ಮಹಲಿಂಗಪುರ

ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಪದಾಧಿಕಾರಿಗಳ ಅವಿರೋಧ ಆಯ್ಕೆ

ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಪದಾಧಿಕಾರಿಗಳ ಅವಿರೋಧ ಆಯ್ಕೆ


ಮಹಾಲಿಂಗಪುರ, 17 : ನಾಗರಾಳ ಹಾಲು ಉತ್ಪಾದಕರ ಸಹಕಾರ ಸಂಘ.ನಿ ಸದಸ್ಯರಾದ ಸದಾಶಿವ.ಸಿದ್ದಪ್ಪ. ಒಡೆಯರ ನೂತನ ಅಧ್ಯಕ್ಷರಾಗಿ ಹಾಗೂ ಇನ್ನೋರ್ವ ಸದಸ್ಯೆ ಸತ್ಯವ್ವ.ಸುಭಾಸ.ಲದ್ದಿ ಇವರು ಉಪಾಧ್ಯಕ್ಷರಾಗಿ ಮಂಗಳವಾರ ಅವಿರೋಧ ಆಯ್ಕೆಯಾದರೆ, ಕಾರ್ಯದರ್ಶಿಯಾಗಿ ಮಂಜುಳಾ ಬಿ.ಪಾಟೀಲ್ ಮುಂದುವರೆದರು. 

ಇವರಿಗೆ ನಿಕಟಪೂರ್ವ ಅಧ್ಯಕ್ಷರಾದ ಈರ​‍​‍್.ಗುರ​‍್ಪ. ಅಡಕಿ ಮತ್ತು ಉಪಾಧ್ಯಕ್ಷರಾಗಿದ್ದ ರುಕ್ಮವ್ವ. ವಿಠ್ಠಲ. ಜೈನಾಪುರ ಇವರು ಊರ ಪ್ರಮುಖರ ಹೊಂದಾಣಿಕೆ ಮೆರೆಗೆ ಹತ್ತು ತಿಂಗಳ ಅಧಿಕಾರ ಅವಧಿ ಪೂರೈಸಿದರು.ತರುವಾಯ ಇನ್ನೂಳಿದ ಹತ್ತು ತಿಂಗಳ ಅವಧಿಯ ಅಧಿಕಾರವನ್ನು ಪ್ರಸ್ತುತ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರು ನಡೆಸಲಿದ್ದಾರೆ. 

ಚುಣಾವಣಾಧಿಕಾರಿ ಸಿಂಧೂರ ಸೇರಿದಂತೆ ಆಯ್ಕೆ ಪ್ರಕ್ರಿಯೆಯಲ್ಲಿ, ಗ್ರಾಮದ ಪ್ರಮುಖರಾದ ಕೆಂಚಪ್ಪ ಪಾಟೀಲ್ (ಯಜಮಾನಗೌಡ), ದುಂಡಪ್ಪ ಜೈನಾಪುರ,ಶಿವನಗೌಡ ಪಾಟೀಲ, ಶ್ರೀಶೈಲಗೌಡ ಪಾಟೀಲ್,ಎಫ್‌.ಎನ್‌. ಪಾಟೀಲ್, ಬಸವರಾಜ ರೊಳ್ಳಿ, ಸಿದ್ದಣ್ಣ ಪಾಟೀಲ್, ಬಸವರಾಜ ಬಿ.ಪಾಟೀಲ್, ಲಕ್ಷ್ಮಣ ಹಿಪ್ಪರಗಿ, ಕುಶಾಲಪ್ಪ ಪಾಟೀಲ್, ಡಾ.ಕರಡಿ, ಕೃಷ್ಣ ಅರವಳ್ಳಿ,ಬಾಬು ಬಿ.ಪಾಟೀಲ್, ಶ್ರೀಮಂತಗೌಡ ನ್ಯಾಮಗೌಡ,ಈರ​‍್ಪ ಬಡಿಗೇರ, ಅಪ್ಪಯ್ಯಪ್ಪ ಲದ್ದಿ,ಸಿದ್ದಪ್ಪ ಬಿ.ಪಾಟೀಲ್,ಬಾಲು ದಾಸರ, ಮುತ್ತಪ್ಪ ತೇಲಿ, ವಿಠ್ಠಲಗೌಡ ನ್ಯಾಮಗೌಡ ಇನ್ನೂ ಮುಂತಾದವರು ಅಭಿನಂದನೆ ಸಲ್ಲಿಸಿದ್ದಾರೆ. 


ಸುದ್ದಿ ಓದಿ