ಮಕ್ಕಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ತುಂಬಾ ಮಹತ್ವದ್ದು: ಎಸ್ ಎಂ ಮುಲ್ಲಾ
ಮಹಾಲಿಂಗಪುರ 21: ಮಕ್ಕಳ ಉತ್ತಮ ಭವಿಷ್ಯ ರೂಪಿಸುವಲಿ ಎಲ್ಲಾ ಶಿಕ್ಷಕರ ಪಾತ್ರ ತುಂಬಾ ಮಹತ್ವವಾದದ್ದು ಎಂದು ಮುಧೋಳರ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಸ್ಎಂ ಮುಲ್ಲಾ ರವರು ಮಹಾಲಿಂಗಪುರ ಸಮೀಪದ ಕೆಸರಗೊಪ್ಪ ಸರಕಾರಿ ಪ್ರೌಢಶಾಲೆಯಲ್ಲಿ ನಡೆದ ಹಿಂದಿ ವಿಷಯದ ಕಾರ್ಯಗಾರದಲ್ಲಿ ಶಿಕ್ಷಕರಿಗೆ ಹೇಳಿದರು.
ವಿಷಯ ಕಾರ್ಯಗಾರದ ಅಧ್ಯಕ್ಷತೆಯನ್ನು ಕೆಸರಗೊಪ್ಪದ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಸಿವಿ ಚೌದರಿ ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ಅಕ್ಕಿಮರಡಿ ಸರಕಾರಿ ಪ್ರೌಡ ಶಾಲೆಯ ಮುಖ್ಯೋಪಾಧ್ಯಾಯರಾದ ಮತ್ತು ಹಿಂದಿ ವಿಷಯದ ನೋಡಲ ಅಧಿಕಾರಿಗಳಾದ ಎಸ್ಎಂ ಸುತಾರ್ ಅವರು ವಹಿಸಿಕೊಂಡಿದ್ದರು.
ವೇದಿಕೆ ಮೇಲೆ ಎಸ್ ಬಿ ರಡ್ಡೆರಟ್ಟಿ , ವಿ ಎಸ್ ಪಡತಾರೆ, ಎಂ ಜಿ ಅಲ್ಲಾಖಾನ, ಏನ್ ಎಲ್ ಪಮ್ಮಾರ, ಎಸ್ ಭಾವನಾವರ, ಹೆಚ್ ಎಲ್ ನಾಯಿಕ್, ಎ ವಿ ಹಜೇರಿ ಉಪಸ್ಥಿತರಿದ್ದರು. ವಿಷಯ ಸಮೂಹದ ಮೊದಲನೇ ಅವಧಿಯನ್ನು ಹಸೀನಾ ಬಿ ಹೆಚ್, ಎರಡನೇ ಅವಧಿಯನ್ನು ಬಿ ಬಿ ಪೂಜಾರಿ, ಮೂರನೇ ಅವಧಿಯನ್ನು ಜೆ ಪಿ ಗುಳೇದಗುಡ್ಡ, ನಾಲ್ಕನೇ ಅವಧಿಯನ್ನು ಎಚ್ ಎಲ್ ನಾಯಕ , ಎ ವಿ ಹಜೇರಿ ತೆಗೆದುಕೊಂಡು ಹಿಂದಿ ವಿಷಯದ ದೋಹೆ, ಕಾರಕ ಅಂಶಗಳು, ಕಲಿಕಾಂಶಗಳನ್ನು ಚರ್ಚಿಸಲಾಯಿತು. ನಂತರ ಹಿಂದಿ ವಿಷಯದ ಕಾರ್ಯಗಾರಕ್ಕೆ ಆಗಮಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಸ್ಎಂ ಮುಲ್ಲಾ ರವರು ಶಿಕ್ಷಕರೊಡನೆ 2023 24ನೇ ಸಾಲಿನಲ್ಲಿ ಎಲ್ಲಾ ವಿಷಯಗಳಲ್ಲಿ ಎಲ್ಲಾ ವಿದ್ಯಾರ್ಥಿಗಳು ಉತ್ತಮ ಸಾಧನೆಯನ್ನು ಮಾಡಬೇಕು. ಪ್ರತಿ ಶಾಲೆಯಿಂದ ಕನಿಷ್ಠ ಒಬ್ಬ ವಿದ್ಯಾರ್ಥಿಯಾದರೂ 625ಕ್ಕೆ 625 ಅಂಕಗಳನ್ನು ಪಡೆಯುವಂತೆ ಎಲ್ಲ ಶಿಕ್ಷಕರು ಸಿದ್ಧತೆ ಮಾಡಬೇಕೆಂದರು,.
ಎಲ್ಲ ಶಿಕ್ಷಕರು ಮಕ್ಕಳಿಗೆ ಶಿಕ್ಷಣ ಜೊತೆಗೆ ಸಂಸ್ಕಾರವನ್ನು ಕಲಿಸಿ ಒಳ್ಳೊಳ್ಳೆ ಪುಸ್ತಕಗಳನ್ನು ನೀವು ಓದಿ ಮಕ್ಕಳಿಗೆ ಅದರ ಬಗ್ಗೆ ಮಾಹಿತಿಯನ್ನು ನೀಡಬೇಕೆಂದರು,ನಂತರ ಕಳೆದ ಸಾಲಿನಲ್ಲಿ 13 ವಿದ್ಯಾರ್ಥಿಗಳಿಗೆ ಹಿಂದಿ ವಿಷಯದಲ್ಲಿ ನೂರಕ್ಕೆ ನೂರು ಅಂಕಗಳನ್ನು ಗಳಿಸಲು ಮಾರ್ಗದರ್ಶನ ಮಾಡಿದ ಎಂ ಡಿ ಆರ್ ಎಸ್ ಹೆಬ್ಬಾಳ ಶಾಲೆಯ ಹಿಂದಿ ಶಿಕ್ಷಕರಾದ ರಮೇಶ್ ಲಮಾಣಿ ಅವರನ್ನು ಪ್ರಶಂಶಸಿದರು. ಮತ್ತು ಅದೇ ಸಾಲಿನಲ್ಲಿ 10 ವಿದ್ಯಾರ್ಥಿಗಳಿಗೆ ಹಿಂದಿ ವಿಷಯದಲ್ಲಿ ನೂರಕ್ಕೆ ನೂರು ಅಂಕ ಗಳಿಸಲು ಮಾರ್ಗದರ್ಶನ ಮಾಡಿದ ಬೆಳಗಲಿ ವಿದ್ಯಾವರ್ಧಕ ಸಂಘದ ಪ್ರೌಢಶಾಲೆಯ ಶಿಕ್ಷಕ ಎಸ್ ಬಿ ರಡ್ದೆರಟ್ಟಿ ಅವರನ್ನು ಕೂಡ ಪ್ರಶಂಶಿಸಿದರು. ನಂತರ ಕಾರ್ಯಗಾರದ ಮುಖ್ಯ ಅತಿಥಿಗಳು ಮತ್ತು ಹಿಂದಿ ವಿಷಯ ಸಮೂಹದ ನೋಡಲ್ ಅಧಿಕಾರಿಗಳು ಆದ ಎಸ್ಎಮ್ ಸುತಾರ್ ಅವರು ನಾವೆಲ್ಲರೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮಾರ್ಗದರ್ಶನವನ್ನು ಅಚ್ಚುಕಟ್ಟಾಗಿ ಪಾಲಿಸಿ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡಿ ಈ ವರ್ಷದ ಫಲಿತಾಂಶವನ್ನು ಹೆಚ್ಚಿಸಲು ನಾವೆಲ್ಲರೂ ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತೇವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಎಲ್ಲ ಶಿಕ್ಷಕರ ಪರವಾಗಿ ಭರವಸೆ ನೀಡಿದರು. ನಂತರ ಕಾರ್ಯಗಾರದಲ್ಲಿರುವ ಎಲ್ಲ ಶಿಕ್ಷಕರ ಬಳಗದವರು ಸೇರಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸ್ಪೂರ್ತಿ ಎಂಬ ಪುಸ್ತಕ ನೀಡಿ ಸನ್ಮಾನಿಸಿದರು ಕಾರ್ಯಕ್ರಮವನ್ನು ಬಿ ಆರ್ ಕಲಂದರ್ ಸ್ವಾಗತಿಸಿ ವಿ ಸಿ ಶಿರೋಳ ನಿರೂಪಿಸಿ ಎಚ್ ಎಲ್ ನಾಯಕ್ ವಂದಿಸಿದರ