ನಾಳೆ ಬನಶಂಕರಿ ದೇವಿ ಜಾತ್ರೆ

ನಾಳೆ ಬನಶಂಕರಿ ದೇವಿ ಜಾತ್ರೆ

ಕೊಲ್ದಾರ   22: ಪಟ್ಟಣದ ಆರಾಧ್ಯ ದೇವತೆ ಬನಶಂಕರಿ ದೇವಿ ಜಾತ್ರೆ ಜ.24 ರಿಂದ 26 ರ ವರೆಗೆ ವಿಜ್ರಂಭಣೆಯಿಂದ ನಡೆಯಲಿದೆ ಬೆಳಗ್ಗೆ 10.30ಕ್ಕೆ ಬಾದಾಮಿ ಬನಶಂಕರಿ ದೇವಿ ಅರ್ಚಕ ಚಿದಂಬರ ಪೂಜಾರಿ ದೇವಿಗೆ ಅಷ್ಟೋತ್ತರ, ಕುಂಕುಮಾರ್ಚನೆ ನೆರವೇರಿಸುವರು. ರಾತ್ರಿ 7 ಗಂಟೆಗೆ ಶಂಕರ ಯಂಕಂಚಿ ನೇತೃತ್ವದ ತಂಡದಿಂದ ’ಜಾಣರ ಜಗಲಿ’ ನಗೆಹಬ್ಬ ಕಾರ್ಯಕ್ರಮ ನಡೆಯಲಿದೆ. ಜ.25 ರಂದು ಬೆಳಗ್ಗೆ 10.30ಕ್ಕೆ ಬನಶಂಕರಿ ದೇವಿಯ ರುದ್ರಾಭಿಷೇಕ ಹೋಮ ಹವನ ಕಾರ್ಯಕ್ರಮ ಹಾಗೂ ಮುತ್ತೈದೆಯರ ಆರತಿಯೊಂದಿಗೆ ಬನಶಂಕರಿ ದೇವಿ ಬೆಳ್ಳಿ ಮೂರ್ತಿ ಪಲ್ಲಕ್ಕಿ ಉತ್ಸವ, ಕುಂಭಮೇಳ, ಕಲಶದ ಮೆರವಣಿಗೆ, ನವಿಲು ಕುಣಿತ ಹಾಗೂ ವಾದ್ಯ ವೈಭವಗಳೊಂದಿಗೆ ನಡೆಯಲಿದೆ. ಅಂದೇ ರಾತ್ರಿ 10.30ಕ್ಕೆ ಜೈ ಮಾತ್ರ ಭೂಮಿ ಕಲಾ ಸಂಘ ಲಕ್ಷ್ಮೇಶ್ವರ ಇವರಿಂದ ಮಾರಿ ಕಣ್ಣು ಹೋರಿ ಮೇಲೆ ಸಾಮಾಜಿಕ ನಾಟಕ ಪ್ರದರ್ಶನ ಜರುಗಲಿದೆ. ಜ.26 ರಂದು ರಾತ್ರಿ 10.30 ರಿಂದ ಗೋಪಾಲ ಇಂಚಿಗೇರಿ, ಗೋಪಾಲ ಹೂಗಾರ ಕಲಾಸಿಂಚನ ಮೆಲೋಡಿಸ್ ತಂಡದಿಂದ ಹಾಸ್ಯ ರಸಮಂಜರಿ ಕಾರ್ಯಕ್ರಮ ನಡೆಯಲಿದ್ದು ಗೋಕಾಕದ ಲಪಂಗ ರಾಜ್ ಹಾಸ್ಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಜಾತ್ರಾ ಕಮಿಟಿ ಪ್ರಕಟಣೆ ತಿಳಿಸಿದೆ. 


ಸುದ್ದಿ ಓದಿ