ಕಾಯಿ ಕಾಯಿ ಮೆಣನಸಿನಕಾಯಿ ಮಹಿಮೆ
-ಭಾಗ್ಯಶ್ರೀ ಶಿವಸಿಂಗ್ ರಜಪೂತ (ಶಿರಭಾ)
ಧಾರವಾಡ
ಊಟದಲ್ಲಿ ಉಪ್ಪಿನಕಾಯಿ ಇಲ್ಲದಿದ್ದರೆ, ಬಹುತೇಕರಿಗೆ ತುತ್ತೇ ಗಂಟಲಲ್ಲಿ ಇಳಿಯುವುದು ಕಷ್ಟಕರವಾಗುತ್ತದೆ ಮತ್ತೇ ಕೆಲವೊಬ್ಬರಿಗೆ ಊಟದ ಜೊತೆಗೆ ಚಟ್ನಿ ಬೇಕೆ ಬೇಕು ಘಾಟಿ ಮೆಣನಸಿನಕಾಯಿ ಚಟ್ನಿಗೆ ಮಾತ್ರ
ಸೀಮಿತವಾಗಿರುತ್ತಾರೆ
ಈ ರೀತಿಯ ಮೆಣಸಿನಕಾಯಿ ಚಟ್ನಿಯನ್ನು ಹೆಚ್ಚಾಗಿ ತಿನ್ನುವುದರಿಂದ ಹೊಟ್ಟೆಯಲ್ಲಿ ಅಲ್ಸರ್ಗಳು ಏರ್ಪಡುತ್ತವೆ ಎಂಬ ಭಾವನೆ ನಮ್ಮಲ್ಲಿದೆ. ಆದರೆ ಅಮೇರಿಕಾದ ಬೋಸ್ಟನ್ ಸಂಶೋಧಕರು ಇದು ಕೇವಲ ಮನುಷ್ಯನ ಭ್ರಮೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮೆಣಸಿನಕಾಯಿಯಲ್ಲಿ ಉರಿ ಹುಟ್ಟಿಸುವುದಕ್ಕೆ ಕಾರಣವೆನಿಸಿದ ಕಾಪ್ ಸೈಸಿನ್ ನಿಂದ ಲಾಭವೇ ಹೊರೆತು ನಷ್ಟವಿಲ್ಲ. ಹೊಟ್ಟೆಯಲ್ಲಿ ಆಮ್ಲಗಳನ್ನು ಹೆಚ್ಚಾಗದಂತೆ ಉತ್ಪತ್ತಿಯಾಗದಂತೆ ಇದು ನೋಡಿಕೊಳ್ಳುತ್ತದೆ. ಆಮ್ಲಗಳು ಹತೋಟಿಯಲ್ಲಿರುವಂತೆ ಆಲ್ಕಲೈನ್ವನ್ನು ಇದು ಪ್ರೇರೆಪಿಸುತ್ತದೆ.
ಅಲ್ಸರ್ಗಳನ್ನು ವಾಸಿ ಮಾಡುವುದಕ್ಕೆ ಸಹಾಯ ಮಾಡುತ್ತದೆ ಆದ್ದರಿಂದ ಮೆಣಸಿನಕಾಯಿಯನ್ನು ಅಲ್ಸರ್ಗಳಿಗೆ ದಿವ್ಯೌಷಧಿಯಾಗಿ ಅದನ್ನು ಭಾವಿಸಬಹುದು ಎಂದು ಸಂಶೋಧಕ ಸ್ವಾಮ್ಯುಯಲ್ ಮಿರಿಂಡಾ ಅಭಿಪ್ರಾಯಿಸಿದ್ದಾರೆ ಅಂದ ಮೇಲೆ ನಾವೆಲ್ಲ ಮಾಣಸಿನಕಾಯಿ ತಿನ್ನಲು ಪ್ರಾರಂಭಿಸೋಣವೆ.?