ಪ್ರಥಮ ಬಾರಿಗೆ ಮತಗಟ್ಟೆಯಲ್ಲಿ ಮತಹಕ್ಕು ಚಲಾಯಿಸಿದ ಬಾಲೆಯರು

ಪ್ರಥಮ ಬಾರಿಗೆ ಮತಗಟ್ಟೆಯಲ್ಲಿ ಮತಹಕ್ಕು ಚಲಾಯಿಸಿದ ಬಾಲೆಯರು

ಲೋಕದರ್ಶನ ವರದಿ

ರಾಣೇಬೆನ್ನೂರ ಏ.23: ಭಾರತ ದೇಶ ವಿವಿಧತೆಯಲ್ಲಿ ಏಕತೆ ಹೊಂದಿರುವ ಅತ್ಯಂತ ದೊಡ್ಡದಾದ ದೇಶ. ಪ್ರಜಾಪ್ರಭುತ್ವದ ಪ್ರಭುದ್ದತೆಗೆ ನಮ್ಮನ್ನಾಳುವ ನಾಯಕರು ನಿಷ್ಠೆ, ನ್ಯಾಯ, ನೀತಿ, ಕರುಣೆ ಮತ್ತು ಜನಸಾಮಾನ್ಯರ ಕಷ್ಟ ಸುಖಗಳನ್ನು ಅರಿತು ಅವರ ಸಮಸ್ಯೆಗಳಿಗೆ ತಕ್ಷಣವೇ ಸ್ಪಂಧಿಸುವಂತವರಾಗಿರಬೇಕು.  ಇದರಿಂದ ಆಯಾ ಕ್ಷೇತ್ರ ಮತ್ತು ಪ್ರದೇಶಗಳು ಅಭಿವೃದ್ಧಿ ಹೊಂದಲು ಸಾಧ್ಯವಾಗುವುದು ಎನ್ನುತ್ತಾರೆ. ಪ್ರಥಮ ಬಾರಿಗೆ ಮತದಾನ ಹಕ್ಕನ್ನು ಪಡೆದು, ಮತ ಚಲಾಯಿಸಿದ ವಿದ್ಯಾಥರ್ಿನಿ ಮೇಘಾ ಎಸ್ ಕರ್ಜಗಿ. ಈ ಕುರಿತು ಮಾಧ್ಯಮದೊಂದಿಗೆ ತಮ್ಮ ಮತದಾನ ಅನುಭವ ಹಂಚಿಕೊಂಡು ಮಾತನಾಡಿದ ಮೇಘಾ ಕಳೆದ 6 ತಿಂಗಳ ಹಿಂದೆ ಕಾಲೇಜಿನಲ್ಲಿಯೇ ಸ್ವೀಫ್ ಸಿಬ್ಬಂಧಿ ಧಾವಿಸಿ ನನ್ನಿಂದ ಮತ ಚೀಟಿಗಾಗಿ ದಾಖಲಿಸಿಕೊಂಡಿದ್ದರು. 

 ನನಗೆ ಈ ಭಾರಿ ಮತ ಚಲಾಯಿಸಲು ಅವಕಾಶ ಬಂದಿದ್ದು, ಆರಂಭಿಕ ಹಂತದಲ್ಲಿ ಎಲೆಕ್ಷನ್ ಹೇಗೆ ಇರುತ್ತೆ ಮತ್ತು ಹೇಗೆ ನಡೆಯುತ್ತೆ ಮತ ಚಲಾಯಿಸುವ ರೀತಿ ನೀತಿ ಯಾವ ರೀತಿ ಇರಬಹುದು ಎನ್ನುವ ದುಗುಡತೆ ಮನಸ್ಸಿನಲ್ಲಿ ಮನೆಮಾಡಿತ್ತು. 

       ನಮ್ಮ ಓಣಿಯ ಹಿರಿಯ ಗೆಳತಿಯರೊಂದಿಗೆ ಮತಗಟ್ಟೆಗೆ ಬಂದು ಸರದಿಯಲ್ಲಿ ನಿಂತಾಗ ಇಲ್ಲಿನ ಜನರ ಅನಿಸಿಕೆ, ಅಭಿಪ್ರಾಯ ಕೇಳಿ ಬರುತ್ತಿದ್ದವು. ಇದರಿಂದ ಸ್ವಲ್ಪ ಮತದಾನ ಕುರಿತು ಜ್ಞಾನೋದಯವು ಸಹ ಬಂದಿದ್ದು ಸುಳ್ಳಲ್ಲ. 

  ಅಷ್ಟರೊಳಗೆ ನಮ್ಮೂರಿನ ಶಾಸಕರು ಮತ್ತು ಅವರ ಪತ್ನಿ ಅವರ ಬಳಗ ನನ್ನ ಹಿಂದೆಯೇ ನಿಂತಿರುವುದನ್ನು ಕಂಡು ಖುಷಿಯೇ ಖುಷಿ ಅನುಭವಿಸುವಂತಾಗಿತ್ತು. ಶಾಸಕರೊಂದಿಗೆ ಪ್ರಥಮ ಭಾರಿಗೆ ಮತ ಚಲಾಯಿಸಿದ ಆತ್ಮಸಂತೋಷ ನನ್ನಲ್ಲಿ ಮನೆ ಮಾಡಿತ್ತು ಎಂದು ಮೇಘಾ ವಿವರಿಸಿದಳು.


ಸುದ್ದಿ ಓದಿ