ಕಥೆ ಮತ್ತು ವಿಶೇಷ ಲೇಖನಗಳು

ಜೀವನದ ಯಶಸ್ಸಿಗೆ ಪ್ರಯತ್ನವೆಂಬ ಅಸ್ತ್ರ ಬೇಕು

ಜೀವನದ ಯಶಸ್ಸಿಗೆ ಪ್ರಯತ್ನವೆಂಬ ಅಸ್ತ್ರ ಬೇಕು

-ಡಾ. ಹೇಮಾವತಿ ಸೊನ್ನೊಳ್ಳಿ 

ಬೆಳಗಾವಿ 

ಕೇದಾರ ಪಿ.ಯು.ಸಿ ಎರಡನೇ ವರ್ಷದಲ್ಲಿ ಓದುತ್ತಿದ್ದ ಅವನಿಗೆ ಪಾಸಾಗಬೇಕೆನ್ನುವ ಹಂಬಲ ಬಹಳ. ಆದರೆ ಓದಿನ ಕಡೆಗೆ ಗಮನವನ್ನು ಹರಿಸುತ್ತಿರಲಿಲ್ಲ ಬರಿ ಆ ಈ ಕಡೆ ತಿರುಗಾಡುವುದು. ಗೆಳೆಯರೊಂದಿಗೆ ಮಜಾ ಮಾಡುವುದು. ಸಮಾರಂಭ ಮದುವೆಗಳಿಗೆ  ಹಾಜರಿರುವುದು ಹೀಗೆ ಮಾಡುತ್ತಾ ತನ್ನ ಪಾಸಾಗುವ ಉದ್ದೇಶ ಏನಿದೆ ಅದರೆಡೆಗೆ ಲಕ್ಷ ಕೊಡದೆ ವೃಥಾ ಕಾಲಹರಣ ಮಾಡುತ್ತಿದ್ದ ಗುರುವೃಂದವರು ಅವನನ್ನು ಕರೆದು ಬುದ್ಧಿ ಹೇಳಿದರೂ ಅಭ್ಯಾಸದೆಡೆಗೆ ಗಮನವನ್ನೇ ನಹರಿಸಲಿಲ್ಲ ವಾಷರ್ಿಕ ಪರೀಕ್ಷೆ ಸನಿಹ ಬರತೊಡಗಿದ್ದರೂ ಓದಿನೆಡೆಗೆ ಅಲಕ್ಷವನ್ನೇ ಮಾಡಿದ ಇದರಿಂದ ಪಾಸಾಗಬೇಕೆಂದು ಬಯಸಿದ ಅವನು ಅನುತ್ತೀರ್ಣನಾದ. ಫೇಲಾದುದನ್ನು ತುಂಬಾ ಮನಸ್ಸಿಗೆ ಹಚ್ಚಿಕೊಂಡು ಮನದ ಒಳಗೆ ಹಳಹಳಿ ಮಾಡಿಕೊಳ್ಳತೊಡಗಿದ ಓದುವ ಪ್ರಯತ್ನ ಮಾಡದೇನೆ ಮತ್ತೆ ಮರು ಪರೀಕ್ಷೆಗೆ ಕುಳಿತು ಮತ್ತೆ ಫೇಲಾದ ಆಗ ಹತಾಶಾ ಭಾವನೆಯಿಂದ ನಾನು ಪಾಸ ಆಗುತ್ತಿರಲಿಲ್ಲ ಎಂದು ಒಳಗೊಳಗೇ ಚಿಂತಾಕ್ರಾಂತನಾದ.

ವಾದಿರಾಜ ಅವರಿಗೆ ರಾಜಕೀಯ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು ದಿನದಿಂದ ದಿನಕ್ಕೆ ಆ ಕ್ಷೇತ್ರದಲ್ಲಿ ಜನಪ್ರಿಯತೆಯನ್ನು  ಪಡೆದುಕೊಳ್ಳುತ್ತಿದ್ದರು. ಬೇರೆಯವರು ಎಂ.ಎಲ್.ಎ. ಆಗಿ ಆರಿಸಿ ಬರುವದನ್ನು ಕಂಡು ತಾವೂ ಚುನಾವಣೆಗೆ ನಿಂತು ಆರಿಸಿ ಬಂದು ಎಂ.ಎಲ್. ಎ. ಆಗಬೇಕೆನ್ನುವ ಕನಸನ್ನು  ಹೊತ್ತುಕೊಂಡಿದ್ದರು ಅದೇ ನಿಟ್ಟಿನಲ್ಲಿ ಚುನಾವಣೆ ಸ್ಪಧರ್ಿಸಲು  ಸನ್ನದ್ಧರಾದರು. ಚುನಾವಣೆಯ ಫಲಿತಾಂಶ ಬಂದಾಗ ಅವರು ಸೋಲನ್ನು ಅನುಭವಿಸಿದ್ದರು ತಾನು ಗೆದ್ದು ಶಾಸಕನಾಗಬೇಕೆಂಬ ಅವರ ಉತ್ತಮ ಇಚ್ಛೆಗೆ ನೀರನ್ನು ಹನಿಸಿದಂತಾಯಿತು. ಸೋಲನ್ನೇ ಗಂಭೀರವಾಗಿ ತೆಗೆದುಕೊಂಡು ಅದನ್ನೇ ಚಿಂತಿಸುತ್ತಾ ಕುಳಿತರು ಒಂಥರಾ ಅವರು ಸೋತದ್ದರಿಂದ ನನ್ನ ಅವಮಾನವಾಯಿತು ಅನ್ನೋ ರೀತಿಯಲ್ಲಿ ಮನಸ್ಸಿಗೆ ಹಚ್ಚಿಕೊಂಡು ಬಿಟ್ಟರು ನಾಲ್ಕು ಜನರೊಂದಿಗೆ ಬೆರೆಯುವುದನ್ನು ಬಿಟ್ಟು ಯೋಚನೆ ಮಾಡುತ್ತಾ ಮನೆಯಲ್ಲೇ ಹೆಚ್ಚಿಗೆ ಕುಳಿತುಕೊಳ್ಳತೊಡಗಿದರು. ನಾನು ಶಾಸಕನಾಗಿ ಆರಿಸಿ ಬರಲಿಲ್ಲವಲ್ಲಾ ಎಂಬುದನ್ನೇ ದೊಡ್ಡ ವೇದನೆಯನ್ನಾಗಿಸಿಕೊಂಡು ನಿರಾಸೆಯ ಕಾಮರ್ೊಡಿನಲ್ಲಿ ಮುಳುಗಿ ಹೋದರು.

ಶಕುಂತಲಾ ವಿದ್ಯಾಥರ್ಿದೆಸೆಯಿಂದರೂ ಓಟದ ಸ್ಫಧರ್ೆಗಳಲ್ಲಿ ಪ್ರಥಮ ಸ್ಥಾನವನ್ನೇ ಪಡೆಯುತ್ತಿದ್ದಳು. ಎಂದೂ ಅವಳು ಓಟದಲ್ಲಿ ಮುಂದು ಓಟದ ಸ್ಫಧರ್ೆ ಇದ್ದರೆ ತುಂಬಾ ಖುಷಿ ಅವಳಿಗೆ ಓಟ ಅವಳು ಶುರು ಹಚ್ಚಿಕೊಂಡರೆ ಮೊದಲ ಸ್ಥಾನ ಪಡೆಯುವುದು ಖಚಿತವೇ ಶಿಕ್ಷಕ ವೃಂದದವರು ಹಾಗೂ ಅವಳ ಓಟ ನೋಡಿದ ಪ್ರೇಕ್ಷಕರು ಅವಳು ಗುಣಗಾನ ಮಾಡೆ ಮಾಡುತ್ತಿದ್ದರು. ಇದರಿಂದ ಅವಳಿಗೆ ಹೆಚಿನ ಸ್ಫೂತರ್ಿ ದೊರಕಿದಂತಾಗುತ್ತಿತ್ತು ಹೀಗೆ ಓಟದ ಸ್ಫಧರ್ೆಗಳಲ್ಲಿ ಭಾಗವಹಿಸುತ್ತಾ ತಾಲುಕಾ, ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಪ್ರಥಮ ಸ್ಥಾನವನ್ನು ಪಡೆದು ಗೋಲ್ಡ ಮೆಡಲ್ಗಳನ್ನು ಬಾಚಿಕೊಳ್ಳುತ್ತಾ ಸಾಗಿದಳು. ಅಂತರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕವನ್ನು ಪಡೆಯಲೇ ಬೇಕೆನ್ನುವ ಹಿರಿಯಾಸೆ ಅವಳದಾಗಿತ್ತು. ಅಂತರಾಷ್ಟ್ರೀಯ ಓಟದ ಸ್ಫಧರ್ೆಯ ತುಂಬಾ ಉತ್ಸುಕತೆಯಿಂದ ಭಾಗವಹಿಸಿದ್ದಳು ಆದರೆ ಅಲ್ಲಿ ಅವಳು ಸೋಲಿನಕಹಿಯನ್ನು ಅನುಭವಿಸಬೇಕಾಯಿತು. ಸೋಲುಂಡ ಅವಳು ಅದನ್ನೆ ತಲೆಗೇರಿಸಿಕೊಂಡು ನೊಂದು ಬೆಂದು ಹೋಗುತೊಡಗಿದ್ದಳು. ಸೋಲಿನ ಹತಾಶೆಯಿಂದ ಹೊರಬರಲು ಅವಳಿಗೆ ತುಂಬಾನೆ ದುಸ್ತರವಾಗತೊಡಗಿತು.

ಅರುಣಾಳ ಮದುವೆಯಾಗಿ ಎರಡು ವರ್ಷಗಳಾಗಿದ್ದವು. ಎಲ್ಲ ಹೆಣ್ಣುಮಕ್ಕಳಿಗಿರುವಂತೆ. ಮಕ್ಕಳನ್ನು ಪಡೆಯಬೇಕೆನ್ನುವ ಆಶೇ ಅವಳದಾಗಿತ್ತು ಇನ್ನೂ ತನಗೆ ಗರ್ಭ ನಿಲ್ಲವಲ್ಲದಲ್ಲ ಎಂಬುದನ್ನೇ ಯಾವಾಗಲೂ ಚಿಂತಿಸುತ್ತಿದ್ದಳು ಅತ್ತೆ ಮನೆಯಲ್ಲಿ  ಯಾರಾದರೂ, ನೆರೆಹೊರೆಯವರು, ಸಂಬಂಧಿಕರು ಹೀಗೆ ಯಾರಾದರೂ ಅವಳಿಗೆ ಇನ್ನೂ ಮಕ್ಕಳಾಗಿಲ್ಲವೇ ಎಂದು ಕೇಳಿದಾಗ ಮನಸ್ಸಿಗೆ ನೋವಾದಂತಾಗಿ ಕಣ್ಣೀರೆ ಬಂದು ಬಿಡುತ್ತಿದ್ದವು ಗಂಡ ಒಳ್ಳೆಯವನಿದ್ದ ತನ್ನ ದುಃಖವನ್ನು ಗಂಡನೆದುರಿಗೆ ತೋಡಿಕೊಳ್ಳುತ್ತಿದ್ದಳು. ಗಂಡನು ಅವಳನ್ನು ಸಂತೈಸಿ ಮನಸ್ಸಿಗೆ ಹಚ್ಚಿಕೊಂಡು ಕೊರಗಬೇಡ ಇನ್ನೂ ಕಾಲಾವಕಾಶ ಇದೆ ಮಕ್ಕಳಾಗುತ್ತವೆ ಎಂದು ಸಮಾಧಾನ ಹೇಳುತ್ತಿದ್ದ ಆದರೂ ಅರುಣಾ ಮಕ್ಕಳಾಗದಿದ್ದುದರ ಬಗ್ಗೆ ಮನದಲ್ಲೆ ಕೊರಗುತ್ತಾ ಕೃಶವಾಗತೊಡಗಿದ್ದಳು. ಅವಳ ಪತಿ ಇಬ್ಬರೂ ಕೂಡಿ ತಜ್ಞ ವೈದ್ಯರಿಗೆ ತೋರಿಸಿ ಉಪಚಾರ ಪಡೆಯೋದಿ ನಡೆ ಎಂದ ಅದಕ್ಕೂ ಅವಳು ತಯಾರಿರಲಿಲ್ಲ. ತನ್ನ ಕಡೆಗೇ ದೋಷವಿದೆ ಎಂದು ಡಾಕ್ಟರ್ ಹೇಳಿದರೆ ಹೇಗಪ್ಪಾ ಎಂಬ ಚಿಂತೆ ಅವಳನ್ನು ಕಾಡುತ್ತಿತ್ತು ಆ ಮೇಲೆ ಗಂಡನ ಮನೆಯವರು ತನ್ನ ಗಂಡನಿಗೆ ಬೇರೆ ಮದುವೆ ಮಾಡುತ್ತಾರೆ ಎಂಬ ಅಳುಕಿನಿಂದ ಗಂಡ ಡಾಕ್ಟರ್ಲ್ಲಿಗೆ ಹೋಗಲು ತಯಾರಿದ್ದರೆ ಇವಳು ತಯಾರಿರಲಿಲ್ಲ.

ಇದೇಕೆ  ಹೀಗೆ ಅಂತಾ? ಆಶೆಗಳು ಮತ್ತು ಸಮಸ್ಯೆಗಳು ಪ್ರತಿಯೊಬ್ಬರ ಜೀವನದಲ್ಲಿ ಒಂದಿಲ್ಲೊಂದು ರೀತಿಯಿಂದ ಹಾಸು ಹೊಕ್ಕಾಗಿರುತ್ತವೆ. ಆಶೆಗಳನ್ನು ಈಡೇರಿಸಿಕೊಳ್ಳಲು ಮತ್ತು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಪ್ರಯತ್ನ ಮಾಡಬೇಕೆ ಹೊರತು ಅದನ್ನೇ ಚಿಂತೆ ಮಾಡುತ್ತಾ ಕುಳಿತುಕೊಳ್ಳಬಾರದು. ಚಿಂತೆಯಿಂದ ಏನೂ ಪ್ರಯೋಜನವಿಲ್ಲ "ಚಿಂತೆ ಸತ್ತವರನ್ನು ಸುಟ್ಟರೆ ಚಿಂತೆ ಎನ್ನುವುದು ಜೀವಂತ ಇದ್ದವರನ್ನು ಸುಡುತ್ತದೆ" ನಾವು ನಿರಾಶೆರಾಗದೇ  ಪ್ರಯತ್ನವನ್ನು ನಿರಂತರ ಮಾಡಬೇಕೆ ಹೊರತು ಆಗುವುದಿಲ್ಲ ಎಂದು ಕೈ ಚೆಲ್ಲಿ ಕುಳಿತುಕೊಳ್ಳವುದು ಹೇಡಿಗಳ ಲಕ್ಷಣ ಪ್ರಯತ್ನವಿಲ್ಲದೆ ಫಲ ದೊರೆಯಲು ಸಾಧ್ಯವೇ ಇಲ್ಲಾ ಪ್ರಯತ್ನವೆಂಬ ಏಣಿಯನ್ನು ಏರಿ ಸಾಧಿಸಲಾಗದನ್ನು ಸಾಧಿಸಿದವರೂ ಇದ್ದಾರೆ. ಅಂಧವರನ್ನು ನಾವು ಆದರ್ಶವಾಗಿರಿಸಿಕೊಂಡು ಪ್ರಯತ್ನ ಮಾಡುತ್ತಲೇ ಇದ್ದರೆ ನಾವು ಜೀವನದಲ್ಲಿ ಸಫಲರಾಗುವುದು ನಿಶ್ಚಿತ ಅದಕ್ಕೆ ನಾವು ಜೀವನದ ದಾರಿಯನ್ನು ಯಶವಿ ರೀತಿಯಿಂದ ಸಾಗಿಸಲು ಪ್ರಯತ್ನವೆಂಬ ಅಸ್ತ್ರ ಬೇಕೆಂಬುದೇ ನನ್ನ ಅಭಿಪ್ರಾಯ.


ಸುದ್ದಿ ಓದಿ