ಅಂತರರಾಷ್ಟ್ರೀಯ

ಇಂಡೋನೇಷ್ಯಾ ಫುಟ್ಬಾಲ್ ಪಂದ್ಯ ಹಿಂಸಾಚಾರ 127 ಮಂದಿ ಸಾವು

ಇಂಡೋನೇಷ್ಯಾ ಫುಟ್ಬಾಲ್ ಪಂದ್ಯ  ಹಿಂಸಾಚಾರ 127 ಮಂದಿ ಸಾವು

ಜಕಾರ್ತ, ಅಕ್ಟೋಬರ್ 2: ಇಂಡೋನೇಷ್ಯಾದ ಪೂರ್ವ ಜಾವಾ ಪ್ರಾಂತ್ಯದ ಮಲಾಂಗ್‌ನಲ್ಲಿ ಶನಿವಾರ ಸಂಜೆ ಫುಟ್‌ಬಾಲ್ ಪಂದ್ಯದ ನಂತರ ನಡೆದ ಹಿಂಸಾಚಾರ ಘಟನೆಯಲ್ಲಿ ಕನಿಷ್ಠ 127 ಜನರು ಸಾವನ್ನಪ್ಪಿದ್ದಾರೆ ಎಂದು ಇಂಡೋನೇಷ್ಯಾ ಪೊಲೀಸರು ಭಾನುವಾರ ತಿಳಿಸಿದ್ದಾರೆ.

ಪ್ರಾಂತೀಯ ಪೊಲೀಸ್ ಮುಖ್ಯಸ್ಥ ನಿಕೊ ಅಫಿಂತಾ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಒಂದು ತಂಡದ ಬೆಂಬಲಿಗರು ಪಂದ್ಯವೊಂದರಲ್ಲಿ ಸೋಲನ್ನು ಒಪ್ಪಿಕೊಳ್ಳದೆ ಬೇಲಿ ಮೇಲೆ ಹತ್ತಿ ಹೆಚ್ಚಿನ ಸಂಖ್ಯೆಯಲ್ಲಿ ಫುಟ್ಬಾಲ್ ಮೈದಾನಕ್ಕೆ ಪ್ರವೇಶಿಸಿದರು, ಇದರಿಂದಾಗಿ ಕಾಲ್ತುಳಿತ ಮತ್ತು ಪೊಲೀಸರೊಂದಿಗೆ ಘರ್ಷಣೆ ಸಂಭವಿಸಿದೆ. 125 ಬೆಂಬಲಿಗರು ಮತ್ತು ಇಬ್ಬರು ಪೊಲೀಸ್ ಅಧಿಕಾರಿಗಳು ಕೊಲ್ಲಲ್ಪಟ್ಟರು ಎಂದು ಹೇಳಿದ್ದಾರೆ

ಸುದ್ದಿ ಓದಿ