ಕಥೆ ಮತ್ತು ವಿಶೇಷ ಲೇಖನಗಳು

ಬದಲಾಗುತ್ತಿರುವ ಜಗತ್ತಿನಲ್ಲಿ ಯುವಜನರ ಮಾನಸಿಕ ಆರ್ಯೋಗ

ಬದಲಾಗುತ್ತಿರುವ ಜಗತ್ತಿನಲ್ಲಿ ಯುವಜನರ ಮಾನಸಿಕ ಆರ್ಯೋಗ

- ಡಾ. ವೈಶಾಲಿ ಎಸ್. ಹೆಗಡೆ, ಗದಗ

"ಹದಿನಾರರ ವಯಸ್ಸು ಹುಚ್ಚುಕೋಡಿ ಮನಸ್ಸು" ಎಂಬುದು ಹಿಂದಿನಿಂದಲೂ ಪ್ರಚಲಿತವಾದ ವಾಕ್ಯ. 

ಹದಿಹರೆಯ ಬಾಳಿನ ಪ್ರಮುಖ ಹಂತ. ಅತ್ತ ಬಾಲ್ಯವೂ ಅಲ್ಲ ಇತ್ತ ವಯಸ್ಕರ ಪ್ರೌಢತೆಯೂ ಇಲ್ಲದ ಗೊಂದಲ. ಹೆಚ್ಚು ಕಡಿಮೆ ತ್ರಿಶಂಕು ಸ್ಥಿತಿ.

ದೇಹದ ಬದಲಾವಣೆಯ ಜೊತೆ ಭವಿಷ್ಯ ರೂಪಿಸಿಕೊಳ್ಳುವ ದ್ವಂದ್ವಗಳು, ಕಲಿಕೆಯ ಒತ್ತಡ, ಇದರ ಮಧ್ಯೆ ತನ್ನತನದ ಹುಡುಕಾಟ, ಹಲವಾರು ಮಾನಸಿಕ ಗೊಂದಲಗಳು ಉಂಟಾಗುವ ಸಮಯವಿದು.

ಇದರ ನಡುವೆ ಇತ್ತೀಚಿನ ತಾಂತ್ರಿಕ ಯುಗದ ಪ್ರಭಾವದಿಂದ ಎಳೆ ಮನಸ್ಸಿನ ಮೇಲೆ ಆಗುತ್ತಿರುವ ಪರಿಣಾಮಗಳು ಕೂಡ ಅನೇಕ.

ಹರೆಯದ ವಂಸತ:

ಹರೆಯದಲ್ಲಿ ಗಂಡು ಹಾಗೂ ಹೆಣ್ಣು ಮಕ್ಕಳಲ್ಲಿ ದೇಹದಲ್ಲಿ ಅನೇಕ ಬದಲಾವಣೆಗಳು ಉಂಟಾಗುತ್ತವೆ. ಗಂಡು ಮಕ್ಕಳಲ್ಲಿ ಧ್ವನಿ ಒಡೆಯುವುದು, ಜನನಾಂಗಗಳು ದೊಡ್ಡದಾಗುವುದು ಇತ್ಯಾದಿ; ಹೆಣ್ಣು ಮಕ್ಕಳಲ್ಲಿ ಋತುಚಕ್ರ ಪ್ರಾರಂಭವಾಗುವುದು. ಅಂದರೆ ನೈಸಗರ್ಿಕವಾಗಿ ಗಂಡು ಹಾಗೂ ಹೆಣ್ಣಿನ ದೇಹಗಳು ಸಂತಾನೋತ್ಪತ್ತಿಗೆ ಅಣಿಯಾಗುತ್ತಿದೆ ಎಂದರ್ಥ.

ತನ್ನತನವನ್ನು ಗುರುತಿಸುವಿಕೆ:

ಹಿರಿಯ ಮನೋವಿಜ್ಞಾನಿ ಎರಿಕ್ಎರಿಕ್ಸನ್ರವರು ಹರೆಯದಲ್ಲಿ ಆಗುವ ಒಂದು ಪ್ರಮುಖ ಅಂಶದ ಬಗ್ಗೆ ತಿಳಿಸಿದ್ದಾರೆ. ಇದನ್ನು "ಐಡೆಂಟಿಟಿ ಕ್ರೈಸಿಸ್ (Identity crisis) ಎನ್ನತ್ತಾರೆ.

ಹದಿಹರೆಯದಲ್ಲಿ ಈ ತನ್ನತನವನ್ನು ಗುರುತಿಸುವಲ್ಲಿ ಅಡೆತಡೆಗಳಾದಾಗ ಆಗುವ ತೊಂದರೆಗಳ ಬಗ್ಗೆ ಅವರು ತಿಳಿಸಿದ್ದಾರೆ.

ಮನೆಯ ಹಿರಿಯರಲ್ಲಿ ತಾನೂ ಒಬ್ಬನಾಗಬೇಕೆಂದು ಇಚ್ಛಿಸುತ್ತಾನೆ. ಪ್ರಮುಖ ನಿರ್ಧಾರಗಳನ್ನು ತನ್ನನ್ನೂ ಕೇಳಬೇಕೆಂದು ಆಶಿಸುತ್ತಾನೆ. 

ಯಾವುದಾದರೂ ಸಿನಿಮಾ ಹೀರೊವನ್ನೋ ಅಥವಾ ರಾಜಕೀಯ ನಾಯಕರು, ಕ್ರೀಡಾಪಟು ಇತ್ಯಾದಿ ಹಾಗೆ ಯಾರನ್ನಾದರು ಅನುಸರಿಸಿ ಅವರ ಹಾಗೆಯೇ ತಾನಾಗಬೇಕೆಂದು ಹಂಬಲಿಸುತ್ತಾನೆ. (Hero worshiping).

ತಮ್ಮ ತಮ್ಮ ವಾಸ್ತವಿಕ ಜೀವನದ ಅಂಶಗಳ ಆಧಾರದ ಮೇಲೆ ತನ್ನತನವನ್ನು ಗುರುತಿಸಿಕೊಂಡರೆ ಗೊಂದಲಗಳು ಕಡಿಮೆ ಆಗುತ್ತವೆ.

ಭವಿಷ್ಯ ರೂಪಿಸಿಕೊಳ್ಳುವ ಹಾದಿಯಲ್ಲಿ: 

ಇಂದಿನ  ಸ್ಪರ್ಧಾತ್ಮಕ ಜಗತ್ತಿನಲ್ಲಿ ತಮ್ಮನ್ನು ರೂಪಿಸಿಕೊಳ್ಳುವಲ್ಲಿ ವಿದ್ಯಾಥರ್ಿಗಳು ಹೆಚ್ಚು ಅಂಕಗಳನ್ನು ಗಳಿಸಬೇಕು. ಉತ್ತಮ ವೃತ್ತಿಯನ್ನು ಆರಿಸಿಕೊಳ್ಳಬೇಕು. ಎಲ್ಲರಿಗಿಂತ ಹೆಚ್ಚು ಮುಂದು ಬರಬೇಕು ಎಂದು ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ತಂದೆ ತಾಯಂದಿರು ಸಹ ಮಕ್ಕಳ ಮೇಲೆ ಇದೇ ವಿಷಯವಾಗಿ ಒತ್ತಡ ತರುತ್ತಿರುವುದು ವಿಷಾದದ ವಿಷಯ.

ಅತ್ತ ಹಿರಿಯರ ಮನಸ್ಸನ್ನು ನೋಯಿಸಲೂ ಆಗದೇ, ಇತ್ತ ತಮ್ಮ ಸಾಮಥ್ರ್ಯಕ್ಕೆ ಮಿರಿದ ಅಂಕಗಳನ್ನು ಗಳಿಸಲೂ ಆಗದೇ, ತೊಳಲಾಟದ ಪರಸ್ಥಿತಿಗೆ ವಿದ್ಯಾಥರ್ಿಗಳು ಒಳಗಾಗುತ್ತಾರೆ.

ಪ್ರತಿಯೊಂದು ವ್ಯಕ್ತಿಯಲ್ಲೂ ಪ್ರತಿಭೆಗಳು ಇರುತ್ತದೆ. ಅದನ್ನು ಗುರುತಿಸಿ ಅದರಲ್ಲಿ ಮುಂದುವರಿದರೆ ಯಶಸ್ಸುಗಳಿಸುವುದು ಖಚಿತ.

ಇದರ ಹೊರತಾಗಿ ಆದಲ್ಲಿ ಮಾನಸಿಕ ಖಿನ್ನತೆ, ಆತಂಕ, ಆತ್ಮಹತ್ಯೆಗೂ ಓಳಗಾಗುವ ಸಾಧ್ಯತೆಗಳೂ ಇವೆ.

ಪ್ರೀತಿ ಪ್ರೇಮಗಳ ಬಲೆಯಲ್ಲಿ:

ಹದಿಹರೆಯದಲ್ಲಾಗುವ ದೈಹಿಕ ಬದಲಾವಣೆಗಳಿಂದ ಹಾಗೂ ಹಾಮೋ ೯ನಗಳ ಉತ್ಪತ್ತಿಯಿಂದ, ಲೈಂಗಿಕ ಆಸೆಗಳೂ ಕಾಮನೆಗಳೂ ಹಾಗೂ ಆಕರ್ಷಣೆಗಳೂ ಸಹಜ. ಇದನ್ನು ಅರಿತು ಮನಸ್ಸನ್ನು ಉಪಯುಕ್ತ ಹವ್ಯಾಸಗಳ ಕಡೆ ಕೇಂದ್ರಿಕರಿಸಿದಾಗ ಇಂತಹ ವ್ಯಾಮೋಹಗಳಿಂದ ದೂರವಿರಲು ಸಾಧ್ಯ ಹಾಗೂ ವಿವಾಹ ಪೂರ್ವ ಲೈಂಗಿಕ ಸಂಬಂಧಗಳಿಂದ ಉಂಟಾಗುವ ತೊಂದರೆಗಳನ್ನು ತಡೆಗಟ್ಟಬಹುದು.

ನಶೆಯ ಅಮಲಿನಲ್ಲಿ:

ಹೆಚ್ಚು ಹೆಚ್ಚು ಯುವಜನರು ಕ್ಷಣಿಕ ಸುಖಕ್ಕಾಗಿ ಮೊರೆಹೋಗುತ್ತಿರುವ ತೀರಾ ವಿನಾಶಕಾರಿ ಮಾರ್ಗವೆಂದರೆ ಮಾದಕ ವಸ್ತುಗಳ ಸೇವನೆ, ಪ್ರಾಯೋಗಿಕವಾಗಿ ಆರಂಭವಾದ ಸೇವನೆ, ಚಟವಾಗಿ ಯಾವಾಗ ಬದಲಾಯಿತು ಎಂದು ಊಹಿಸಲು ಅಸಾಧ್ಯ. ಕೊನೆಗೊಂದು ದಿನ ಆ ಮಾದಕ ವಸ್ತುವಿಲ್ಲದೇ ಬದುಕಲು ಅಸಾಧ್ಯ ಎಂಬ ಹಂತಕ್ಕೆ ತಲುಪುವರು.

ಒಮ್ಮೆ ಶುರುವಾದ ಚಟ ಬೆಂಬಿಡದ ಭೂತದಂತೆ. ಅದರಿಂದಾಗುವ ವ್ಯತಿರಿಕ್ತ ಪರಿಣಾಮಗಳು, ಕಲಿಕೆಯಲ್ಲಿ ಹಿನ್ನಡೆ, ಆರ್ಯೊಗ್ಯದಲ್ಲಿ ಏರುಪೇರು, ಸ್ವಭಾವದಲ್ಲಿ ವ್ಯತ್ಯಸ ಹಾಗೂ ಮಾನಸಿಕ ಖಾಯಿಲೆಗಳು ಇತ್ಯಾದಿ.

ಇದರ ಬಲೆಗೆ ಬೀಳದೆ ಯುವಜನರು ತಮ್ಮ ಭವಿಷ್ಯದ ಜೀವನಕ್ಕೆ ಸುಭದ್ರ ಅಡಿಪಾಯ ಹಾಕಬೇಕು.

ಅಂತರ್ಜಾಲದ ಸುಳಿಯಲ್ಲಿ:

ಮೊಬೈಲ್, ಅಂತರ್ಜಾಲ, ಕಂಪ್ಯೂಟರ್, ಲ್ಯಾಪ್ಟಾಪ್ ಇವು ಎಲ್ಲವೂ ಇಂದಿನ ಯುವಜನರ ಮುಖ್ಯವಾಹಿನಿ ಆಗಿದೆ. ದಿನ ನಿತ್ಯದ ಸಾಧನವಾಗಿದೆ. ಕಲಿಕೆಗೆ ಪೂರಕವಾದಂತಹ ಮಾಹಿತಿಗಳನ್ನು ಅತಿ ಸರಾಗವಾಗಿ, ವೇಗವಾಗಿ ನೀಡುವ ಅಂತರ್ಜಾಲ ಈಗ ಮಕ್ಕಳ ಸ್ನೇಹಿತನಾಗಿದೆ. ಆದರೆ ಇದರಿಂದ ಆಗುತ್ತಿರುವ ವ್ಯತಿರಿಕ್ತ ಪರಿಣಾಮಗಳು ಹಲವಾರು. ಅಧ್ಯಯನಗಳ ಪ್ರಕಾರ ಜಗತ್ತಿನಾದ್ಯಂತ ಅಂದಾಜು 2.23 ಬಿಲಿಯನ್ ಜನರು ಮಾನಸಿಕವಾಗಿ ಫೇಸ್ಬುಕ್ ಉಪಯೋಗಿಸುತ್ತಾರೆ.

ಪ್ರತಿ ವರ್ಷ ಶೇ.11 ಹೆಚ್ಚಳವಾಗುತ್ತಿದೆ ಈ ಸಂಖ್ಯೆ ಅಂದಾಜು 1.5 ಮಿಲಿಯನ್ ಜನರು ವಾಟ್ಸಆಪ್ ಬಳಸುತ್ತಿದ್ದಾರೆ. ಇದರಲ್ಲಿ ಶೇ.18 ಜನರು 17 ರಿಂದ 25 ವರ್ಷದ ವಯೋಮಾನದವರು. ಅಂದಾಜು ದಿನಕ್ಕೆ 9 ಗಂಟೆಗಳ ಕಾಲ ಪೋನ್ ಅಥವಾ ಅಂತಜರ್ಾಲದ ಬಳಕೆಯಲ್ಲಿ ಕಳೆಯುತ್ತಾರೆ ಎಂದು ಹೇಳಲಾಗಿದೆ. 

ಪೋನ್ನಿಂದ ಹೊರಬರುವ ವಿಕಿರಣಗಳಿಂದ ಹಲವಾರು ದೈಹಿಕ, ಮಾನಸಿಕ ತೊಂದರೆಗಳು ಉಂಟಾಗುತ್ತವೆ. ಇವುಗಳಲ್ಲಿ ನಿದ್ರಾ ತೊಂದರೆಗಳು, ಆತಂಕ, ಖಿನ್ನತೆ, ಗೀಳು ರೋಗ, ಮತ್ತು ದೈಹಿಕವಾಗಿ ಮರವಿನ ತೊಂದರೆ ಸ್ರವಣ ಹಾಗೂ ದೃಷ್ಠಿದೊಶಗಳು, ಬಂಜೆತನ ಇನ್ನೂ ಹಲವಾರು. ಹೆಚ್ಚು ಸಮಯ ಮೋಬೈಲನಲ್ಲಿ ಕಳೆಯುವುದರಿಂದ ಸಂಬಂಧಗಳಲ್ಲಿ ಒಡಕು ಉಂಟಾಗುವುದು. ಒಂಟಿತನ, ಸ್ನೇಹಿತರು, ಹಾಗೂ ಕುಟುಂಬದವರೊಂದಿಗೆ ಬೆರೆಯದೆ ಇರುವುದು.

ತಂದೆ ತಾಯಿಗಳ ಪಾತ್ರ:

ಯುವಜನರ ಭವಿಷ್ಯ ರೂಪಿಸುವಲ್ಲಿ ತಂದೆ ತಾಯಿಯರ ಪಾತ್ರ ಇತ್ತಿಚೀನ ಬದಲಾಗುತ್ತಿರುವ ಜಗತ್ತಿನಲ್ಲಿ ಬಹಳ ಮಯಖ್ಯವಾದುದು. ಹದಿಹರೆಯದಲ್ಲಿರುವ ಅಥವಾ ಯುವ ಜನರ ಪೋಷಕರು, ಪೋಷಕರಾಗದೆ ಸ್ನೇಹಿತರಾಗಿ ಅವರೊಂದಿಗೆ ಬೆರೆತು ಅವರಲ್ಲಿ ಆತ್ಮವಿಶ್ವಾಸ ತುಂಬಬೇಕು. ಅವರಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಗಮನಿಸುವಂತಹ ಸೂಕ್ಷ್ಮತೆಯನ್ನು ಬೆಳೆಸಿಕೊಳ್ಳಬೇಕು. ದಿನದಲ್ಲಿ ಸ್ವಲ್ಪ ಸಮಯವಾದರೂ ಅವರೊಂದಿಗೆ ಕುಳಿತು ದಿನದ ಆಗು ಹೋಗುಗಳ ಕುರಿತು ಚರ್ಚೆ ಮಾಡಬೇಕಾದುದು ಅಗತ್ಯ.

ಸಮಾಜದ ಪಾತ್ರ:

ಇಂದಿನ ಯುವಕರೇ ನಾಳಿನ ಪ್ರಜೆಗಳು ಎಂದು ಹೇಳುವಾಗ ಅವರು ದೈಹಿಕವಾಗಿ, ಮಾನಸಿಕವಾಗಿ ಸದೃಢವಾಗಿ, ಜೀವನದ ಮೌಲ್ಯಗಳನ್ನು ಅರಿತು ಬೆಳೆಯಲು ಅನುಕೂಲಕರವಾಗಿರುವ ವಾತಾವರನವನ್ನು ನೀಡುವುದು ಸಮಾಜದ ಪ್ರತಿಯೊಬ್ಬರ ಕರ್ತವ್ಯ.

ಕಿವಿಮಾತು: 

ಸಮಸ್ಯೆಗಳನ್ನು ನಿಭಾಯಿಸುವುದು, ಹೇಗೆ ಕಷ್ಟ, ಸಮಸ್ಯೆಗಳಿಲ್ಲದೆ ಜೀವನವೇ ಇಲ್ಲ. ವಿವೇಚನೆಯಿಂದ ಯೊಚಿಸಿದರೆ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ. ನೈಸರ್ಗಿಕವಾಗಿ ದೊರೆತ ಸೌಂದರ್ಯ, ಬುದ್ಧಿಶಕ್ತಿಯನ್ನು ಒಪ್ಪಿಕೊಳ್ಳಿ ಹಾಗೂ ನಿಮ್ಮಲ್ಲಿರುವ ಪ್ರತಿಭೆಯನ್ನು ಗುರುತಿಸಿ.

ನೈಪುಣ್ಯತೆಯನ್ನು ಬೆಳೆಸಿಕೊಳ್ಳಿ. ಆತ್ಮ ಗೌರವ ಬಹಳ ಮುಖ್ಯ

  1. ಮನಸ್ಸನ್ನು ಸಕಾರಾತ್ಮಕ ಯೋಚನೆಗಳಿಂದ ತುಂಬಿಕೊಳ್ಳಿ. ಮನಸ್ಸನ್ನು ಎಂದೂ ಖಾಲಿ ಬಿಡಬೇಡಿ.
  2. ಉತ್ತಮ ಹವ್ಯಾಸ, ಜೀವನ ಮೌಲ್ಯಗಳನ್ನು ರೂಪಿಸಿಕೊಳ್ಳಿ. ತಾತ್ಕಾಲಿಕ ಸುಖಕ್ಕಾಗಿ ಭವಿಷ್ಯವನ್ನು ಬಲಿಕೊಡಬೇಡಿ.
  3. ಒತ್ತಡ ನಿರ್ವಹಣೆಯ ಕೌಶಲ್ಯಗಳನ್ನು ರೂಢಿಮಾಡಿಕೊಳ್ಳಿ. ಯೋಗ, ಧ್ಯಾನ, ಸಂಗೀತ, ಸಮಾಜಸೇವೆ ಇತ್ಯಾದಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ.
  4. ಮನಸ್ಸಿನಲ್ಲಿ ಆತಂಕ, ಉದ್ವೇಗ, ತೊಂದರೆಗಳು ಕಾಣಿಸಿಕೊಂಡಾಗ ಆತ್ಮೀಯರೊಂದಿಗೆ ಹಂಚಿಕೊಳ್ಳಿ. ಹೆಚ್ಚಿನ ತೊಂದರೆ ಆದಾಗ ವೈದ್ಯರನ್ನು ಭೆೇಟಿಯಾಗಿ ಸಹಾಯ ಪಡೆಯಿರಿ. ಇದರಲ್ಲಿ ನಾಚಿಕೆ, ಅಂಜಿಕೆ ಬೇಡ.
  5. ಯಾವುದೇ ದುಶ್ಚಟಗಳ ಪ್ರಯೋಗಕ್ಕೆ, ಕೆಟ್ಟಮಾರ್ಗಕ್ಕೆ "ಬೇಡ" ಎನ್ನುವುದನ್ನು ಕಲಿಯಿರಿ.
  6. ಜೀವನದ ಗುರಿ ಸಾಧಿಸಲು ಪರಿಶ್ರಮ ಅನಿವಾರ್ಯ ಹಾಗಾಗಿ ಓದಿನ ಕಡೆ ಲಕ್ಷ್ಯವಿರಲಿ
  7. ಕನಸುಗಳನ್ನು ನನಸಾಗಿಸಿಕೊಳ್ಳವ ಮಾರ್ಗ ಸದಾ ಒಳ್ಳೆಯದೆ ಆಗಿರಲಿ.

If you fail never give up because FAIL means, "First attempt in learning".

END is not the END, in fact END means, "Effort never dies".

If you get NO as an answer remember NO means, "Next opportunity". 

                                            - Dr. A. P. J. Abdul Kalam. 


ಸುದ್ದಿ ಓದಿ