ಬೆಳಗಾವಿಗೆ ಬಂದ 20 ಜನ ಬಾಂಗ್ಲಾದವರಲ್ಲ : ಬಂಗಾಳ ಮೂಲದ ಚಿನ್ನದಂಗಡಿ ಕೂಲಿ ಕಾರ್ಮಿಕರು

ಬೆಳಗಾವಿಗೆ ಬಂದ 20 ಜನ ಬಾಂಗ್ಲಾದವರಲ್ಲ : ಬಂಗಾಳ ಮೂಲದ ಚಿನ್ನದಂಗಡಿ ಕೂಲಿ ಕಾರ್ಮಿಕರು

ಬೆಳಗಾವಿ : ಬೆಳಗಾವಿಯಲ್ಲಿ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆ ಆರೋಪ ವಿಚಾರವನ್ನು ಅಲ್ಲಗಳೆಯಲಾಗಿದ್ದು, ಮಾಳ ಮಾರುತಿ ಪೊಲೀಸ್ ಠಾಣೆಯಲ್ಲಿ ಡಿಸಿಪಿ ನಾರಾಯಣ ಭರಮನಿ ನೇತೃತ್ವದಲ್ಲಿ ವಿಚಾರಣೆ ನಡೆಸಲಾಗಿದೆ. 20ಕ್ಕೂ ಹೆಚ್ಚು ಜನರ ಮೊಬೈಲ್, ಆಧಾರ್ ಕಾರ್ಡ್ ಪರಿಶೀಲನೆ ಕಾರ್ಯ ನಡೆಸಿದಾಗ ಇವರು ಬಾಂಗ್ಲಾ ವಲಸಿಗರು ಅಲ್ಲ, ಪಶ್ಚಿಮ ಬಂಗಾಳ ಮೂಲದವರು ಎಂದು ಹೇಳಲಾಗಿದೆ.

    ವಿಷಯ ಅರಿತ ಸ್ಥಳಕ್ಕೆ ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ರವಿ ಕೋಕಿತ್ಕರ್ ಭೇಟಿ ನೀಡಿ, ಬಾಂಗ್ಲಾ ವಲಸಿಗರು ಎಂದು ಅನುಮಾನ ಇದೆ. ಹುಬ್ಬಳ್ಳಿಯಲ್ಲಿ ಕೆಲವರನ್ನ ತಪಾಸಣೆ ಮಾಡಿದ್ದಾರೆ. ಮೂರು ಬಸ್‌ಗಳಲ್ಲಿ ಜನ ಬಂದಿದ್ದಾರೆ ತಪಾಸಣೆ ಮಾಡುವಂತೆ ರವಿ ಒತ್ತಾಯ ಮಾಡಿದ್ದರು. ವಿಚಾರಣೆಗೆ ಒಳಪಡಿಸಿದ ಎಲ್ಲರೂ ಪಶ್ಚಿಮ ಬಂಗಾಳ ರಾಜ್ಯದ ಮೂ¯ದವರಾಗಿದ್ದಾರೆ. ಇವರು ಸದ್ಯ ಬೆಳಗಾವಿಯ ಶಹಾಪುರದಲ್ಲಿ (ಅಕ್ಕಸಾಲಿಗ) ಚಿನ್ನಾಭರಣ ಅಂಗಡಿಗಳಲ್ಲಿ ಕೆಲಸ ಮಾಡೋ ಕಾರ್ಮಿಕರಾಗಿದ್ದು, ಇವರೆಲ್ಲರೂ ಕಳೆದ ಕೆಲವು ದಿನಗಳ ಹಿಂದಷ್ಠೇ ಪಶ್ಚಿಮ ಬಂಗಾಳದಲ್ಲಿ ನಡೆದ ವಿಧಾನ ಸಭೆಯ ಚುನಾವಣೆ ಮತದಾನದಲ್ಲಿ ಪಾಲ್ಗೊಳ್ಳಲು ಕೆಲವು ದಿನಗಳ ಹಿಂದೆ ಪಶ್ಚಿಮ ಬಂಗಾಳದಕ್ಕೆ ತೆರಳಿದ್ದರೂ. ಚುನಾವಣೆ ಮುಗಿದು ಕೆಲ ದಿನ ತಮ್ಮ ಊರುಗಳಲ್ಲಿ ಉಳಿದುಕೊಂಡು ಬಳಿಕ ಶನಿವಾರ ವಾಪಸ್ ಬೆಳಗಾವಿಗೆ ಬಂದಿದ್ದಾರೆ.

      ಶನಿವಾರ ಬೆಳಿಗ್ಗೆ ತಮ್ಮ ಸ್ವಗ್ರಾಮಗಳಿಂದ ಬೆಳಗಾವಿ ಬಸ್ ನಿಲ್ದಾಣದಕ್ಕೆ ಬಂದು ಇಳಿದುಕೊಂಡಾಗ ಅಕ್ರಮ ಬಾಂಗ್ಲಾ ವಲಸಿಗರ ಆಗಮನ ಎನ್ನುವ ಆರೋಪದ ಹಿನ್ನಲೆಯಲ್ಲಿ ಬೆಳಗಾವಿ ಬಸ್ ನಿಲ್ದಾಣದಿಂದ ಮಾಳಮಾರುತಿ ಪೊಲೀಸ ಠಾಣೆಗೆ ಕರೆದುಕೊಂಡು ಬಂದ ಪೊಲೀಸರು, 20ಕ್ಕೂ ಅಧಿಕ ಜನರ ದಾಖಲೆಗಳ ಪರಿಶೀಲನೆ ನಡೆಸಿದರು. ಪ್ರತಿಯೊಬ್ಬರ ಐಡಿ ಕಾರ್ಡ್ಗಳ ಪರಿಶೀಲನೆ ಮಾಡಿದರು. ಇವರೆಲ್ಲರೂ ಪಶ್ಚಿಮ ಬಂಗಾಳದ ಐಡಿ ಕಾರ್ಡ್ ಹೊಂದಿದ್ದು ಚುನಾವಣೆಗೆ ಹೋಗಿದ್ದೇವು. ಮತ್ತೆ ಕೆಲಸಕ್ಕೆ ಬೆಳಗಾವಿಗೆ ವಾಪಾಸ್ ಆಗ್ತಿದ್ದೇವೆ ಎಂದು ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ.
      ಬೆಳಗಾವಿಯಲ್ಲಿ ವಶಕ್ಕೆ ಪಡೆದ ಕೂಲಿ ಕಾರ್ಮೀಕರ ಗುರುತಿನ ಚೀಟೆಗಳು ನಕಲಿನಾ ಅಥವಾ ಅಸಲಿನಾ ಎಂದು ಪೊಲೀಸರು. ಪರಿಶೀಲನೆ ಮಾಡಿದ್ದಾರೆ. ಮೊಬೈಲ್ ಸಂಖ್ಯೆ, ದಾಖಲೆ ಪರಿಶೀಲನೆ ನಡೆಸಿದ ಬಳಿಕ ಡಿಸಿಪಿ ವಾಪಸ್ ತೆರಳಿದರು. ಎಲ್ಲರದ್ದೂ ಫಿಂಗರ್ ಪ್ರಿಂಟ್ ತಗೊಂಡು ಕಳುಹಿಸಲಿರುವ ಪೊಲೀಸರು ಕೆಲ ಹೊತ್ತಿನ ಬಳಿಕ 20ಕ್ಕೂ ಹೆಚ್ಚು ಜನರು ತಮ್ಮ ಸ್ಥಳಗಳಿಗೆ ವಾಪಸ್ಸಾದರು.

ಸುದ್ದಿ ಓದಿ