ಧಾರವಾಡ - ಹುಬ್ಬಳ್ಳಿ

ತ್ಯಾಗವೀರ ಸಿರಸಂಗಿ ಲಿಂಗರಾಜ ದೇಸಾಯಿ ಅವರ 120ನೇ ಪುಣ್ಯಸ್ಮರಣೆ

ತ್ಯಾಗವೀರ ಸಿರಸಂಗಿ ಲಿಂಗರಾಜ ದೇಸಾಯಿ ಅವರ 120ನೇ ಪುಣ್ಯಸ್ಮರಣೆ


ಹುಬ್ಬಳ್ಳಿ, ಆ. 23: ಹೊರಕೇರಿ ಮಾಸ್ತರ್ ಶಿಕ್ಷಣ ಪ್ರತಿಷ್ಠಾನ, ರಾಣಿ ಚನ್ನಮ್ಮ ಪರಿಸರ ಸೇವಾ ಸಮಿತಿ ಹಾಗೂ ಬಸವ ಪರಿಸರ ಸಂರಕ್ಷಣಾ ಸಮಿತಿಗಳ ವತಿಯಿಂದ ಲಿಂಗಾಯತ ಶಿಕ್ಷಣ ಸಂಸ್ಥೆಗಳ ಸ್ಥಾಪನೆಗೆ ಕಾರಣಕರ್ತರಾದ ತ್ಯಾಗವೀರ ಸಿರಸಂಗಿ ಶ್ರೀ ಲಿಂಗರಾಜ ದೇಸಾಯಿ ಅವರ 120ನೇ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ನಗರದ ಭಾರತಿನಗರದ ಶ್ರೀ ಲಿಂಗರಾಜ ವಿವಿದೋದ್ದೇಶ ಸಂಸ್ಥೆಯ ಆವರಣದಲ್ಲಿ ಆಚರಿಸಲಾಯಿತು.  

ಈ ಸಂದರ್ಭದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಸಂಸ್ಥಾಪಕ ಅಧ್ಯಕ್ಷರಾಗಿದ್ದ ಹಾಗೂ ತಮ್ಮ ಇಡೀ ಸಂಸ್ಥಾನವನ್ನೇ ಲೋಕಕಲ್ಯಾಣಕ್ಕಾಗಿ ಅರ​‍್ಿಸಿದ ಸಿರಸಂಗಿಯ ಶ್ರೇಷ್ಠ ಮಹಾದಾನಿ ಶ್ರೀ ಲಿಂಗರಾಜ ದೇಸಾಯಿ ಅವರ ಪುತ್ಥಳಿಗೆ ಮಾಲಾರೆ​‍್ಣ ಮಾಡಿ ್ಞ್ಲ್ಘ್ಲು್ಣುಹಿ್ಲೊ್ತ್ಖ್ತಿದಿ ಗೌರವ ನಮನ ಸಲ್ಲಿಸಲಾಯಿತು.  ಶಿರಹಟ್ಟಿಯ ಶ್ರೀ ಜಗದ್ಗುರು ಫಕೀರೇಶ್ವರ ಸಂಸ್ಥಾನ ಪೀಠದ ಶ್ರೀ ಮನ್ಮಹಾರಾಜ್ ನಿರಂಜನ ಜಗದ್ಗುರು ಫಕೀರ ದಿಂಗಳೇಶ್ವರ ಮಹಾಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಕಾರ್ಯಕ್ರಮ ನಡೆಯಿತು.  

ಈ ಸಂದರ್ಭದಲ್ಲಿ ಮಾತನಾಡಿದ ರಾಣಿ ಚನ್ನಮ್ಮ ಪರಿಸರ ಸೇವಾ ಸಮಿತಿಯ ಕಾರ್ಯದರ್ಶಿ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ್ಯದರ್ಶಿ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಘಟಕದ ಉಪಾಧ್ಯಕ್ಷ, ಕರ್ನಾಟಕ ವಚನ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಹಾಗೂ ಹೊರಕೇರಿ ಮಾಸ್ತರ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ಡಾ. ಸುರೇಶ ಡಿ. ಹೊರಕೇರಿ, “ವೀರಶೈವ ಲಿಂಗಾಯತ ಸಮಾಜದ ಕೋಟ್ಯಂತರ ಹಿಂದುಳಿದ ಹಾಗೂ ಬಡವರ ಮಕ್ಕಳಿಗೆ ಶಿಕ್ಷಣ ದೊರಕಬೇಕು ಎಂಬ ಮಹಾದಾಸೆಯನ್ನು ಹೊಂದಿದ್ದ ತ್ಯಾಗವೀರ ಸಿರಸಂಗಿ ಲಿಂಗರಾಜರು ಜನಮನದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ,” ಎಂದರು.  

ಶಿಕ್ಷಣ ಕ್ಷೇತ್ರಕ್ಕೆ ಮಹತ್ವದ ಕೊಡುಗೆ  

ಸಿರಸಂಗಿ ಲಿಂಗರಾಜರು ತಮ್ಮ ಇಡೀ ಸಂಸ್ಥಾನವನ್ನೇ ಲೋಕಕಲ್ಯಾಣಕ್ಕಾಗಿ ಅರ​‍್ಿಸುವ ಮೂಲಕ ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅವರ ದಾನದಿಂದಾಗಿ ಕೆ.ಎಲ್‌.ಇ. ಸಂಸ್ಥೆ, ಬಿ.ಎಲ್‌.ಡಿ. ಸಂಸ್ಥೆ, ಬಸವೇಶ್ವರ ವಿದ್ಯಾವರ್ಧಕ ಸಂಘ, ಎಚ್‌.ಕೆ.ಇ. ಹಾಗೂ ವೀರಶೈವ ಸಂಘ ಸೇರಿದಂತೆ ಹಲವು ಲಿಂಗಾಯತ ಶಿಕ್ಷಣ ಸಂಸ್ಥೆಗಳು ಆರಂಭಗೊಳ್ಳಲು ಸಾಧ್ಯವಾಯಿತು ಎಂದು ಡಾ. ಸುರೇಶ ಡಿ. ಹೊರಕೇರಿ ಸ್ಮರಿಸಿದರು.  ಸಮಾಜ ಮತ್ತು ಶಿಕ್ಷಣ ಸಂಸ್ಥೆಗಳಿಗೆ ಸಿರಸಂಗಿ ಲಿಂಗರಾಜರು ನೀಡಿದ ಮಹಾದಾನವನ್ನು ಮುಕ್ತಕಂಠದಿಂದ ಸ್ಮರಿಸಿದ ಅವರು, “ಸಿರಸಂಗಿ ಲಿಂಗರಾಜರನ್ನು ನೆನೆಯುವುದು ಒಂದು ಪುಣ್ಯ. ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆದು ಸಮಾಜಕ್ಕೆ ಆದರ್ಶವಾಗುವಂತೆ ಜೀವನ ನಡೆಸಬೇಕು,” ಎಂದು ಕರೆ ನೀಡಿದರು.  

ಕಾರ್ಯಕ್ರಮದಲ್ಲಿ ಸೋಹನ್ ಸುರೇಶ ಹೊರಕೇರಿ, ನಿವೃತ್ತ ಗ್ರಂಥಪಾಲಕ ಸಿದ್ದಯ್ಯ ಹಿರೇಮಠ, ರವೀಂದ್ರ ಕುಡವಕ್ಕಲಿಗ, ಶೇಖರ್ ಹುಬ್ಬಳ್ಳಿ, ಶ್ರೀ ಲಿಂಗರಾಜ ವಿವಿದೋದ್ದೇಶ ಸಂಸ್ಥೆಯ ಕಾರ್ಯದರ್ಶಿ ಯಲ್ಲಪ್ಪ ಹುಲಗೂರ, ರಾಣಿ ಚನ್ನಮ್ಮ ಪರಿಸರ ಸೇವಾ ಸಮಿತಿ ಹಾಗೂ ಬಸವ ಪರಿಸರ ಸಂರಕ್ಷಣಾ ಸಮಿತಿಯ ಪದಾಧಿಕಾರಿಗಳು, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಘಟಕದ ಪದಾಧಿಕಾರಿಗಳು, ಕರ್ನಾಟಕ ವಚನ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಕಾರ್ಯಕರ್ತರು, ಹೊರಕೇರಿ ಮಾಸ್ತರ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿಗಳು ಹಾಗೂ ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. 


ಸುದ್ದಿ ಓದಿ