ಮಕ್ಕಳ ಡೇ-ಕೇರ್ ಸೆಂಟರ್‌ನಲ್ಲಿ ಸಾಮೂಹಿಕ ಗುಂಡಿನ ದಾಳಿ: 34 ಮಂದಿ ಸಾವು
ಥಾಯ್ಲೆಂಡ್: ಅಕ್ಟೋಬರ್ 06: ಮಕ್ಕಳ ಡೇ-ಕೇರ್ ಸೆಂಟರ್‌ನಲ್ಲಿ ಸಾಮೂಹಿಕ ಗುಂಡಿನ ದಾಳಿ ನಡೆದಿದ್ದು, 22 ಮಕ್ಕಳು ಸೇರಿದಂತೆ ಒಟ್ಟು 34 ಮಂದಿ ಸಾವನ್ನಪ್ಪಿರುವ ಹೃದಯ ವಿದ್ರಾವಕ ಥಾಯ್ಲೆಂಡ್ ನ ಈಶಾನ್ಯ ಪ್ರಾಂತ್ಯದ ನಾಂಗ್ ಬು ಲಾಮ್ ಪು ಎಂಬಲ್ಲಿ ನಡೆದಿದೆ.
ಕನಿಷ್ಠ 31 ಮಂದಿ ಸಾವನ್ನಪ್ಪಿದ್ದಾರೆ. ಆದರೆ ಮಾಹಿತಿಯನ್ನು ಇನ್ನೂ ಕಲೆಹಾಕಲಾಗುತ್ತಿದೆ ಎಂದು ಉಪ ಪೊಲೀಸ್ ವಕ್ತಾರ ಅರ್ಚನ್ ಕ್ರೈಟಾಂಗ್ ರಾಯಿಟರ್ಸ್ಗೆ ತಿಳಿಸಿದರು.
ಆಪಾದಿತ ಶೂಟರ್ ಮಾಜಿ ಪೊಲೀಸ್ ಅಧಿಕಾರಿ ಎಂದು ತಿಳಿದು ಬಂದಿದ್ದು, ಆದರೆ ಇನ್ನೂ ಯಾವುದೇ ದೃಢಪಟ್ಟಿಲ್ಲ. ಪೋಷಕರು ಸ್ಥಳಕ್ಕೆ ಧಾವಿಸಿದ್ದು, ಆಕ್ರಂಧನ ಮುಗಿಲು ಮುಟ್ಟಿದೆ. ಪ್ರಧಾನಿ ಜನರಲ್ ಪ್ರಯುತ್ ಚಾನ್-ಓಚಾ ಅವರು ಇನ್ನೂ ತಲೆಮರೆಸಿಕೊಂಡಿರುವ ಶೂಟರ್ ನನ್ನು ಬಂಧಿಸಲು ಆದೇಶಿಸಿದ್ದಾರೆ.