ರಷ್ಯಾ ಶಾಲೆಯೊಂದರಲ್ಲಿ ಗುಂಡಿನ ದಾಳಿಯಲ್ಲಿ 13 ಸಾವು; ಬಂದೂಕುಧಾರಿ ಆತ್ಮಹತ್ಯೆ
ಮಾಸ್ಕೊ:ಸೆಪ್ಟೆಂಬರ್ 26 : ಮಧ್ಯ ರಷ್ಯಾದ ಇಝೆವ್ಸ್ಕ್ ನಗರದ ಶಾಲೆಯೊಂದರಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 13ಕ್ಕೆ ಏರಿದೆ. ಐದು ಮಕ್ಕಳು ಸೇರಿದಂತೆ ಕನಿಷ್ಠ 13 ಜನರು ಸಾವನ್ನಪ್ಪಿದ್ದಾರೆ ಎಂದು ತನಿಖಾಧಿಕಾರಿಗಳು ಸೋಮವಾರ ತಿಳಿಸಿದ್ದಾರೆ. ದಾಳಿಕೋರನು ಸ್ವಯಂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಿದರು.
ತನಿಖಾಧಿಕಾರಿಗಳ ಪ್ರಕಾರ ದಾಳಿಕೋರ ನಾಜಿ ಚಿಹ್ನೆಗಳು ಮತ್ತು ಬಾಲಾಕ್ಲಾವಾ ಹೊಂದಿರುವ ಕಪ್ಪು ವಸ್ತ್ರ ಧರಿಸಿದ್ದನು ಮತ್ತು ಯಾವುದೇ ಗುರುತಿನ ಚೀಟಿಯನ್ನು ಹೊಂದಿರಲಿಲ್ಲ. ಅವನ ಗುರುತನ್ನು ಪ್ರಸ್ತುತ ಕಂಡುಹಿಡಿಯಾಗಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ದಾಳಿಯಲ್ಲಿ ಸುಮಾರು 20 ಜನರು ಗಾಯಗೊಂಡಿದ್ದಾರೆ ಎಂದು ರಷ್ಯಾದ ಆಂತರಿಕ ಸಚಿವಾಲಯ ತಿಳಿಸಿದೆ.ಪ್ರದೇಶದ ಗವರ್ನರ್ ಅಲೆಕ್ಸಾಂಡರ್ ಬ್ರೆಚಲೋವ್ವೀಡಿಯೊ ಹೇಳಿಕೆಯಲ್ಲಿ ಮಾತನಾಡುತ್ತಾ, ಇಝೆವ್ಸ್ಕ್ ಶಾಲೆಯ No88 ಹೊರಗೆ ಮಕ್ಕಳಲ್ಲಿ ಸಾವುನೋವುಗಳಾಗಿದ್ದು ಗಾಯಗೊಂಡಿದ್ದಾರೆ ಎಂದು ದೃಢಪಡಿಸಿದರು. ದಾಳಿಯ ತಕ್ಷಣ ವೈದ್ಯಕೀಯ ಕಾರ್ಯಕರ್ತರು ಧಾವಿಸಿ ಘಟನಾ ಸ್ಥಳದಲ್ಲಿ ತುರ್ತು ಕಾರ್ಯದಲ್ಲಿ ತೊಡಗಿದರು.
ಸುಮಾರು 6, 30,000 ಜನರಿರುವ ನಗರ ಇಝೆವ್ಸ್ಕ್ ರಷ್ಯಾದ ಉಡ್ಮುರ್ಟ್ ಗಣರಾಜ್ಯದ ಪ್ರಾದೇಶಿಕ ರಾಜಧಾನಿಯಾಗಿದೆ. ಇದು ಮಾಸ್ಕೋದಿಂದ ಪೂರ್ವಕ್ಕೆ 1,000 ಕಿಲೋಮೀಟರ್ (620 ಮೈಲುಗಳು) ದೂರದಲ್ಲಿದೆ.