1182ನೇ ದಿನದ ಮಹಾಲಿಂಗಪುರ ತಾಲೂಕು ಹೋರಾಟ ಸಭೆಯಲ್ಲಿ ಯಲ್ಲನಗೌಡ ಪಾಟೀಲ ಬೆಂಬಲ ಜುಲೈ 14ಕ್ಕೆ ಮಹಾಲಿಂಗಪುರ ಬಂದ್
1182ನೇ ದಿನದ ಮಹಾಲಿಂಗಪುರ ತಾಲೂಕು ಹೋರಾಟ ಸಭೆಯಲ್ಲಿ ಯಲ್ಲನಗೌಡ ಪಾಟೀಲ ಬೆಂಬಲ ಜುಲೈ 14ಕ್ಕೆ ಮಹಾಲಿಂಗಪುರ ಬಂದ್
ಮಹಾಲಿಂಗಪುರ 06: ನಿರಂತರ ಹೋರಾಟದ ಫಲವಾಗಿ ತಾಲೂಕು ಹೋರಾಟದ ಕಡತ ಮತ್ತು ಕಾಗದಪತ್ರ ಕಂದಾಯ ಇಲಾಖೆಗೆ ತಲುಪಿರುವುದು ಖುಷಿಯ ಸಂಗತಿ.ಈ ನಿಟ್ಟಿನಲ್ಲಿ ಉಸ್ತುವಾರಿ ಸಚಿವರ ಗಮನಕ್ಕೆ ತಂದು ಎಲ್ಲ ಮುಖಂಡರೊಂದಿಗೆ ನಮ್ಮ ಬೆಂಬಲವೂ ಇದೆ ಎಂದು ಪುರಸಭೆ ಅಧ್ಯಕ್ಷ ಯಲ್ಲನಗೌಡ ಪಾಟೀಲ ಹೇಳಿದರು.
ಸ್ಥಳೀಯ ಬನಶಂಕರಿ ದೇವಿ ಸಭಾಭವನದಲ್ಲಿ ನಡೆದ ಮಹಾಲಿಂಗಪುರ ತಾಲೂಕ ಹೋರಾಟ ಸಮಿತಿಯ ಸಭೆಯಲ್ಲಿ ಭಾಗವಹಿಸಿ ಹೋರಾಟದ ರೂಪುರೇಷೆಗಳ ಬಗ್ಗೆ ವ್ಯಕ್ತಪಡಿಸಿ ಮಾತನಾಡಿದರು.
ನಂತರ ತಾಲೂಕ ಹೋರಾಟ ಸಮಿತಿ ಅಧ್ಯಕ್ಷ ಸಂಗಪ್ಪ ಹಳ್ಳಿ ಮಾತನಾಡಿ ನಮ್ಮ ಹೋರಾಟ ಮೂರು ವರ್ಷ ಪೂರೈಸಿ ನಾಲ್ಕನೇ ವರ್ಷಕ್ಕೆ ಪಾದಾರೆ್ಣ ಮಾಡಿದ್ದು ಸರ್ಕಾರದಿಂದ ಯಾವುದೇ ತಾಲೂಕು ಘೋಷಣೆಯ ವಿಷಯ ತಿಳಿದಿಲ್ಲ. ಹೀಗಾಗಿ ಮುಂದಿನ ದಿನಮಾನಗಳಲ್ಲಿ ತೀವ್ರ ಹೋರಾಟಕ್ಕೆ ಇಳಿದು ಪಟ್ಟಣವನ್ನು ಬಂದ್ ಮಾಡುವ ಮೂಲಕ ತೀವ್ರ ಪ್ರತಿಭಟನೆ ಮಾಡುವೆವು ಎಂದರು.
ನಂತರ ಮಹಾಂತೇಶ ಹಿಟ್ಟಿನಮಠ, ರಂಗನಗೌಡ ಪಾಟೀಲ, ಮಹಾದೇವ ಮಾರಪುರ, ಧರೆಪ್ಪ ಸಾಂಗ್ಲೀಕರ್, ವೀರೇಶ ಅಸಂಗಿ, ಎಸ್ ಎಂ ಪಾಟೀಲ, ಗಂಗಾಧರ ಮೇಟಿ, ಶಿವಲಿಂಗ ಟಿರ್ಕಿ, ಶಿವನಗೌಡ ಪಾಟೀಲ, ಬಂದು ಪಕಾಲಿ ಸಭೆ ಉದ್ದೇಶಿಸಿ ಮಾತನಾಡಿದದರು.
ಹಿರಿಯ ಮುಖಂಡರಾದ ದುಂಡಪ್ಪ ಜಾಧವ,ಮಲ್ಲಪ್ಪ ಸಿಂಗಾಡಿ, ಮಹಾಲಿಂಗಪ್ಪ ಸನದಿ, ಮಹಾಲಿಂಗಪ್ಪ ಜಕ್ಕನ್ನವರ, ಸಲೀಮ್ ಕರೋಷಿ, ನಿಂಗಪ್ಪ ಬಾಳಿಕಾಯಿ, ಅರವಿಂದ ಮಾಲಬಸರಿ, ಚನ್ನಪ್ಪ ಪಟ್ಟಣಶೆಟ್ಟಿ, ವಿಠ್ಠಲ ಢವಳೇಶ್ವರ, ಪರಸಪ್ಪ ಕೊಣ್ಣೂರ, ವಿಠ್ಠಲ ಸಂಶಿ, ಹಣಮಂತ ಜಮಾದಾರ, ಆನಂದ ಬಂಡಿ, ಜ್ಯೋತ್ಯಪ್ಪ ಕಪರಟ್ಟಿ, ರಫೀಕ ಮಾಲದಾರ, ರಾಜು ತೇರದಾಳ, ಶಿವುಕುಮಾರ ಕೊಟಬಾಗಿ, ಮಲ್ಲಪ್ಪ ಮಿರ್ಜಿ, ಎಮ್ ಎಸ್ ಮಣ್ಣಯ್ಯನವರಮಠ, ಅನಿಲ ಒಸ್ವಾಲ, ರಾಜೇಂದ್ರ ಮಿರ್ಜಿ, ವೀರಭದ್ರ ಮುಗಲ್ಯಾಳ, ಈಶ್ವರ ಮುರಗೋಡ, ಶ್ರೀಶೈಲ ಕಲ್ಯಾಗೋಳ, ಹಣಮಂತ ವಗ್ಗರ, ದುಂಡಪ್ಪ ಇಟ್ನಾಳ, ಬಸು ಪೂಜಾರಿ, ಭೀಮಶಿ ನಾಯಕ, ಬಸಪ್ಪ ಉಳ್ಳಾಗಡ್ಡಿ, ಗೌಡಪ್ಪ ಚನ್ನಾಳ, ಕರಿಯಪ್ಪ ಮೇಟಿ, ಗೂಳಪ್ಪ ಹುಣಸಿಕಟ್ಟಿ, ಮಹಾದೇವ ಮೆಳವಂಕಿ, ಲಾಲಸಾಬ್ ನಗಾರ್ಚಿ, ಸೇರಿದಂತೆ ನಗರದ ಅನೇಕ ನಾಯಕರು ಮತ್ತು ವಿವಿಧ ಹಳ್ಳಿಗಳ ಮುಖಂಡರು ಭಾಗವಸಿದ್ದರು. ಸಿದ್ದಪ್ಪ ಶಿರೋಳ ನಿರೂಪಿಸಿ, ವಂದಿಸಿದರು.