ಕಥೆ ಮತ್ತು ವಿಶೇಷ ಲೇಖನಗಳು

ಬಾನೆತ್ತರಕ್ಕೇರಿದ ಭವ್ಯತೆ

ಬಾನೆತ್ತರಕ್ಕೇರಿದ ಭವ್ಯತೆ

-ಜ್ಯೋತಿ ಬದಾಮಿ

ಬೆಳಗಾವಿ

"ಸಾಗರದಷ್ಟು ವಿಶಾಲವಾದ ಭಾರತದ ಇತಿಹಾಸ ಇಳಿದಷ್ಟು ಆಳ ಇಜಿದಷ್ಟು ವಿಸ್ತಾರ" ಅರಿಯುವ ಮನಸ್ಥಿತಿ ದಾಷ್ಟತೆ ಇದ್ದಲ್ಲಿ ಮುತ್ತ, ರತ್ನ ವಜ್ರ ವೈಢೂರ್ಯಗಳ ನಿಧಿಯೇ ನಮ್ಮ ಕೈಗೆಟಕುವುದು.

ನಾವು ಬೆಳಗಾವಿಯಿಂದ ಅಖಿಲ  ಭಾರತ ಕವಿಯತ್ರಿಯರ ಮಹಾ ಸಮ್ಮೇಳನಕ್ಕೆಂದು ಅಹಮದಾಬಾದಿನ ಡಾ. ಬಿ.ಆರ್.ಅಂಬೇಡ್ಕರ್ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಸಮಾವೇಶಗೊಂಡಿದ್ದೆವು. ಸಮ್ಮೇಳನ ಅತ್ಯಂತ ವೈಷಿಷ್ಟ ಮತ್ತು ಅರ್ಥಪೂರ್ಣವಾಗಿ ಸಂಪನ್ನಗೊಂಡಿತು. ಗುಜರಾತ ಪ್ರವಾಸದ ನೀಲಿ ನಕ್ಷೆಯಲ್ಲಿ ಪ್ರಥಮ ಆದ್ಯತೆ ಏಕತಾ ಪ್ರತಿಮೆಯ ವೀಕ್ಷಣೆಯಾಗಿತ್ತು. ಅಹಮದಾಬಾದನಿಂದ 4ಗಂಟೆ ಪ್ರಯಾಣ 200 ಕಿ.ಮೀ ಇದ್ದು ಬರೋಡಾದಿಂದ ಒಂದೂವರೆ ಗಂಟೆ ಪ್ರಯಾಣದಲ್ಲಿ ಅಚ್ಚು ಕಟ್ಟಾದ ವಿಶಾಲ ಹೈವೇ ರಸ್ತೆಗಳು ಸುಖರೂಪವಾಗಿ ನಮ್ಮ ಗಮ್ಯ ಸ್ಥಳವನ್ನು ಮುಟ್ಟಿಸಲು ಸಮರ್ಪಕವಾಗಿವೆ.

ನರ್ಮದಾ ಡ್ಯಾಮ್ನಿಂದ 3.2 ಕಿ.ಮೀ ದೂರದಲ್ಲಿರುವ 'ಸಾಧು ಬೆಟ್ ದ್ವೀಪದಲ್ಲಿ ಉಕ್ಕಿನ ಮನುಷ್ಯರೆಂದೇ ಖ್ಯಾತವೆತ್ತದ ವಲಭಬಾಯಿ ಪಟೇಲರ ಭವ್ಯ ಪ್ರತಿಮೆ ಬಾನೆತ್ತರಕ್ಕೆ ದೇಶದ ಹೆಮ್ಮೆಯ ಸಮಕೇತವಾಗಿ ಅನಾವರಣಗೊಂಡಿದೆ.

ನಾವು ನಮ್ಮ ಸ್ವಂತ ವಾಹನವನ್ನು ಪಾಕರ್ಿಂಗನಲ್ಲಿ ನಿಲ್ಲಿಸಿ ಅಲ್ಲಿನ ವಿಶೇಷ ಬಸ್ಸುಗಳಲ್ಲಿ ಪ್ರತಿಮೆಯ ವೀಕ್ಷಣಾ ಸ್ಥಳಕ್ಕೆ ಕರೆದೊಯ್ಯಲಾಗುತ್ತದೆ. 3-4 ಕೀ ಮಿ ಕ್ರಮಿಸಿದ ನಂತರ ನಮಗೆ ದೂರದಲ್ಲಿ ನೆರಳಿನಾಕಾರದಲ್ಲಿ ಪಟೇಲರ ಪ್ರತಿಮೆ ಗೋಚರಿಸುತ್ತದೆ. ಭವ್ಯತೆ ಯುಕ್ತ ಕಣ್ಣು ನೆಟ್ಟು ಬಾಯಿಂದ 'ಅಬ್ಬಾ ಎಂಬ ಉದ್ಗಾರ ತನ್ನಿಂತಾನೆ ಹೊರ ಬರುತ್ತದೆ.

ನಾವು ಎಂಟುದಿನ ಮುಂಚಿತವಾಗಿ ಅಂತಜರ್ಾಲದಲ್ಲಿ ಪ್ರವೇಶ ಟಿಕೆಟ್ಗಳನ್ನು ಮುಂಗಡ ಕಾದಿರಿಸಿದ್ದರಿಂದಾಗಿ ನೇರವಾಗಿ ಒಳಗೆ ಪ್ರವೇಶ ಪಡೆಯುತ್ತೇವೆ.ಸಾಲಿನಲ್ಲಿ ನಿಂತು ಸಮಯವ್ಯಯಿಸುವುದು ತಪ್ಪುತ್ತದೆ. ಕುತ್ತಿಗೆ ಮೇಲೆತ್ತಿ ಕುತೂಹಲದಿಂದ ವಲ್ಲಭಬಾಯಿ ಪಟೇಲರ ಮೂತರ್ಿಯನ್ನು ವೀಕ್ಷಿಸುತ್ತಿದ್ದರೆ, ಕಾಲುಗಳ ಕೆಳಗಿನ ಮಾರ್ಬಲ ಆವರಣ, ಅಕ್ಕಪಕ್ಕದಲ್ಲಿನ ನಡೆಯಲು ನಿಮರ್ಿಸಿರುವ ಏಕ್ಸಿಲೇಟರ್ ಮೇಲೆ ಸರಾಗವಾಗಿ ಸಾಗುತ್ತಿರುತ್ತೇವೆ.

ಹಸನ್ಮುಖರಾಗಿ ಅಲ್ಲಿರುವ ಸ್ವಯಂ ಸೇವಕರು ನಮಗೆ ಮಾಹಿತಿ ನೀಡಲು ಮಾರ್ಗದರ್ಶನ ಮಾಡಲು ಮುಂದೆ ಬರುತ್ತಾರೆ. ನಾವು ಅಲ್ಲಿ ವೀಕ್ಷಿಸಬಹುದಾದ ಸ್ಥಳಗಲ ಕುರಿತು ವಿವರಣೆ ನಿಡುತ್ತಾರೆ. ಅಲ್ಲಿನ ಅಭೂತ ಪುರ್ವ ಸುವ್ಯವಸ್ಥೆಯನ್ನು ಕಂಡಟು ನಮಗೊಂದು ಕ್ಷಣ ವೀದೇಶಗಳ ಪ್ರವಾಸಿತಾಣಗಲ ನೆನಪಾಗುತ್ತದೆ. ಅಲ್ಲಿ ಜನಜುಂಗುಳಿ ಕಂಡು ಬಮದರೂ ಹಂತ ಹಂತವಾಗಿ ವಿಕ್ಷಿಸುತ್ತಾ ಸಾಗುವುದರಿಂದ ಅನಾನುಕೂಲ ಅನಿಸುವುದಿಲ್ಲ.

ಮೊದಲನೆ ಹಂತದಲ್ಲಿ ಸದರ್ಾರ ವಲ್ಲಭ ಬಾಯಿ ಪಟೇಲರ ಕುರಿತು ಜೀವನ ಚರಿತ್ರೆಯ 15 ನಿಮಿಷದ ಸಾಕ್ಷ್ಯ ಚಿತ್ರ ವೀಕ್ಷಣೆ.

ಭಾರತ ಸ್ವಾತಂತ್ಯೋತ್ಸವದ ಮೊದಲ ಗೃಹಸಚಿವರಾಗಿ, ಭಾರತದ ಪ್ರಪ್ರಥಮ ಉಪಪ್ರಧಾನ ಮಂತ್ರಿಯಾಗಿ, ಒಬ್ಬ ಬ್ಯಾರಿಸ್ತರಾಗಿ, ಭಾರತೀಯ ರಾಷ್ಟ್ರಿಯ ಕಾಂಗ್ರೆಸ್ಸಿನ ಹಿರಿಯ ಮುಖಂಡರು. ಸ್ವಾತಂತ್ರ್ಯಕ್ಕಾಗಿ ಜೀವನವನ್ನೇ ಮುಡುಪಾಗಿಟ್ಟು ಮಹಾತ್ಮಾ ಗಾಂಧೀಜಿಯವರ ಆಪ್ತರಾಗಿ ಭಾರತದ ಗಣರಾಜ್ಯದ ಸ್ಥಾಪನೆ ಮತ್ತು ಸ್ವತಂತ್ರರಾಷ್ಟ್ರದೊಳಗಿನ ಏಕೀಕರಣದಲ್ಲಿ ಬಹು ಮುಖ್ಯ ಪಾತ್ರ ನಿರ್ವಹಿಸಿದ ಮಹಾನ್ ವ್ಯಕ್ತಿತ್ವದ ಚಿತ್ರಣ ಜೊತೆಗೆ 1947ರಲ್ಲಿ ಇಂಡೋ ಪಾಕಿಸ್ತಾನ ಯುದ್ಧದ ಅವಧಿಯಲ್ಲಿ ಅವರು ಭಾರತೀಯ ಸೈನ್ಯದ ಕಮಾಂಡರ್ ಇನ್ ಚಿಪ್ ಆಗಿ, ಅತ್ಯಂತ ಕಠು ನಿಧರ್ಾರಗಳನ್ನು ಕೈಗೊಂಡು ಉಕ್ಕಿನ ಮನುಷ್ಯ ಎಂಬ ಬಿರುದೂ ಪ್ರಜಾ ಮಾನಸದಲ್ಲಿ ದೊರೆತಿದ್ದು ಇತಿಹಾಸ. 'ಭಾರತದ ನಾಗರಿಕ ಸೇವಕರ ಪೋಷಕ ಸಂತ' ಭಾರತದ ಏಕೀಕರಣದ ನೇತಾರರಿಗೆ 1991ರಲ್ಲಿ ಅತ್ಯುನ್ನತ 'ಭಾರತರತ್ನ' ಪ್ರಶಸ್ತಿ ಮರಣೋತ್ತರವಾಗಿ ನೀಡಲಾಯಿತು.

1875 ಅಕ್ಟೋಬರ್ 31ರಂದು ಗುಜರಾತಿನ ಕರಮ ಸಂದ್ ಎಂಬ ಪುಟ್ಟಹಳ್ಳಿಯಲ್ಲಿ ಜನಿಸಿ 1950 ಡಿಸೆಂಬರ್ 15ರಂದು ತಮ್ಮ ಅಮೂಲ್ಯ 75 ವರ್ಷಗಳನ್ನು ದೇಶದ ಹಿತಕ್ಕಾಗಿ ಶ್ರಮಿಸಿದ ಸದರ್ಾರ್ ವಲ್ಲಭಬಾಯಿ ಪಟೇಲರಿಗೆ 2018 ಅಕ್ಟೋಬರ್ 31ರಂದು ಅವರ 143ನೇ ಜನ್ಮ ದಿನದಂದು 182 ಮೀಟರ್ ಅತೀ ಎತ್ತರದ ಭವ್ಯ ಪ್ರತಿಮೆಯನ್ನು ಲೋಕರ್ಪಣೆಗೊಳಿಸಿದವರು,  ನಮ್ಮ ದೇಶದ ಹೆಮ್ಮೆಯ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು.

ಭಾರತಿಯರ ಹೃದಯದಲ್ಲಿ ನೆಲೆಸಿರುವ ಸದರ್ಾರ್ ವಲ್ಲಭ ಬಾಯಿ ಪಟೇಲರ ಹೃದಯ ಅಂದರೆ ಎದೆಯ ಭಾಗಕ್ಕೆ ವೀಕ್ಷಣಾ ಗ್ಯಾಲರಿ 93ನೇ ಅಂತಸ್ತಿನಲ್ಲಿದ್ದು, ಕೇವಲ 50 ಸೆಕೆಂಡುಗಳಲ್ಲಿ ಕರೆದೊಯ್ಯಲು ಎರಡು ಲಿಪ್ಟ್ಗಳು ಅಲ್ಲಿವೆ. ಪಟೇಲರ ಹೃದಯ ಭಾಗದಲ್ಲಿ ನಿಂತು ಸದರ್ಾರ್ ಸರೋವರ, ಡ್ಯಾಮ್, ಗುಡ್ಡಗಳ ಶ್ರೇಣಿ ನಿಸರ್ಗದ ವಿಹಂಗಮ ನೋಟ ಕಣ್ಮನ ಸೆಳೆಯುತ್ತದೆ. ಪಟೇಲರ್ ಪಾದಗಳ ಬಳಿ ಹೋಗಲು ಎಕ್ಸ್ಲೇಟರ್ ವ್ಯವಸ್ಥೆಯಿದೆ ಮತ್ತೆ ನಮಗೆ ವಾಲಂಟೀಯರ್ಸ್ ಪ್ರತಿಮೆಯ ಕುರಿತು ವಿವರಗಳನ್ನು ನೀಡುತ್ತಾ ಇರುತ್ತಾರೆ.

ಪ್ರತಿಮೆಯ ಪಾದದ ಒಂದೊಂದು ಬೆರಳು 11 ಪೂಟ್, 10, 9, 8, 6, ಹೀಗೆ ಅಷ್ಟೊಂದು ದೊಡ್ಡವು ಪಂಜಿ, ಜುಬ್ಬ,ಪಾದಗಳಲ್ಲಿ ಸ್ಯಂಡ್ಲ್ಲಸ ಅತ್ತಂತ ಸರಳ ವ್ಯಕ್ತಿತ್ವದಂತೆಯೇ ಪ್ರತಿಮೆಯೂ ನಮ್ಮ ಕಣ್ಮುಂದೆ ವಿಸ್ಮಯವನ್ನೇ ತೆರೆದಿಡುತ್ತದೆ.

ನಮ್ಮನ್ನು ಕರೆತಂದಿರುವ ಬಸ್ಸುಗಳು 15 ನಿಮಿಷಕ್ಕೊಮ್ಮೆ ಮುಂದಿನ ವಿಕ್ಷಣಾ ಸ್ಥಳಗಳಾದ ವ್ಯಾಲಿ ಆಫ್ ಪ್ಲವರ್ ಮತ್ತು ನರ್ಮದಾ ಡ್ಯಾಮ್ ಸದರ್ಾರ್ ಸರೊವರದ ದಿಹಂಗಮ ದರ್ಶನ ಮಾಡಿಸುತ್ತದೆ. ಅಲ್ಲಿದ್ದ ವಾಲಂಟೀಯರ್ಗಳು ನಮ್ಮೊಂದಿಗೆ ಅತ್ಯಂತ ಸ್ನೇಹ ಭಾವದಿಂದ ಆತ್ಮೀಯತೆಯಿಂದ ಬಿಳ್ಕೋಡುವಾಗ ನಮ್ಮ ಅನುಭವಗಳನ್ನು, ಅಭಿಪ್ರಾಯ,ಗಳನ್ನು ಚಿತ್ರೀಕರಿಸಿಕೊಂಡು ವಿದಾಯ ಹೇಳಿದರು. ಈ ಪ್ರದೇಶದ 15,000 ಯುವ ಜನಾಂಗಕ್ಕೆ ಇಲ್ಲಿ ನೌಕರಿ ದೊರೆತಿರುವುದಾಗಿ ಅಭಿಮಾನದಿಂದ ಹೇಳಿಕೊಂಡರು. ಸಂಜಿ ನಾವು ಭೇಟಿ ಕೊಟ್ಟಲ್ಲಿ ಲೇಸರ್ ಕೋ ಇರುವುದಾಗಿ ತಿಳಿಸಿದರು. ಮುಂದೆ ಸರೊವರದಲ್ಲಿ ದೋಣಿ ಮೂಲಕ ಪ್ರತಿಮೆ ವೀಕ್ಷಣೆ ತಲುಪುವ ವ್ಯವಸ್ಥೆ ಮಾಡುತ್ತಿದ್ದಾರೆ. 

93 ಮೀಟರ್ ಎತ್ತರ "ಸ್ಟಾಚ್ಯೂ ಆಪ್ ಲಿಬಿರ್ಟ ನೋಡಲು ಅಮೇರಿಕಾದಲ್ಲಿ ಹೋದಾಗಿನಕ್ಕಿಂತ ದುಪ್ಪಟ್ಟು ಅಭಿಮಾನ ಹೆಮ್ಮೆ ನನಗುಂಟಾಯಿತು. ಸದರ್ಾರ್ ಪಟೇಲ್ ಪ್ರತಿಮೆಗಳಿಗು ಸರದಾರರಾಗಿ ಕಂಗೊಳಿಸುತ್ತಾ ಪ್ರವಾಸಿಗರಿಗೆ ಅವರ್ನನಿಯ  ಹುಮ್ಮಸ್ಸನ್ನು ತುಂಬುವಲ್ಲಿ ಯಶಸ್ವಿಯಾಗಿದೆ. ಸರದಾರ್ ಸರೋವರ ಗುಜರಾತ ರಾಜ್ಯದ ಕೋಟ್ಯಾಂತರ ಜನರಿಗೆ ನೀರಿನದಾಹ ತಣಿಸಿದ್ದರೆ, 'ಏಕತಾ ಪ್ರತಿಮೆ' ದೇಶದ ಐಕ್ಯತೆಯ ಪ್ರತೀಕವಾಗಿ ಪ್ರವಾಸಿ ತಾಣವಾಗಿ ಪ್ರವಾಸೋಧ್ಯಮಕ್ಕೆ ಮುಂಚೋಣಿಯಲ್ಲಿದೆ ಎಂದರೆ ಅತಿಶಯೋಕ್ತಿಯಾಗಲಾರದು 

ಸುದ್ದಿ ಓದಿ