ದೇವತೆ ತೆರಪಿ ಯಲ್ಲಮ್ಮಾ ದೇವಿ ಜಾತ್ರೆ ಜ 31 ರಿಂದ ಫೆ 4 ರವರೆಗೆ ವಿಜ್ರಂಭಣೆಯಿಂದ ನಡೆಯಲಿದೆ
ಕೊಲ್ಹಾರ 30: ಪಟ್ಟಣದ ಆರಾಧ್ಯ ದೇವತೆ ತೆರಪಿ ಯಲ್ಲಮ್ಮಾ ದೇವಿ ಜಾತ್ರೆ ಜ 31 ರಿಂದ ಫೆ 4ರವರೆಗೆ ಐದು ದಿನಗಳ ಕಾಲ ವಿಜ್ರಂಭಣೆಯಿಂದ ನಡೆಯಲಿದೆ ಸಂಜೆ ಎತ್ತಿನ ಬಂಡೆಯಲ್ಲಿ ಹಂದರ ತಪ್ಪಲ ಮೆರವಣಿಗೆ, ಅನ್ನ ಸಂತರೆ್ಣ ನಡೆಯಲಿದೆ ಅದೆ ದಿನ ರಾತ್ರಿ 10 ಗಂಟೆಗೆ ರೇಣುಕಾ ಯಲ್ಲಮ್ಮ ದೇವಿ ನಾಟ್ಯ ಸಂಘ ತೊರವಿ ಇವರಿಂದ ನಾಟಕ ಜರುಗುವುದು, ಫೆ 1 ರಂದು ಬೆಳಿಗ್ಗೆ 10 ಗಂಟೆಗೆ ಕುಂಭ ಮೇಳದೊಂದಿಗೆ ಪಲ್ಲಕ್ಕಿ ಉತ್ಸ ವ ಹಾಗೂ ಕಳಸ ದೊಂದಿಗೆ ಜೋಗುತಿ ನೃತ್ಯ ಭಂಡಾರದ ಜಾತ್ರೆ ಜರುಗುವುದು ರಾತ್ರಿ 10:30 ಗಂಟೆಗೆ ರೌಡಿ ರಾಜ್ಯದಲ್ಲಿ ರಾಜಾ ಹುಲಿ ಎಂಬ ಸುಂದರ ಸಾಮಾಜಿಕ ನಾಟಕ ನಡೆಯಲಿದೆ,
ಫೆ 2 ರಂದು ಬೆಳಿಗ್ಗೆ 10 ಗಂಟೆಗೆ ರಂಗೋಲಿ ಸ್ಪರ್ಧೆ ಉಡಿ ತುಂಬುವ ಕಾರ್ಯಕ್ರಮ ಮಧ್ಯಾಹ್ನ ಮೂರು ಗಂಟೆಗೆ ಬೀರಲಿಂಗೇಶ್ವರ ದೇವಸ್ಥಾನದಿಂದ ಹಾಲು ತುಪ್ಪದ ಮೆರವಣಿಗೆ ಸಂಜೆ 4 ಗಂಟೆಗೆ ಹಾಲೋಕಳಿ ಜರುಗುವುದು,ರಾತ್ರಿ 10,ಗಂಟೆಗೆ ಮಾಜಿ ಸಚಿವ ಎಸ್ ಕೆ ಬೆಳ್ಳುಬ್ಬಿ ಅವರು ಅಭಿನಯಿಸಿರುವ ಕಾಖಂಡಕಿ ಮಹಿಪತಿ ದಾಸರ ತಾಂತ್ರಿಕ ಚಲನ ಚಿತ್ರದ ಜರುಗುವುದು ರಾತ್ರಿ 10:30 ರಿಂದ ಮುರಾರಿ ಮಲೋಡಿಸ್ ತಂಡದಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ ಫೆ 3 ರಂದು ಬೆಳಿಗ್ಗೆ 11:30 ಗಂಟೆಗೆ ಮನುಷ್ಯರಿಂದ 24 ಎಚ್ ಪಿ ಟ್ರ್ಯಕ್ಟರ ಜಗ್ಗುವ ಸ್ಪರ್ಧೆ , ಸಂಜೆ 7 ಗಂಟೆಗೆ ಚಿತ್ರ ವಿಚಿತ್ರ ಮದ್ದು ಸುಡುವ ಕಾರ್ಯಕ್ರಮ ನಡೆಯಲಿದೆ ಅದೆ ದಿವಸ ಸಂಜೆ 9 ಗಂಟೆಗೆ ಟಗರಿನ ಕಾಳಗ ಜರುಗುವುದು ಫೆ 4 ರಂದು ದೇವಿಯ ಕಳಸ ಏರಿಸುವುದರರೊಂದಿಗೆ ಜಾತ್ರೆ ಮಂಗಲಗೋಳ್ಳುವುದು ಎಂದು ಜಾತ್ರಾ ಕಮೀಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ