ಅಕ್ರಮವಾಗಿ ಬಸ್ ನಲ್ಲಿ ಸಾಗಿಸುತ್ತಿದ್ದ 1.5 ಕೋಟಿ ನಗದು ಹಣ ವಶಕ್ಕೆ : ಕೊಗನೋಳಿ ಚೆಕ್ ಪೊಸ್ಟ್ ನಲ್ಲಿ ತಪಾಸಣೆ ವೇಳೆ ಪತ್ತೆ

ಅಕ್ರಮವಾಗಿ ಬಸ್ ನಲ್ಲಿ ಸಾಗಿಸುತ್ತಿದ್ದ 1.5 ಕೋಟಿ ನಗದು ಹಣ ವಶಕ್ಕೆ : ಕೊಗನೋಳಿ ಚೆಕ್ ಪೊಸ್ಟ್ ನಲ್ಲಿ ತಪಾಸಣೆ ವೇಳೆ ಪತ್ತೆ

ಬೆಳಗಾವಿ : ಅಕ್ರಮವಾಗಿ ಖಾಸಗಿ ಬಸ್ ನಲ್ಲಿ ಸಾಗಿಸುತ್ತಿದ್ದ 1 ಕೋಟಿ 50 ಲಕ್ಷ ನಗದು ಹಣವನ್ನು ಪೊಲೀಸರು ಹಾಗೂ ಎಫ್ ಎಸ್ ಟಿ ಅಧಿಕಾರಿಗಳು ವಶಕ್ಕೆ ಪಡೆದಿರುವ ಘಟನೆ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಕೊಗನೊಳಿ ಚೆಕ್ ಪೋಸ್ಟ್ ಬಳಿ ನಡೆದಿದೆ.

   ಮಹಾರಾಷ್ಟ್ರದ ಮುಂಬಯಿನಿಂದ ಆಗಮಿಸಿದ್ದ ಖಾಸಗಿ ಬಸನಲ್ಲಿದ್ದ ಪ್ರಯಾಣಿಕರು 1ಕೋಟಿ 50 ಲಕ್ಷ ಹಣವನ್ನು ಯಾವದೇ ದಾಖಲೆ ಇಲ್ಲದೆ ಅಕ್ರಮವಾಗಿ ಸಾಗಿಸುತ್ತಿದ್ದರು. ಬಳಿಕ ಖಾಸಗಿ ಬಸ್ಸು ಬೆಳಗಾವಿ ಜಿಲ್ಲೆಯ ಗಡಿ ತಾಲೂಕಿನ ನಿಪ್ಪಾಣಿ ತಾಲೂಕಿನ ಕೊಗನೊಳಿ ಚೆಕ್ ಪೋಸ್ಟ್ ನಲ್ಲಿ ಎಫ್ ಎಸ್ ಟಿ ಅಧಿಕಾರಿಗಳು ಹಾಗೂ ನಿಪ್ಪಾಣಿ ಪೊಲೀಸರು ತಪಾಸಣೆ ಮಾಡುವಾಗ ಪ್ರಯಾಣಿಕನ ಬಳಿ 1 ಕೋಟಿ 50 ಲಕ್ಷ ನಗದು ಹಣ ಪತ್ತೆಯಾಗಿದೆ. ಆದರೆ ಪ್ರಯಾಣಿಕನ ಬಳಿ ಯಾವದೇ ದಾಖಲೆ ಇಲ್ಲ ಎಂದು ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಡಾ. ಸಂಜೀವ ಪಾಟೀಲ ತಿಳಿಸಿದ್ದಾರೆ.

ಸುದ್ದಿ ಓದಿ