ಅಂತರರಾಷ್ಟ್ರೀಯ

ಉತ್ತರ ಅಫಘಾನ್ : ಐವರು ಉಗ್ರರು ಸೇರಿ 14 ಮಂದಿ ಸಾವು

ಉತ್ತರ ಅಫಘಾನ್ : ಐವರು ಉಗ್ರರು ಸೇರಿ 14 ಮಂದಿ ಸಾವು

ಕುಂಡುಜ್, ಸೆಪ್ಟೆಂಬರ್ 16: ಅಫ್ಘಾನಿಸ್ತಾನದ ಉತ್ತರ ಕುಂಡುಜ್ ಪ್ರಾಂತ್ಯದ ದಾಶ್-ಎ-ಆರ್ಚಿ ಜಿಲ್ಲೆಯಲ್ಲಿ ಬುಧವಾರ ನಡೆದ ಘರ್ಷಣೆಯಲ್ಲಿ ಐದು ಉಗ್ರರು ಮತ್ತು ಒಂಬತ್ತು ಭದ್ರತಾ ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಗವರ್ನರ್ ನಸ್ರುದ್ದೀನ್ ನಜಾರಿ ಸಾದಿ ತಿಳಿಸಿದ್ದಾರೆ.

ಸ್ಥಳೀಯ ಬಜಾರ್‌ನಲ್ಲಿ ತಾಲಿಬಾನ್ ದಂಗೆಕೋರರು ಭದ್ರತಾ ಚೆಕ್‌ಪೋಸ್ಟ್‌ಗಳ ಮೇಲೆ ದಾಳಿ ನಡೆಸಿದ ನಂತರ ಘರ್ಷಣೆ ಸಂಭವಿಸಿದೆ ಆದರೆ ಪೊಲೀಸರು ಪ್ರತಿದಾಳಿ ನಡೆಸಿದರು.  ಎರಡು ಗಂಟೆಗಳ ಕಾಲ ನಡೆದ ಗುಂಡಿನ ಚಕಮಕ್ಕಯಲ್ಲಿ  ಐದು ಮಂದಿ ದಂಗೆಕೋರರು ಮತ್ತು ಒಂಬತ್ತು ಭದ್ರತಾ ಸಿಬ್ಬಂದಿ ಸೇರಿದಂತೆ 14 ಜನರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

 ಇಬ್ಬರು ನಾಗರಿಕರು, ಐವರು ದಂಗೆಕೋರರು ಮತ್ತು ಇಬ್ಬರು ಪೊಲೀಸರು ಸೇರಿದಂತೆ ಒಂಬತ್ತು ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ. ಆದರೆ ತಾಲಿಬಾನ್ ಉಗ್ರರು ಈವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಸುದ್ದಿ ಓದಿ