ಕಥೆ ಮತ್ತು ವಿಶೇಷ ಲೇಖನಗಳು

ಶಿಕ್ಷಣದ ಶಕ್ತಿ

ಶಿಕ್ಷಣದ ಶಕ್ತಿ

 -ಪ್ರಭಾ .ಅ. ಪಾಟೀಲ

  ಆಂಜನೇಯ ನಗರ ಬೆಳಗಾವಿ

ನಾ ಹೇಳ ಹೊರಟಿರುವುದು 30 40 ವರ್ಷ ಹಿಂದಿನ ವಿಷಯ ನಮ್ಮ ದೊಡ್ಡಮ್ಮ ಸುಮಿತ್ರ ಹಳ್ಳಿಯಲ್ಲಿ ಹುಟ್ಟಿ ಹಳ್ಳಿಯಲ್ಲಿ ಬೆಳೆದವರು, ಹೆಣ್ಣು ಮಕ್ಕಳಿಗೆ ಬಾಳ ಸಾಲಿ ಕಲಿಸಬಾರದು ಎನ್ನುವ ವಿಚಾರ ದವರು ಮನೆಯಲ್ಲಿ ಏನೇ ತಿಂಡಿ ಮಾಡಿದರು ಮೊದಲ ಗಂಡು ಮಕ್ಕಳ ಗಂಡ ನಿಗೇ ಮೊದಲ ಪಾಲು ನಂತರ ನಮಗೆ. 

ನಾನು ಈ ವಿಷಯಕ್ಕೆ ಅನೇಕ ಸಾರಿ ಜಗಳ ಮಾಡಿದ್ದು ಉಂಟು ಅವರ ಜೊತೆ ಈಗ ಅವರಿಗೆ ಎಪ್ಪತ್ತೈದು ವಯಸ್ಸು ಇನ್ನೂ ಸ್ವಲವೂ  ಬದಲಾಗಿಲ್ಲ ಆದರೆ ಈಗ ನಾಲ್ಕು ವರ್ಷದ ಕೆಳಗೆ ಅವರ ಈ ವಿಚಾರ ತಪ್ಪು ಎನ್ನುವ ರೀತಿ ಒಂದು ಘಟನೆ ನಡೆಯಿತು ಅವರ ತಂಗಿ ಮಗಳು ಸೌಮ್ಯ ನೋಡಲು ಸುಂದರ ಹುಡುಗಿ ಮನೆಯಲ್ಲಿ ಕೊನೆಯ ಮಗಳು ಎಂದು ತುಂಬಾ ಜಾಣೆ ಈ ಹಳ್ಳಿಯಲ್ಲಿದ್ದರೂ ಮಗಳಿಗೆ ಬಿ ಎ ಇಂಜಿನಿಯರ್ ವರೆಗಿನ ಶಿಕ್ಷಣವನ್ನು ಸಿಟಿಗೆ ಕಳಿಸಿ ತಂದೆ ತಾಯಿ  ನೀಡಿದ್ದರು ಹೀಗಾಗಿ ಬೆಂಗಳೂರಲ್ಲಿ ನೆಲೆಸಿರುವ ಸುಂದರ ಹುಡುಗ ಆಕಾಶನ ಜೊತೆ ಮದುವೆಯೂ ಆಯಿತು ಸುಂದರವಾದ ಸಂಸಾರ ಅತ್ತೆ ಮಾವ ಅಮ್ಮ ಅಪ್ಪ ಬಂದು ಮನೆಯನ್ನು ಒಪ್ಪವಾಗಿ ಜೋಡಿಸಿ ಕೊಟ್ಟು ಸ್ವಲ್ಪ ದಿನ ಅವರ ಜೊತೆ ಇದ್ದು ಹಳ್ಳಿಗೆ ಹಿಂದಿರುಗಿದರು 

ಪ್ರೀತಿಯಿಂದ ನೋಡಿಕೊಳ್ಳುವ ಗಂಡ ದಿನಕ್ಕೊಂದು ಕಡೆ ಸುತ್ತಾಟ ಮನೆ ಕೆಲಸ ಇದರಲ್ಲಿ ಒಂದು ವರ್ಷ ಹೇಗೆ ಉರುಳಿತು ಸೌಮ್ಯಳಿಗೆ ತಿಳಿಯಲೇ ಇಲ್ಲ ಪತಿ ಆಕಾಶ್ ಹೊಸ ವಿಚಾರದ ವ್ಯಕ್ತಿ ಮಡದಿಯನ್ನು ಎಂಬಿಎ ಕೋಸರ್್ ಮಾಡಲು ಕಳುಹಿಸುತ್ತಿದ್ದ ಇದೇ ರೀತಿ ಮೂರು ವರ್ಷಗಳು ಉರುಳಿದ್ದು ಆಯಿತು ನಾಲ್ಕನೇ ವರ್ಷಕ್ಕೆ ಕಾಲಿಡುವಾಗ ಸೌಮ್ಯಳಿಗೆ ತಾಯಿಯಾಗುವ ಲಕ್ಷಣಗಳು ಕಂಡುಬಂದವು 2 ಮನೆತನಗಳಲ್ಲಿ ಹರ್ಷದ ವಾತಾವರಣ ಹರಡಿತು ಸೌಮ್ಯಳನ್ನು ಹಳ್ಳೀಗೆ ಕರೆಯಿಸಿಕೊಂಡು ಸಂಭ್ರಮದ ಸೀಮಂತ ಮಾಡಿದರು ನವಮಾಸಗಳು ತುಂಬಿ ಸೌಮ್ಯ ಗಂಡು ಮಗುವಿನ ತಾಯಿಯಾದಳು ಒಂದು ದಿನ ಆಕಾಶ್ ಹೆಂಡತಿಯ ಮಡಿಲಲ್ಲಿ ಮಲಗಿದ್ದ ಮಗುವನ್ನು ದೃಷ್ಟಿ ಸುತ್ತ,,,, ಎಲ್ಲಾ ನಿನ್ನ ತರಹನೆ ಇದ್ದಾನೆ ಸೌಮ್ಯ ನೋಡು ಮೂರು ಕಣ್ಣು ಎಲ್ಲಾ ನಿನ್ನ ತರಹವೇ""ಅದಕ್ಕೆ ಸೌಮ್ಯ ನಗುತ್ತಾ"""ಇಲ್ಲ ಆಕಾಶ್ ಎಲ್ಲಾ ನಿಮ್ಮನ್ನೇ ಹೋತಿದ್ದಾನೆ. ಕಲರ್ ಎಲ್ಲಾ ನಿಮ್ಮ ಹಾಗೆ ನಗು ಕೂಡ ನಿಮ್ಮ ತರ"""ಎಂದು ಹೇಳಿದಳು ಹೀಗೆ ದಂಪತಿಗಳ ಖುಷಿಗೆ ಏನೇ ಇಲ್ಲ  

ಮೂರು ತಿಂಗಳಿಗೆ ಮಗುವಿಗೆ ಅಮೋಘ ಎಂದು ನಾಮಕರಣ ಮಾಡಿದರು ಮರುದಿನವೇ ರಜೆ ಇಲ್ಲದ ಕಾರಣ ಬೆಂಗಳೂರಿಗೆ ಹೊರಟು ಹೋದ ಆಕಾಶ್ ದಿನಾ ಮಡದಿಯೊಂದಿಗೆ ಫೋನಿನಲ್ಲಿ ಯೋಗಕ್ಷೇಮ ವಿಚಾರಿಸುತ್ತಿದ್ದ.

ಅಂದು ಸಂಭ್ರಮದ ಯುಗಾದಿ ಹಬ್ಬ ಎಲ್ಲೆಲ್ಲೂ ಸಂಭ್ರಮವೇ ಸಂಭ್ರಮ ಆಕಾಶನಿಗೆ ರಜಾ ಇಲ್ಲದ್ದರಿಂದ ಬೆಂಗಳೂರಲ್ಲಿ ಉಳಿದ ಹೆಂಡತಿ ಮತ್ತು ತಾಯಿಯ ಆಜ್ಞೆಯಂತೆ ಎಣ್ಣೆ ಸ್ನಾನ ಮಾಡಲು ಮೈಯಿಗೆ ತಲೆಗೆ ಎಣ್ಣೆ ಮಸಾಜ್ ಮಾಡಿಕೊಂಡು ಸೌಮ್ಯಳಿಗೆ ಫೋನ್ ಮಾಡಿ ಮಾತಾಡಿದ ನಂತರ ಬಾತ್ರೂಮ್ಗೆ ಹೋಗಿ ಬಿಸಿ ನೀರು ಬಿಟ್ಟುಕೊಂಡು ಆದರೆ ಕೆಳಗೆ ಬಿದ್ದ ಸೋಪನ್ನು ನೋಡದೆ ಅದರ ಮೇಲೆ ಕಾಲಿಟ್ಟು ಜಾರಿ ಬಿದ್ದು ಬಿಟ್ಟ ತಲೆ ಹೋಗಿ ಜೋರಾಗಿ ಕಬ್ಬಿಣದ ನೆಳಕ್ಕೆ ಬಡಿದು ಗೋಡೆಗೆ ಒಂದೇ ಸೆಕೆಂಡಿನಲ್ಲಿ ತಲೆಗೆ ಜೋರಾಗಿ ಪೆಟ್ಟು ಬಿದ್ದು ಕಣ್ಣುಕತ್ತಲೆ ಇಟ್ಟು ರಕ್ತದ ಮಡುವಿನಲ್ಲಿ ಬಿದ್ದ ಮನೆಯಲ್ಲಿ ಯಾರೂ ಇಲ್ಲ ರಕ್ತ ಸೋರಿ ತಲೆಗೆ ಬಲವಾದ ಪೆಟ್ಟು ಬಿದ್ದದಕ್ಕಾಗೀ   ಅಲ್ಲಿಯೇ  ಅಸುನೀಗಿದ. 

ಒಂದೇ ಸಮ ನಳದಿಂದ ನೀರು ಹರಿದು ಹೋಗುತ್ತಿತ್ತು ಮನೆಯ ಮಾಲೀಕ ಬಾಗಿಲು ತೆಗೆದಿದ್ದು ನೋಡಿ ಒಳಗೆ ಬಂದು ಆಕಾಶ ಆಕಾಶ ಎಂದು ಕರೆದರು ನೀರಿನ ಸಪ್ಪಳ ಬಂದತ್ತ ಬಾತ್ರೂಮ್ ಕಡೆ ಹೋದರು ಅಲ್ಲಿನ ದೃಶ್ಯ ನೋಡಿ ದಿಗ್ಭ್ರಾಂತರಾದರು ಆಗಿಂದಾಗ ಅಂಬುಲೆನ್ಸ್ ಡಾಕ್ಟರ್ ಫೋನ್ ಮಾಡಿದರು ಡಾಕ್ಟರ್ ಬಂದು ನೋಡುವುದರಲ್ಲಿ ಆಕಾಶನ ಪ್ರಾಣ ಪಕ್ಷಿ ಹಾರಿಹೋಗಿತ್ತು ಆಘಾತಕ್ಕೊಳಗಾದ ಮನೆ ಮಾಲಿಕ ಸೌಮ್ಯ ಫೋನಿಗೆ ಫೋನ್ ಮಾಡಿದರು ಸುದ್ದಿ ತಿಳಿದ ಸೌಮ್ಯ ಅಲ್ಲೇ ಕುಸಿದು ಕುಳಿತರು ತಂದೆ ತಾಯಿ ವಿಷಯ ತಿಳಿದು ದಿಗ್ಭ್ರಾಂತರಾದರು ಸೌಮ್ಯಳಿಗೆ ಆಕಾಶವೇ ಕಳಚಿ ಬಿದ್ದಿತ್ತು ಸುಂದರ ಜೀವನ ಛಿದ್ರ ಛಿದ್ರವಾಗಿತ್ತು ಎಲ್ಲರೂ ಒಬ್ಬರಿಗೊಬ್ಬರು ಸಾಂತ್ವನ ಹೇಳುತ್ತಾ ಮುಂದಿನ ಕಾರ್ಯದತ್ತ ಗಮನಹರಿಸಿದರು 

ಆಕಾಶನ ಸಾವು ಸಂಭವಿಸಿ ಇಂದಿಗೆ ಒಂದು ವರ್ಷ ಕಳೆಯಿತು ಇನ್ನೂ ಎಲ್ಲರೂ ಇದೀಗ ವಾಸ್ತವದತ್ತ ಬರುತ್ತಿದ್ದಾರೆ ಸೌಮ್ಯ ಮುಂದಿನ ಜೀವನ ಹೇಗೆ ಮಗುವಿನ ಭವಿಷ್ಯವೇನೆಂದು ತಂದೆ-ತಾಯಿಯರಿಗೆ ದೊಡ್ಡ ಸಮಸ್ಯೆಯಾಗಿದೆ ಎರಡು ಮನೆಯವರು ಸೇರಿ ಒಂದು ಅವಳನ್ನು ಕೂಡ ಇಲ್ಲಿ ಸ್ವಲ್ಪ ದಿನ ಯಾರ ಕಾಲಕಳೆ ಮಗುವನ್ನು ನಾವು ಸಾಕೋಣ ಎಂದು ತಿಳಿ ಹೇಳಿದರು ಆದರೆ ಸ್ವಾಭಿಮಾನಿಯಾದ ಸೌಮ್ಯ""ಬೇಡ ನನ್ನ ಕಾಲಮೇಲೆ ನಾನು ನಿಂತು ಮಗುವಿನ ಭವಿಷ್ಯ ರೂಪಿಸುವ ನಿಮ್ಮೆಲ್ಲರ ಸಹಕಾರ ನನಗೆ ನೀಡಿ ಎಂದು ಕೇಳಿಕೊಂಡರು ಅವಳ ದೃಢ ನಿಧರ್ಾರಕ್ಕೆ ಎಲ್ಲರೂ ಮೂಕರಾದರು ಆಕಾಶ್ ಸಾವು ಸಂಭವಿಸಿ ಮೂರು ವರ್ಷಗಳೇ ಉರುಳಿವೆ ಈಗ ಸೌಮ್ಯ ಬೆಂಗಳೂರಲ್ಲಿ ಗಂಡನ ಕಂಪನಿಗೆ ಸೇರಿ ಕೆಲಸ ಮಾಡುತ್ತಿದ್ದಾಳೆ ಒಂದು ಲಕ್ಷದವರೆಗೆ ಸಂಬಳ ತರುತ್ತಾರೆ ಮನೆಯಲ್ಲಿ ಅತ್ತೆ ಒಬ್ಬರಾದ ಮೇಲೆ ಒಬ್ಬರು ಬಂದು ನಿಂತು ಅವಳಿಗೆ ಸಹಾಯ ನೀಡುತ್ತಾರೆ. 

ಮೊನ್ನೆ ಊರಿಗೆ ಹೋದಾಗ ದೊಡ್ಡಮ್ಮ ಸಿಕ್ಕಿದ್ದರು ಮಾತನಾಡುವಾಗ ಸೌಮ್ಯಳ ವಿಷಯವು ಬಂದಿತು ನಾನು ಬಿಡಲೇ ಇಲ್ಲ ದೊಡ್ಡಮ್ಮ ಸೌಮ್ಯ ಕಲಿತಿದ್ದಕ್ಕೆ ತಾನೇ ಜೀವನವನ್ನು ರೂಪಿಸಿಕೊಳ್ಳಲು ಸಾಧ್ಯ ಎಂದುನಾ  ಹೇಳಿದ ಮಾತು ನಿಜ ಎಂದು ದೊಡ್ಡಮ್ಮ ಒಪ್ಪಿಕೊಂಡರು ಹೆಣ್ಣು ಮಕ್ಕಳು ಕಲಿತರೇ ಶಾಲೆ ಒಂದು ತೆರೆದಂತೆ ಅಲ್ಲವೇ?? 

 

ಸುದ್ದಿ ಓದಿ