ಮನಸ್ಸನ್ನು ಪರಿಶುದ್ಧಗೊಳಿಸುವ ಕೆಲಸ ಸಾಹಿತ್ಯದ್ದು: ಶಾಸ್ತ್ರಿ

ಮನಸ್ಸನ್ನು ಪರಿಶುದ್ಧಗೊಳಿಸುವ ಕೆಲಸ ಸಾಹಿತ್ಯದ್ದು: ಶಾಸ್ತ್ರಿ

ಲೋಕದರ್ಶನ ವರದಿ

ಹೊನ್ನಾವರ 01: " ಸಾಹಿತ್ಯ  ಮನುಷ್ಯನ ಮನಸ್ಸನ್ನು ಪರಿಶುದ್ಧಗೊಳಿಸುವ ಕೆಲಸ ಮಾಡಬೇಕು. ಬರೆಹಗಾರರು ಸಾಹಿತ್ಯದ ಉದ್ದೇಶವನ್ನು ಅರ್ಥ ಮಾಡಿಕೊಂಡಾಗ ಮಾತ್ರ ಅವರಿಂದ ಸಮಾಜಹಿತ ಸಾಧಿಸಬಲ್ಲ ಸಾಹಿತ್ಯ ರಚನೆ ಆಗಲು ಸಾಧ್ಯ " ಎಂದು ಹಿರಿಯ ಸಾಹಿತಿ, ಪತ್ರಕರ್ತ ಎಲ್. ಎಸ್. ಶಾಸ್ತ್ರಿ ಅವರಿಲ್ಲಿ ಹೇಳಿದರು.  

ತಾಲೂಕಿನ ಕವಲಕ್ಕಿ ಗ್ರಾಮದ ಭಾರತಿ ವಿದ್ಯಾಲಯ ಸಭಾಗೃಹದಲ್ಲಿ ಡಾ. ಶ್ರೀಪಾದ ಹೆಗಡೆ ಕಣ್ಣಿ ಅವರ " ನಡೆದಷ್ಟು ದೂರ " ಎಂಬ ಕವನ ಸಂಗ್ರಹದ ಬಿಡುಗಡೆ ನಿಮಿತ್ತ ಏರ್ಪಡಿಸಲಾದ ಕವಿಗೋಷ್ಠಿಯ ಅಧ್ಯಕ್ಷ ಸ್ಥಾನದಿಂದ ಮಾತನಾಡುತ್ತಿದ್ದ ಅವರು " ಕವಿಗಳು ಕಾವ್ಯಮಾರ್ಗದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಗುರುತಿಸಿ ಅದಕ್ಕೆ ತಕ್ಕಂತೆ ಕಾವ್ಯ ರಚಿಸಿದಾಗ ಮಾತ್ರ ಅವು ತಮ್ಮ ಪ್ರಸ್ತುತತೆ ಉಳಿಸಿಕೊಳ್ಳುತ್ತವೆ. ಕಾವ್ಯವನ್ನು ಪ್ರೀತಿಸುವದರೊಡನೆ ನಾವು ಮನುಷ್ಯತ್ವವನ್ನೂ ಪ್ರೀತಿಸಬೇಕು ಮತ್ತು ಮನುಷ್ಯರಾಗಿ ಬದುಕಬೇಕು" ಎಂದು ಹೇಳಿದರು.  

ಕವಿಗೋಷ್ಠಿಯಲ್ಲಿ  ಡಾ. ಶ್ರೀಪಾದ ಶೆಟ್ಟಿ, ಸುಮುಖಾನಂದ ,ಎನ್. ಎಸ್. ಹೆಗಡೆ, ಗಣಪತಿ ಕೊಂಡದಕುಳಿ, ಕಮಲಾ ಕೊಂಡದಕುಳಿ, ಸುಬ್ರಹ್ಮಣ್ಯ ಹೆಗಡೆ ಅಬ್ಳಿ,   ಸುಧಾ ಭಂಡಾರಿ, ಡಾ. ರಾಜು ಹೆಗಡೆ ಪದ್ಯಾಣ ಗೋವಿಂದ ಭಟ್ಟ, ರಾಮಮೂತರ್ಿ ನಾಯಕ, ಸುರೇಶ ನಾಯ್ಕ, ಬಿಂದು ಅವಧಾನಿ, ರಂಗನಾಥ , ಎಂ. ಎಸ್. ಹೆಗಡೆ, ಜಯಶ್ರೀ ಕಣ್ಣಿ ನಾಗರಾಜ ಅಪಗಾಲ, ಪ್ರಶಾಂತ ಮೂಡಲಮನೆ , ಜಿ. ಎಸ್. ಹೆಗಡೆ ಮೊದಲಾದವರು ಕವನಗಳನ್ನೋದಿದರು.  

ನಂತರ ಖ್ಯಾತ ವಿಮರ್ಶಕ ಡಾ. ಎಸ್. ಎಚ್. ರಾಘವೇಂದ್ರ ರಾವ್ ಅವರು ಕೃತಿ ಬಿಡುಗಡೆ ಮಾಡಿದರು. ಡಾ. ಎನ್ ಆರ್.  ನಾಯಕ ಅಧ್ಯಕ್ಷತೆ ವಹಿಸಿದ್ದರು. ಡಾ. ಜಿ. ಎಸ್. ಹೆಗಡೆ, ಕೃಷ್ಣಮೂತರ್ಿ ಹೆಬ್ಬಾರ, ಎಂ. ಟಿ. ಹೆಬ್ಬಾರ. ಮೊದಲಾದವರು ಉಪಸ್ಥಿತರಿದ್ದರು.  

ಇದೇ ಸಂದರ್ಭದಲ್ಲಿ ಕಣ್ಣಿಯವರ ಭಾವಗೀತೆಗಳನ್ನು ಹಾಡಲಾಯಿತು ಮತ್ತು ಪಂ. ಅಶೋಕ ಹುಗ್ಗಣ್ಣವರರಿಂದ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಿತು. ಗೋಪಾಲಕೃಷ್ಣ ಹೆಗಡೆ ಕಲಬಾಗ ಮತ್ತು ಹರಿಶ್ಚಂದ್ರ ನಾಯಕ ತಬಲಾ ಹಾಮರ್ೊನಿಯಂ ಸಾಥ್ ನೀಡಿದರು. 

ಸುದ್ದಿ ಓದಿ