ಮಹಿಳೆಯರಿಗೆ ಉನ್ನತ ತರಬೇತಿಗಳನ್ನು , ಸಾಲ ಸೌಲಭ್ಯಗಳನ್ನು ನೀಡಿ ಸ್ವಾವಲಂಬಿಯಾಗಲು ಅನುಕೂಲ ಕಲ್ಪಿಸಿ ಕೊಡಬೇಕು : ಸುನಿಲ್ ಮದ್ದಿನ

ಮಹಿಳೆಯರಿಗೆ ಉನ್ನತ ತರಬೇತಿಗಳನ್ನು , ಸಾಲ ಸೌಲಭ್ಯಗಳನ್ನು ನೀಡಿ ಸ್ವಾವಲಂಬಿಯಾಗಲು ಅನುಕೂಲ ಕಲ್ಪಿಸಿ ಕೊಡಬೇಕು : ಸುನಿಲ್ ಮದ್ದಿನ
Women should be provided with higher training and loan facilities to enable them to become self-rel

          ಕೊಲ್ಹಾರ 06 : ಜಿಲ್ಲಾ ಪಂಚಾಯತಿ ವಿಜಯಪುರ ಹಾಗೂ ತಾಲೂಕ ಪಂಚಾಯತಿ ಕೊಲ್ಹಾರ ಇವರ ಸಹಯೋಗದಲ್ಲಿ ಪಟ್ಟಣದ ಸಂತೆ ಮಾರುಕಟ್ಟೆ ಸ್ಥಳದ ಹತ್ತಿರ ತಾಲೂಕ ಪಂಚಾಯತ ಎನ್‌.ಆರ್‌.ಎಲ್‌.ಎಮ್ ಯೋಜನೆಯಡಿ ಸಂಜೀವಿನಿ ಮಾಸಿಕ ಸಂತೆಯನ್ನು  ಸುನೀಲ್ ಮದ್ದಿನ  ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿಗಳು ಸಸಿಗೆ ನೀರು ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ  ಮಾತನಾಡಿದರು ಎನ್‌.ಆರ್‌.ಎಲ್‌.ಎಮ್ ಯೋಜನೆಯಡಿಯಲ್ಲಿ ಸಮಾಜದ ಕಟ್ಟಕಡೆಯ ಮಹಿಳೆಯರಿಗಾಗಿ ಈ ಯೋಜನೆ ಬಹಳ ಸಹಕಾರಿ ಯಾಗಿದೆ. ಮಹಿಳೆಯರಿಗೆ ಉನ್ನತ ತರಬೇತಿಗಳನ್ನು ನೀಡಿ ಸಾಲ ಸೌಲಭ್ಯಗಳನ್ನು ನೀಡಿ ಸ್ವಂತ ಉದ್ಯೋಗ ಮಾಡಲು ಮತ್ತು ಸ್ವ ಸಹಾಯ ಗುಂಪಿನ ಸದಸ್ಯರುಗಳು ಸೇರಿ ಉದ್ಯಮ ಪ್ರಾರಂಭಿಸಲು ಎಲ್ಲ ರೀತಿಯ ಅನುಕೂಲಗಳನ್ನು ಕಲ್ಪಿಸಿ ಕೊಡಲಾಗುವುದು ಎಲ್ಲ ಮಹಿಳೆಯರು ಇದರ ಸದುಪಯೋಗ ಪಡೆದುಕೊಳ್ಳಬೇಕು.

       ಮಹಿಳೆಯರು ಸ್ವಾವಲಂಬನೆ ಬದುಕು ರೂಪಿಸಿಕೊಳ್ಳುವುದರಲ್ಲಿ ಹಾಗೂ ಅವರ ಆರ್ಥಿಕ ಕೈಗೆಟುಕುವಂತೆ ಉತ್ತಮ ಗುಣಮಟ್ಟದ ದಿನ ಬಳಕೆ ವಸ್ತುಗಳು, ಆಹಾರ ಪದಾರ್ಥಗಳು, ಕರಕುಶಲ ವಸ್ತುಗಳು ಹಾಗೂ ಗೃಹ ಉಪಯೋಗ  ವಸ್ತುಗಳನ್ನು ತಯಾರಿಸಿ ಗ್ರಾಮೀಣ ಜನರಿಗೆ ಸ್ಥಳೀಯವಾಗಿ ಸಿಗುವಂತೆ ಮಾಡಿ, ಅಂತರಾಷ್ಟ್ರೀಯ ಮಟ್ಟದಲ್ಲಿ ಸಂಜೀವಿನಿ ಮಹಿಳೆಯರು ಗಮನ ಸೆಳೆಯುವಂತಾಗಲಿ ಎಂದು ಹೇಳಿದರು. ತಾಲೂಕು ವಲಯ ಮೇಲ್ವಿಚಾರಕರಾದ ಕುಮಾರಿ ನೀಲಾಬಾಯಿ ಪಾಟೀಲ ಮಾತನಾಡಿ. ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದಡಿಯಲ್ಲಿ ಮಹಿಳೆಯರು ಕೃಷಿ ಮತ್ತು ಕೃಷಿಯೇತರ ಉದ್ಯೋಗ ಚಟುವಟಿಕೆಗಳನ್ನು ಮಾಡುತ್ತ ವ್ಯಾಪಾರ ಮಾಡಲು ಒಂದು ವೇದಿಕೆ ಕಲ್ಪಿಸಿಕೊಡಲಾಗಿದೆ ಇದನ್ನು ಪ್ರತಿಯೊಬ್ಬ ಮಹಿಳೆಯರು ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು, ಮಹಿಳೆ ಒಂದು ಕುಟುಂಬದ ಜವಾಬ್ದಾರಿ ಹೊತ್ತು ನಿರ್ವಹಿಸುತ್ತಾಳೆ. ಅವಳಿಗೆ ಸರಿಸಾಟಿ ಯಾರು ಇಲ್ಲ. ಎಲ್ಲ ರಂಗಗಳಲ್ಲಿ ಮಹಿಳೆಯರು ಒಳ್ಳೆಯ ಕಾರ್ಯನಿರ್ವಹಣೆಯಿಂದ ಹೆಸರು ಮಾಡಿದ್ದಾರೆ. ನಮ್ಮ ತಾಲೂಕಿನ ಸಂಜೀವಿನಿ ಒಕ್ಕೂಟವು ಮುಂಚೂಣೆಯಲ್ಲಿ ಇದೆ ಎಂದರು. ಕಾರ್ಯಕ್ರಮದಲ್ಲಿ ತಾಲೂಕಿನ ಪಂಚಗ್ಯಾರಂಟಿ  ಯೋಜನೆ ಅನುಷ್ಠಾನ ಸಮಿತಿ  ಅಧ್ಯಕ್ಷ ಸಂತೋಷ ಗಣಾಚಾರಿ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷೆ ರಾಜಮಾ ನದಾಫ , ರುಕ್ಮೀಣಿ ಬೀಳಗಿ  ಗ್ರಾಮ ಪಂಚಾಯತಿಗಳ ಒಕ್ಕೂಟದ ಪದಾಧಿಕಾರಿಗಳು ಸೇರಿದಂತೆ ಇತರರು ಇದ್ದರು. 


ಸುದ್ದಿ ಓದಿ