ಜನಪದ ಕಲೆಯತ್ತ ಇಂದಿನ ಯುವಕರು ಆಸಕ್ತಿ ವಹಿಸುವುದು ಅವಶ್ಯಕ: ಆಚಾರ್
ಲೋಕದರ್ಶನ ವರದಿ
ಕುಷ್ಟಗಿ 29: ನಮ್ಮ ಜನಸಾಮಾನ್ಯರ ಬದುಕನ್ನು ಬಿಂಬಿಸುವಂತಹ ಮೂಲ ದೇಶಿಯ ಸೊಗಡನ್ನು ಕಾಣುವ ಮೂಲ ಜನಪದ ಕಲೆಯತ್ತ ಇಂದಿನ ಯುವಕರು ಆಸಕ್ತಿ ವಹಿಸುವುದು ಅವಶ್ಯಕವಾಗಿದೆ ಎಂದು ಪುರಸಭೆಯ ಸದಸ್ಯರಾದ ಜೆ.ಜಿ.ಆಚಾರ್ ಅವರು ಅಭಿಪ್ರಾಯ.
ಕನ್ನಡ ಮತ್ತು ಸಾಂಸ್ಕೃತಿ ಇಲಾಖೆ ಕೊಪ್ಪಳ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಸಾಂಸ್ಕೃತಿಕ ಸಮಗ್ರ ಗ್ರಾಮೀಣಾಭಿವೃದ್ಧಿ ಸಂಸ್ಥೆ ಕುಷ್ಟಗಿ ಇವರುಗಳ ಸಂಯುಕ್ತಾಶ್ರಯದಲ್ಲಿ ಸೋಮವಾರ ಬೆಳಗ್ಗೆ ಇಲ್ಲಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಏರ್ಪಡಿಸಿದ್ದ ಪ್ರಾಯೋಜಿತ ಜಾನಪದ ಸಂಗೀತ ಕಾರ್ಯಕ್ರಮವನ್ನು ಡೋಲಕ್ ನುಡಿಸುವ ಮೂಲಕ ಉದ್ಘಾಟಸಿ ಮಾತನಾಡಿದ ಅವರು ಸರಕಾರ ಕಲೆ ಕಲಾವಿದರ ಪರಂಪರೆ ಉಳಿವಿಗಾಗಿ ಯೋಜನೆ ರೂಪಿಸುವ ಅಗತ್ಯತೆ ಇದೆ ಎಂದು ನುಡಿದರು.
ಪ್ರಾಚಾರ್ಯ ಎಸ್.ಜಿ.ಖೋಚೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು ಜನಮನದ
ಮೂಲ ಹಾಡು ಜನಪದ ಕಾರಣ ಜನಪದ ಗೀತೆಗಳು ಅರ್ಥ ಪೂರ್ಣ ವಾಗಿದ್ದು ಅದರಲ್ಲಿ ಒಳ್ಳೆಯ ಸಂದೇಶ ಇರುತ್ತದೆ ಇಂತಹ ಕಾರ್ಯಕ್ರಮ ನಮ್ಮ ಕಾಲೇಜಿನಲ್ಲಿ ನೇರವೇರಿಸಿದ್ದಕ್ಕೆ ಕನ್ನಡ ಮತ್ತು ಸಾಂಸ್ಕೃತಿ ಇಲಾಖೆಗೆ ಅಭಿನಂದನೆಗಳು ಎಂದು ಹೇಳಿದರು.
ಪ್ರಾಸ್ತಾವಿಕ ವಾಗಿ ಪತ್ರಕರ್ತ ರವಿಂದ್ರ ಬಾಕಳೆ ಮಾತನಾಡಿ ಎಲೆ ಮರೆಯ ಕಾಯಿಯಂತಿರುವ ಕಲಾವಿದರಿಗೆ ಸೂಕ್ತ ವೇದಿಕೆಯನ್ನು ಕನ್ನಡ ಮತ್ತು ಸಾಂಸ್ಕೃತಿ ಇಲಾಖೆ ಪ್ರೋತ್ಸಾಹ ನೀಡುತ್ತಿದ್ದು ಬಡ ಕಲಾವಿದರಿಗೆ ಇದರಿಂದಾಗಿ ಸ್ವಲ್ಪಮಟ್ಟಿಗೆ ಆರ್ಥಿಕವಾಗಿ ಸಹಾಯವಾಗಲಿದೆ ಎಂದು ಹೇಳಿದರು .
ರಂಜಿಸಿದ ವಡಗೇರಿ ಇಲಾಖೆಯ ಪ್ರಾಯೋಜಿತ ಕಾರ್ಯಕ್ರಮದ ಹಿನ್ನೆಲೆಯಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಶರಣಪ್ಪ ವಡಗೇರಿ ಜನಪದ ಗೀತೆಗಳನ್ನು ಹಾಡಿ ರಂಜಿಸಿದರು. ಹಾಗೂ ಕುಮಾರಿ ಹೋಳೆಯಮ್ಮಗೂಡೂರು ಸಂಗಡಿಗರು ಲಾವಣಿ ಪದ ಹಾಡಿದರು. ವೇದಿಕೆಯ ಮೇಲೆ ಹಿರಿಯ ಶಿಕ್ಷಕಿ ದ್ರಾಕ್ಷಾಯಣಿ ,ಸುಮಂಗಲಾ , ಸಂಗಮೇಶ ಲೂತಿಮಠ ಉಪಸ್ಥಿತರಿದ್ದರು. ಸನ್ಮಾನ ಇದೇ ಸಂದರ್ಭದಲ್ಲಿ ಇದೇ ಕಾಲೇಜಿನಲ್ಲಿ ಸೇವೆ ಸಲ್ಲಿಸಿದ ನಿವೃತ್ತಿ ಯಾದ ಹುಸೇನಸಾಬ ಹಾಲಿಗಾಡಿಯವರಿಗೆ ಸನ್ಮಾನಿಸಲಾಯಿತು. ವಿಜಯಕುಮಾರ ಅಪ್ಪಾಜಿ ನಿರೂಪಿಸಿ ವಂದಿಸಿದರು