ಮಹಲಿಂಗಪುರ

ಉತ್ತಮ ಗೆಳೆಯರೇ ನನಗೆ ಆಸ್ತಿ: ಉಳ್ಳೇಗಡ್ಡಿ

ಉತ್ತಮ ಗೆಳೆಯರೇ ನನಗೆ ಆಸ್ತಿ: ಉಳ್ಳೇಗಡ್ಡಿ

 ಮಹಾಲಿಂಗಪುರ 05:   ಉತ್ತಮಗೆಳೆಯರು ಕೋಟಿ ಆಸ್ತಿಗಿಂತಲೂ ಹೆಚ್ಚು ನಾನು ಹಣ ಆಸ್ತಿ ಅಂತಸ್ತು ಗಳಿಸಿಲ್ಲ ಅದಕ್ಕಿಂತಲೂ ಮಿಗಿಲಾದ ದೊಡ್ಡ ಗೆಳೆಯರ ಬಳಗವೇ ಇದೆ ಅದೇ ನನ್ನ ಆಸ್ತಿ, ಗೆಳೆಯರ ಸಹಾಯವೇ ನನಗೆ ಶ್ರೀರಕ್ಷೆ ಎಂದು  ಮಹಾಲಿಂಗಪುರದ ಡಾ. ಎಸ್ ರಾಧಾಕೃಷ್ಣನ್ ಪ್ರಾಥಮಿಕ ಶಾಲೆಯ ಕಾರ್ಯದರ್ಶಿಗಳಾದ ಶಶಿಧರ್ ಉಳ್ಳಾಗಡ್ಡಿ ಹೇಳಿದರು.

 ಶಾಲೆಯ ಸಭಾಂಗಣದಲ್ಲಿ ನಡೆದ ವಿದ್ಯಾರ್ಥಿಗಳ ಬಹುಮಾನ ವಿತರಣೆ ಮತ್ತು ಗೆಳೆಯರಿಗೆ ಸವಿನೆನಪಿನ ಕಾಣಿಕೆ ಕೊಡುವ  ಮತ್ತು ಸನ್ಮಾನ ಕಾರ್ಯಕ್ರಮದಲ್ಲಿ ಹೇಳಿದರು. ಶಾಲೆಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಒಂದರಿಂದ ಏಳನೇ ತರಗತಿಯ ಮಕ್ಕಳಿಗೆ ಬಹುಮಾನ ವಿತರಣೆ ಮಾಡಿದರು.

ನಂತರ ಸಂಸ್ಥೆಯ ಕಾರ್ಯದರ್ಶಿಗಳಾದ ಶಶಿಧರ್ ಉಳ್ಳೇಗಡ್ಡಿ  ಪ್ರಾಸ್ತವಿಕ ಮಾತುಗಳನ್ನಾಡಿದರು  ನಂತರ  ಡಾ. ಎಸ್ ರಾಧಾಕೃಷ್ಣನ್ ಶಿಕ್ಷಣ ಸಂಸ್ಥೆಯ ಸಲಹಾ ಸಮಿತಿಯ ಅಧ್ಯಕ್ಷರಾದ ಮಹಾಲಿಂಗ ಗೋಕಾವಿ ಸಂಸ್ಥೆಯ ಬಗ್ಗೆ ತಮ್ಮ ವಿಚಾರಗಳನ್ನು ತಿಳಿಸಿದರು ನಂತರ ಎಸ್ಎಂ ಮುಗಳಕೋಡರವರು ಸಂಸ್ಥೆಯು ಉನ್ನತ ಮಟ್ಟದಲ್ಲಿ ಸಾಧನೆ ಮಾಡಿ ರಾಜ್ಯಕ್ಕೆ ಹೆಸರುವಾಸಿಯಾಗಲಿ ಎಂದು ಹೇಳಿದರು. ನಂತರ ಪತ್ರಕರ್ತರಾದ ಎಂಕೆ ಕುಲಗೋಡ್ ರವರು ಮಾತನಾಡಿ ಸಂಸ್ಥೆಯು ಒಳ್ಳೆಯ  ಶಿಕ್ಷಣವನ್ನು ಕೊಡುತ್ತಾ 17 ವರ್ಷ ಪೂರೈಸಿ 18ನೇ ವರ್ಷಕ್ಕೆ ಪಾದರ್ಪಣೆ ಮಾಡಿದೆ ಇನ್ನು ಉತ್ತಮ ಪ್ರಜೆಗಳನ್ನು ಸಮಾಜಕ್ಕೆ ನೀಡಲಿ  ಎಂದರು .

 ನಂತರ ಗಂಗಾಧರ ಗಾಡಿಕಾರ್ ಕಾರ್ಯಕ್ರಮದಲ್ಲಿ ಮಾತನಾಡಿ ಸಂಸ್ಥೆ ಎಂ ಎಸ್ ಉಳ್ಳೇಗಡ್ಡಿ ಅವರಿಂದ ಪ್ರಾರಂಭವಾಗಿ ಅವರ ಮಾರ್ಗದರ್ಶನದಲ್ಲಿ ನಡೆದು  ಉನ್ನತ ಸಾಧನೆ ಮಾಡುತ್ತಿದೆ ಎಂದು ಹೇಳಿದರು. ಇಂದಿನ ಸಮಾಜದಲ್ಲಿ ಕೆಲ ಯುವಕರು ದುಶ್ಚಟಗಳಿಗೆ  ಬಲಿಯಾಗುತ್ತಿದ್ದಾರೆ ಅಂತಹದರಲ್ಲಿ ಒಂದು ಗೆಳೆಯರ ಬಳಗ ಕಾರ್ಯಕ್ರಮಕ್ಕೆ ಅನ್ನದಾನ ಪ್ರಶಸ್ತಿ ಪತ್ರ ವಿತರಣೆ ಮಾಡುವ ಮೂಲಕ ಶಿಕ್ಷಣ ರಂಗಕ್ಕೆ ಸೇವೆ ನೀಡಿದ್ದಾರೆ ಅಂತಹವರಲ್ಲಿ ಶಿವಕುಮಾರ್ ಕುಳ್ಳೊಳ್ಳಿ  ಭೂ ಮಾಪಕರು ಮತ್ತು ಗಣ್ಯ ವ್ಯಾಪಾರಸ್ಥರು ಮನೀಷಾ  ಮಾರ್ಕೆಟಿಂಗ್ ನ ಮಾಲೀಕರಾದ ಸಿದ್ದು ಕಾಖಂಡಕಿ, ರಾಧಾಕೃಷ್ಣನ್ ಶಿಕ್ಷಣ ಸಂಸ್ಥೆಯ ಸಲಹಾ ಸಮಿತಿ ಅಧ್ಯಕ್ಷರಾದ ಮಹಾಲಿಂಗ ಗೋಕಾವಿ , ಅಗಸ್ತ್ಯ ಎಂಟರ್ಪ್ರೈಸಸ್ನ ಮಾಲೀಕರಾದ ಪ್ರಶಾಂತ್ ಕಡೆಮನಿ,  ಯುಕೆ ಧಾಭಾದ ಮಾಲೀಕರಾದ ಇಜಾಜ್ ಯಾದವಾಡ ಶಿಕ್ಷಕರಾದ ಗಂಗಾಧರ್ ಗಾಡಿಕಾರ ಅವರು ಸಹಾಯ ಮಾಡುವುದರ ಮೂಲಕ ಗೆಳೆತನದ ಶಕ್ತಿ ತೋರಿಸಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಮೀನಾಕ್ಷಿ ಉಳ್ಳಾಗಡ್ಡಿ ಅವರು ವಹಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ಬ್ಯಾಕೋಡ್,  ಎಮ್ ಕೆ ಕುಲಗೋಡ, ಗಾಡಿ ಕಾರ್, ಸಿದ್ದಾರೂಡ,  ರವಿ ಲಮಾಣಿ,  ದಾದನಟ್ಟಿ,  ಮನ್ನಿಕೇರಿ, ವಿದ್ಯಾದರ ಗುಡ್ಲಮನಿ , ಕಾಂಬ್ಲೆಕರ್, ಮಠ್, ಹುಣಶ್ಯಾಳ ಮತ್ತು ಇನ್ನಿತರರು ಹಾಜರಿದ್ದರು . ಶ್ರೇಯಾ ವಸ್ತ್ರದ ಹಾಗು ಸಂಗಡಿಗರು ಪ್ರಾರ್ಥನಾ ಗೀತೆಯನ್ನು ಹಾಡಿದರು. ಎಸ್ ಎಸ್ ಮೋದಿ, ಎಸ್ ಎಸ್ ಕುಂದಿ ಸ್ವಾಗತ ಭಾಷಣ ಮಾಡಿದರು. ಪಿ ಡಿ ಕಾಗಿ ಮತ್ತು ಪಿ ಎಂ ಗೊಲಭಾವಿ  ಕಾರ್ಯಕ್ರಮ ನಿರೂಪಿಸಿ ಎಲ್ ಎಸ್ ಸಣ್ಣಕ್ಕಿ ಮತ್ತು ಎ ಐ ಗೊಲಬಾವಿ ವಂದಿಸಿದರು.

ಸುದ್ದಿ ಓದಿ