ಮಹಲಿಂಗಪುರ

ಮಹಾಲಿಂಗಪುರದಲ್ಲಿ ದಾಖಲೆ ಇಲ್ಲದ ಬಾರಿ ಮೊತ್ತ ಮುಟ್ಟುಗೋಲು, ಹೆಚ್ಚಿನ ತನಿಖೆಯಲ್ಲಿ ಅಧಿಕಾರಿಗಳು.

ಮಹಾಲಿಂಗಪುರದಲ್ಲಿ ದಾಖಲೆ ಇಲ್ಲದ ಬಾರಿ ಮೊತ್ತ ಮುಟ್ಟುಗೋಲು, ಹೆಚ್ಚಿನ ತನಿಖೆಯಲ್ಲಿ ಅಧಿಕಾರಿಗಳು.

ಮಹಾಲಿಂಗಪುರ : ಪಟ್ಟಣದ ಚುನಾವಣಾ ತಪಾಸಣಾ ಕೇಂದ್ರದಲ್ಲಿ ಮಂಗಳವಾರ ಸಿಬ್ಬಂದಿಗಳ ಕೂಲಂಕೂಷ ತಪಾಸಣೆಯಲ್ಲಿ ದಾಖಲೆ ಇಲ್ಲದ 70ಲಕ್ಷ ನಗದು ಹಣ ಬೆಳಕಿಗೆ ಬಂದಿರುವ ವಿಷಯವನ್ನು ರಬಕವಿ/ ಬನಹಟ್ಟಿ ತಾಲೂಕಿನ ತಹಶೀಲ್ದಾರ್ ಡಿ ಎಚ್. ಹೂಗಾರ ತಿಳಿಸಿದ್ದಾರೆ. 

ಪಾರದರ್ಶಕ ಚುನಾವಣಾ ಪ್ರಯುಕ್ತ ನಿಯೋಜಿಸಿದ ಪಟ್ಟಣದ ಎಪಿಎಂಸಿ ಹತ್ತಿರದ ತಪಾಸಣಾ ಕೇಂದ್ರದಲ್ಲಿ ಮಂಗಳವಾರ ಮಧ್ಯಾಹ್ನ 2-45ರ ಸುಮಾರಿಗೆ ಮುಧೋಳ ಕಡೆಯಿಂದ ಆಗಮಿಸಿದ ವಾಹನದಲ್ಲಿ ಸೌಹಾರ್ದ ಸಹಕಾರಿ ಬ್ಯಾಂಕ್ ಹಣ ಇದಾಗಿರಬಹುದು ಎಂದು ಶಂಕಿಸಲಾಗಿದೆ. 

 ರಬಕವಿ/ ಬನಹಟ್ಟಿ ತಾಲೂಕು ತಹಶೀಲ್ದಾರ್ ಡಿ ಎಚ್. ಹೂಗಾರ, ಸ್ಥಳೀಯ ಪೋಲಿಸ್ ಠಾಣಾಧಿಕಾರಿ ಪ್ರವೀಣ ಬಿಳಗಿ, ಹೆಚ್ಚಿನ ಚುನಾವಣಾ ತಪಾಸಣಾ ಮತ್ತು ಮುಟ್ಟುಗೋಲು ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಉತ್ತೂರು, ಬೆಟಗೇರಿ, ಕೌಜಲಗಿ ಕಡೆಗೆ ಸಾಗಿಸಲಾಗುತ್ತಿದ್ದ ಬಾರಿ ಮೊತ್ತಕ್ಕೆ ಯಾವುದೇ ಅಗತ್ಯ ದಾಖಲಾತಿಗಳು ಲಭ್ಯವಿರದ ಕಾರಣ ಪಂಚನಾಮೆ ಮಾಡಿ ಹಣವನ್ನುಮುಟ್ಟುಗೋಲು ಹಾಕಿಕೊಂಡು ತಹಶಿಲ್ದಾರ ಕಚೇರಿಗೆ ರವಾಣಿಸಿ ಹೆಚ್ಚಿನ ತನಿಖೆಗೆ ಸಿಬ್ಬಂದಿಗಳು ಅಣಿಯಾಗಿದ್ದಾರೆ. 

ಅಬ್ಸರ್ವರ್ , ಇಓ, ಫ್ಲೈಯಿಂಗ್ ಸ್ಕ್ವಾಡ್, ಮುಖ್ಯಾಧಿಕಾರಿ ಜಗದೀಶ ಈಟಿ, ಪೋಲಿಸ್ ಸಿಬ್ಬಂದಿ ಮಲ್ಲೇಶ ಲಮಾನಿ, ರಮೇಶ್ ಭೋಜನ್ನವರ, ಶಬ್ಬೀರ್ ಮುಲ್ಲಾ, ಶಿವಾನಂದ ಕುರಿ ಇದ್ದರು 

ಸುದ್ದಿ ಓದಿ