ಮನರಂಜನೆ

ಅಮೃತ ವರ್ಷಿಣಿ ಸಿನಿಮಾಗೆ 25 ವರ್ಷ! ಸಂತಸ ಹಂಚಿಕೊಂಡ ರಮೇಶ್ ಅರವಿಂದ್

ಅಮೃತ ವರ್ಷಿಣಿ ಸಿನಿಮಾಗೆ 25 ವರ್ಷ! ಸಂತಸ ಹಂಚಿಕೊಂಡ ರಮೇಶ್ ಅರವಿಂದ್

ಬೆಂಗಳೂರು: ಜನೆವರಿ 29   ನಟ ರಮೇಶ್ ಅರವಿಂದ್-ಸುಹಾಸಿನಿ ನಟನೆಯ, ಹಾಡು, ಅದ್ಭುತ ನಟನೆಯ ಮೂಲಕ ಪ್ರೇಕ್ಷಕರ ಮನಗೆದ್ದ ಅಮೃತ ವರ್ಷಿಣಿ ಸಿನಿಮಾಗೆ ಇಂದಿಗೆ 25 ವರ್ಷ. ಈ ಸಂತಸವನ್ನು ರಮೇಶ್ ಅರವಿಂದ್ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಅಮೃತ ವರ್ಷಿಣಿಗೆ ಇಂದು 25 ವರ್ಷ! ಜಯಶ್ರೀ ದೇವಿ, ದಿನೇಶ್ ಬಾಬು, ಸುಹಾಸಿನಿ, ಶರತ್ ಬಾಬು, ನಿವೇದಿತಾ, ದೇವಾ, ಕಲ್ಯಾಣ್, ಚಿತ್ರ ಮತ್ತು ನನ್ನ ಪ್ರೀತಿಯ ಎಸ್ ಪಿ ಬಾಲಸುಬ್ರಮಣ್ಯ ಸರ್ ಅವರಿಗೆ ನಾನು ಋಣಿ. ಇಷ್ಟು ವರ್ಷಗಳ ಕಾಲ ಪ್ರಿತಿ ತೋರಿದ ಪ್ರತಿಯೊಬ್ಬರಿಗೂ ಧನ್ಯವಾದಗಳು ಎಂದು ಹೇಳಿ ಕಪ್ಪು ಬಿಳುಪು ಫೋಟೋ ಮೂಲಕ ತಮ್ಮ ಸಂತೋಷವನ್ನು ಹಂಚಿಕೊಂಡಿದ್ದಾರೆ.

ಈ ಸಿನಿಮಾದ ಪ್ರತಿಯೊಂದು ಹಾಡುಗಳು ಜನರ ಮನಸೂರೆಗೊಳಿಸಿದೆ. ೧೯೯೭ರಲ್ಲಿ ಈ ಸಿನಿಮಾ ಬಿಡುಗಡೆಯಾಗಿದ್ದು, ದಿನೇಶ್ ಬಾಬು ಆಕ್ಷನ್ ಕಟ್ ಹೇಳಿದ್ದಾರೆ. ಶರತ್ ಬಾಬು, ನಿವೇದಿತಾ ಜೈನ್, ಸುಹಾಸಿನಿ, ರಮೇಶ್ ಅರವಿಂದ್ ಅವರ ನಡುವೆ ಸುತ್ತುವ ಸಿನಿಮಾವು ಎಲ್ಲ ನಟರ ಸಹಜ ಅಭಿನಯದ ಮೂಲಕ ಎಲ್ಲರ ಪ್ರೀತಿಗೆ ಪಾತ್ರವಾಗಿತ್

ಸುದ್ದಿ ಓದಿ