ಬ್ರೆಜಿಲ್ ನಲ್ಲಿ 24 ಗಂಟೆಗಳಲ್ಲಿ 30 ಸಾವಿರ ಹೊಸ ಕರೋನ ಪ್ರಕರಣ ದಾಖಲು
ರಿಯೊ ಡಿ ಜನೈರೊ, ಸೆಪ್ಟೆಂಬರ್ 30: ಬ್ರೆಜಿಲ್ ನಲ್ಲಿ ಕಳೆದ 24 ಗಂಟೆಗಳಲ್ಲಿ ಹೊಸದಾಗಿ 32,058 ಹೊಸ ಕರೋನ ಪ್ರಕರಣಗಳು ಮತ್ತು 863 ಹೆಚ್ಚು ಸಾವಿನ ಪ್ರಕರಣ ವರದಿಯಾಗಿದೆ .
ಆರೋಗ್ಯ ಸಚಿವಾಲಯದ ಪ್ರಕಾರ, ದೇಶಾದ್ಯಂತ ಈವರೆಗೆ 4,777,522 ಸೊಂಕು ಪ್ರಕರಣಗಳು ವರದಿಯಾಗಿದ್ದು, ಸಾವಿನ ಸಂಖ್ಯೆ 142,921 ಏರಿಕೆಯಾಗಿದೆ.
ಜನಸಂಖ್ಯೆ ಹೊಂದಿರುವ ಸಾವೊ ಪಾಲೊ ರಾಜ್ಯದಲ್ಲಿ 979,519 ಸೊಂಕು ಪ್ರಕರಣಗಳು ಮತ್ತು 35,391 ಸಾವುಗಳು ಸಂಭವಿಸಿದೆ. ನಂತರದಲ್ಲಿ ರಿಯೊ ಡಿ ಜನೈರೊ ದಲ್ಲಿ 263,699 ಪ್ರಕರಣಗಳು ಮತ್ತು 18,388 ಸಾವಿನ ಪ್ರಕರಣ ವರದಿಯಾಗಿರುವುದಕ್ಕೆ ಅಧಿಕಾರಿಗಳು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.