆ ಮುಕುಂದ ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕು ಇವರ ನೇತೃತ್ವದಲ್ಲಿ ಮಹಾತ್ಮರ ಖುರಾನ್ ಫಾತೇಹ ಓದಿ ಕೆ ದೂರುದೊ ಸಲಾಮ್ ಶಾಂದಾರ್ ಮೆಹ್ಫಿಲೇ ಸಮ ಖವಾಲಿ ಕಾರ್ಯಕ್ರಮಗಳು ಜರುಗಿತು. ಸಾವಿರಾರು ಭಕ್ತಾದಿಗಳು ಮಹಾತ್ಮರ ದರ್ಶನ ಪಡೆದರು. ನದಾಫ್ ಸಂಘದ ಮಾಜಿ ಅಧ್ಯಕ್ಷ ಬಾಷಾ, ಡಾ. ಅಲಿ ಮುರ್ತೂಜಾ, ವಕ್ಫ್ ಕಮಿಟಿಯ ಮಾಜಿ ಸದಸ್ಯ ಹಾಜಿ ಅಬ್ದುಲ್ ನಬಿ, ಮಾಜಿ ಸಚಿವರು, ಮಾಜಿ ಶಾಸಕರು, ಪಕ್ಷದ ಹಾಲಿ ಶಾಸಕರು ಜಿಲ್ಲಾ, ತಾಲ್ಲೂಕು ಹಾಗೂ ಗ್ರಾಮ ಪಂಚಾಯತ್ ಅಧ್ಯಕ್ಷರು ಸದಸ್ಯರು, ನಗರಸಭೆ ಪುರಸಭೆ, ಪಟ್ಟಣ ಪಂಚಾಯತ್ ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು, ಸದಸ್ಯರು ಮುಖಂಡರು ಭಕ್ತಾದಿಗಳು ಭಾಗವಹಿಸಿ ಮಹಾತ್ಮರ ದರ್ಶನ ಆಶೀರ್ವಾದ ಪಡೆದರು. ಹಾಜಿ ಮೊಹಮ್ಮದ್ ಇಬ್ರಾಹಿಂ ಎ ಮೊಹಮ್ಮದ್ ರಫಿ ಎ ಮುಹಮ್ಮದ್ ನೌಶಾದ್ ಅಲಿ ಮೊಹಮ್ಮದ್ ಹಾಜಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.