ಕಥೆ ಮತ್ತು ವಿಶೇಷ ಲೇಖನಗಳು

ಮಾಡನರ್್ ಮಾತೆಯರಿಗೆ ಮನದಾಳದ ಮಾತು

ಮಾಡನರ್್ ಮಾತೆಯರಿಗೆ ಮನದಾಳದ ಮಾತು

- ಮಂಜುನಾಥ ಮರಿತಮ್ಮನವರ 

ಮಾತೆಯುದರದಲಿ   ನವಮಾಸಗಳನ್ನು  ಕಳೆದು  ಕಂಡರಿಯದ  ಈ ಜಗಕೆ  ಪಾದಾರ್ಪಣೆ  ಮಾಡಿದ  ಪ್ರತಿ  ಮಗುವಿಗೂ  ಕೂಡಾ  ತಾಯಿಯ  ಮಡಿಲು  ಅವ್ಯಕ್ತ  ಆನಂದವನ್ನು  ನೀಡುತ್ತದೆ. ದೇವರು  ಎಲ್ಲಾ  ಮನೆಗಳಲ್ಲಿ ಇರಲು  ಸಾಧ್ಯವಿಲ್ಲವಾದ್ದರಿಂದ  ಪ್ರತಿ  ಮನೆಯಲ್ಲಿ ತಾಯಿಯನ್ನು  ಸೃಷ್ಟಿಸಿದ್ದಾನೆ. ತಾನು  ಕತ್ತಲಲ್ಲಿದ್ದರೂ  ನಮಗೆ  ಬೆಳಕು  ನೀಡುವ, ತಾನು  ದುಃಖದಲ್ಲಿದ್ದರೂ   ನಮಗೆ  ಸಂತೋಷ  ನೀಡುವ, ತಾನು  ಬಿಸಿಲಿನ  ಬೇಗೆಯಲ್ಲಿ  ಬೇಯುತ್ತಿದ್ದರೂ  ನಮಗೆ  ತಂಪನ್ನೀಯುವ  ಈ  ಜಗದ  ಏಕ  ಮಾತ್ರ  ವ್ಯಕ್ತಿ-"ತಾಯಿ".

            ತಾಯಿಯು   ಮಕ್ಕಳಿಗೆ ಎದೆಹಾಲನ್ನು ಕುಡಿಸುವುದರ ಜೊತೆಗೆ  ಮಾತನಾಡಲು  ಕಲಿಸುತ್ತಾಳೆ. ಅಪ್ಪ-ಅಮ್ಮ, ಅಜ್ಜ-ಅಜ್ಜಿ, ಚಿಕ್ಕಮ್ಮ-ಚಿಕ್ಕಪ್ಪ, ಅಣ್ಣ-ತಂಗಿ... ಮುಂತಾದ ಸಂಬಂಧಗಳನ್ನು  ಪರಿಚಯಿಸುತ್ತಾಳೆ.  ಮಕ್ಕಳ  ತೊದಲು  ನುಡಿಗಳಿಗೆ  ಅಕ್ಷರಗಳ  ರೂಪ  ಕೊಡುತ್ತಾಳೆ.  ಪ್ರೀತಿ-ವಿಶ್ವಾಸ-ಸ್ನೇಹ-ಸೌಹಾರ್ದತೆ, ಪ್ರಾಮಾಣಿಕತೆಯಂತಹ  ಗುಣಗಳನ್ನು  ಒಳದುಂಬುತ್ತಾಳೆ.  ದೇವರನಾಮ, ಭಜನೆ, ವಚನಗಳ  ಮೂಲಕ  ಧಾಮರ್ಿಕ  ಮನೋಭಾವನೆಯನ್ನು  ಬಿತ್ತುತ್ತಾಳೆ. ಆಚಾರ, ವಿಚಾರ, ಸಂಪ್ರದಾಯ, ಸಂಸ್ಕೃತಿಯ  ಪಾಠ  ಹೇಳಿಕೊಡುತ್ತಾಳೆ.ಮಗುವು  ಮುಂದೆ  ಕಲಿಯುವ  ಶಾಲಾಶಿಕ್ಷಣಕ್ಕೆ  ಅಷ್ಟೆ  ಅಲ್ಲದೇ  ಜೀವನ  ಶಿಕ್ಷಣಕ್ಕೂ  ಇವು ಭದ್ರಬುನಾದಿ  ಹಾಕುತ್ತವೆ. ಮಗುವಿನ  ವ್ಯಕ್ತಿತ್ವ ವಿಕಾಸದಲ್ಲಿ ತಾಯಿಯದೇ  ಪ್ರಧಾನಪಾತ್ರ. ಹಾಗಾಗಿಯೇ ತಾಯಿಯನ್ನು  ಮೊದಲ  ಗುರು  ಎಂದು  ಸಂಬೋಧಿಸುತ್ತಾರೆ. ಮಕ್ಕಳಿಗೆ  ನೋವು ನಲಿವುಗಳಾದಾಗ ಮೊದಲು  ನೆನೆಯುವುದು  ಅಮ್ಮನನ್ನೇ.  ಅಮ್ಮನ  ಪಾತ್ರವನ್ನು  ತುಂಬಲು  ಇನ್ನಾರಿಂದಲೂ  ಸಾಧ್ಯವಿಲ್ಲ. ಎಲ್ಲ ಸಂಬಂಧಗಳಲ್ಲೂ  ತಾಯಿ-ಮಕ್ಕಳದು ಅತ್ಯಂತ ಮುಖ್ಯ ಸಂಬಂಧ.

ತಾಯಂದಿರಿಗೆ ಸಲಹೆಗಳು :  

ಮಕ್ಕಳು ಉಪದೇಶದಿಂದ ಕಲಿಯುವುದಿಲ್ಲ ,  ಅನುಕರಣೆಯಿಂದ  ಕಲಿಯುತ್ತಾರೆ.ಹೀಗಾಗಿ  ತಾಯಿಯು ಉತ್ತಮ  ನಡೆ-ನುಡಿ, ಆಚಾರ-ವಿಚಾರ, ಸಂಸ್ಕಾರಗಳನ್ನು  ಹೊಂದಿರಬೇಕು.    ಮಾತೆಯಾದವಳು  ಪ್ರೀತಿ, ವಾತ್ಸಲ್ಯ, ಮಮಕಾರಗಳ  ಖಣಿಯಾಗಿರಬೇಕು. ಮಕ್ಕಳನ್ನು ಯೋಗ್ಯರೀತಿಯಲ್ಲಿ  ಬೆಳೆಸಿ  ದೈಹಿಕ-ಬೌದ್ಧಿಕ-ಭಾವನಾತ್ಮಕ  ಪರಿಪಕ್ವತೆಯನ್ನು  ಸಾಧಿಸುವಂತೆ  ಮಾಡುವುದು  ತಾಯಂದಿರ  ಕರ್ತವ್ಯ.  ಶಿಸ್ತು, ಸಂಯಮ, ಹೊಂದಾಣಿಕೆ, ಸಹಕಾರಗಳಂತಹ   ಗುಣಗಳನ್ನು  ಮಕ್ಕಳಲ್ಲಿ  ರೂಢಿಸಬೇಕು.

ಮಕ್ಕಳಲ್ಲಿ  ಸೋಲು-ಗೆಲುವುಗಳನ್ನು ಸಮನಾಗಿ  ಸ್ವೀಕರಿಸುವ  ಗುಣ  ಬೆಳಸಬೇಕು. ಗೆದ್ದಾಗ  ಹಿರಿ-ಹಿರಿ  ಹಿಗ್ಗದೇ,  ಸೋತಾಗ  ಬದುಕು  ಮುಗಿದೇ  ಹೋಯಿತು  ಎಂದು  ಕೈಚಲ್ಲಿ ಕುಳಿತುಕೊಳ್ಳುವುದನ್ನು  ತಾಯಿಯು  ತಡೆಯಬೇಕು. ಸೋಲು  ಗೆಲುವುಗಳು  ಪೂರ್ಣವಿರುದ್ಧದಿಶೆಗಳಲ್ಲ. ಅವೆರಡು ಒಂದಕ್ಕೊಂದು  ಪೂರಕ ಹಾಗೂ ಪ್ರೇರಕ. ಸೋಲೆಂಬುದು  ಗೆಲುವಿನ  ಮೊದಲ  ಮೆಟ್ಟಿಲು  ಎಂದು  ಅರ್ಥಮಾಡಿಸಬೇಕು. ಮಕ್ಕಳ  ಪ್ರತಿಭೆ  ಯಾವ  ಕ್ಷೇತ್ರದಲ್ಲಿದೆ  ಎಂದು  ಗುರುತಿಸಿ  ಅದು  ಅರಳಲು  ಶ್ರಮಿಸಬೇಕು.

ರಾಮಾಯಣ, ಮಹಾಭಾರತ, ಪಂಚತಂತ್ರದ ನೀತಿ-ಕತೆಗಳನ್ನು ಹೇಳುವ  ಮೂಲಕ  ನೈತಿಕ  ಮೌಲ್ಯಗಳನ್ನು ಬೆಳೆಸಿಕೊಳ್ಳುವಂತೆ  ಪ್ರೋತ್ಸಾಹಿಸಬೇಕು. ಹಾಡು, ಸಂಗೀತ, ಚಿತ್ರಕಲೆ, ನೃತ್ಯ  ಮುಂತಾದ   ಕ್ಷೇತ್ರಗಳಲ್ಲಿ  ಮಕ್ಕಳನ್ನು  ತೊಡಗಿಸುವುದರ  ಮೂಲಕ  ಅವರಲ್ಲಿ ಸೌಂದಯರ್ೋಪನೆ ಗುಣಗಳು  ವೃದ್ದಿಸುವಂತೆ  ನೋಡಿಕೊಳ್ಳಬೇಕು

ಮಾತೆಯು ಮಕ್ಕಳ  ವಿದ್ಯಾಭ್ಯಾಸದಲ್ಲಿ  ಅಗತ್ಯ ಮಾರ್ಗದರ್ಶನ  ಮಾಡಬೇಕು . ಮನೆಗೆಲಸಮಾಡುವಲ್ಲಿ  ಮಕ್ಕಳಿಗೆ  ಮಾರ್ಗದರ್ಶನ  ಮಾಡಬೇಕು.  ಪ್ರೀತಿ, ವಿಶ್ವಾಸದಿಂದ  ಪಾಠಗಳನ್ನು  ಓದುವಿಕೆ  ಹಾಗೂ  ಅಥರ್ೈಸುವಿಕೆಯಲ್ಲಿ  ಸಹಾಯಮಾಡಿ  ಮಕ್ಕಳ  ಆತ್ಮವಿಶ್ವಾಸವನ್ನು  ಹೆಚ್ಚಿಸಬೇಕು.

.ಮಕ್ಕಳನ್ನು  ಚೆನ್ನಾಗಿ  ಬೆಳೆಸುವುದು ನಿಜಕ್ಕೂ ಒಂದು ತಪಸ್ಸೇ ಸರಿ.  ಮಕ್ಕಳಿಗೆ  ಕಲಿಸುತ್ತಾ-ಕಲಿಸುತ್ತಾ  ತಂದೆ-ತಾಯಂದಿರು ಪಾಠ ಕಲಿಯುತ್ತಾರೆ.  ಮಕ್ಕಳನ್ನು ಬೆಳೆಸುವಾಗ  ಅವರು  ತ್ಯಾಗ, ಪ್ರೀತಿ, ಸಹನೆ, ಸಂಯಮಗಳನ್ನು  ಕರಗತಮಾಡಿಕೊಳ್ಳುತ್ತಾ  ಮಕ್ಕಳಲ್ಲಿ  ಆ  ಗುಣಗಳನ್ನು ಬೆಳೆಸಿ  ಅವರ  ಬದುಕಿಗೆ  ಅರ್ಥವನ್ನು, ಸಾರ್ಥಕತೆಯನ್ನು  ತಂದುಕೂಡಬೇಕು .

ನಮ್ಮ ಮಕ್ಕಳೆಂದು ಕುರುಡು  ಪ್ರೀತಿಯನ್ನು ತೋರಿಸುವುದು  ಅಪಾಯಕಾರಿ. ಆಚಾರ-ವಿಚಾರ-ಬಟ್ಟೆ-ಬರೆ-ಸಂಸ್ಕಾರಗಳ  ವಿಷಯದಲ್ಲಿ  ತಪ್ಪುದಾರಿಯಲ್ಲಿ  ಹೆಜ್ಜೆೆಹಾಕಿದಾಗ  ಉಪಾಯದಿಂದ  ತಿದ್ದಿ  ಸರಿದಾರಿಗೆ  ತರಬೇಕು.  ತಪ್ಪನ್ನು  ತಪ್ಪೆಂದು ಹೇಳುವಾಗ ದಾಕ್ಷಿಣ್ಯತೋರದೆ, ಒಳ್ಳೆಯ  ಕೆಲಸ  ಮಾಡಿದಾಗ  ಹೊಗಳುವ  ಸಹೃದಯತೆ  ತೋರಿದರೆ  ಮಕ್ಕಳು  ಒಳ್ಳೆಯದು  ಹಾಗೂ  ಕೆಟ್ಟದ್ದರ  ನಡುವಣ  ವ್ಯತ್ಯಾಸವನ್ನು  ಅರಿತುಕೊಂಡು  ಸರಿದಾರಿಯಲ್ಲಿ  ಮುನ್ನಡೆಯುತ್ತಾರೆ.

ಮಕ್ಕಳ ಸ್ನೇಹಿತರ ಬಗ್ಗೆ ಪ್ರತಿಯೊಬ್ಬ ತಾಯಂದಿರು ಗಮನ ನೀಡಬೇಕು. ಎಲ್ಲ ಸಮಯದಲ್ಲಿ  ನಮ್ಮ  ಮಕ್ಕಳೇ  ಒಳ್ಳೆಯವರು ಎಂಬ ತೀಮರ್ಾನಕ್ಕೆ ಬರುವುದು ಬೇಡ. ಮಕ್ಕಳ ಗೆಳೆಯ-ಗೆಳತಿಯರಲ್ಲಿ  ನಡೆಯುವ ಚಚರ್ೆ,ಹಾಸ್ಯ, ವಿನೋದಗಳನ್ನು ಸೂಕ್ಷ್ಮವಾಗಿ ವೀಕ್ಷಿಸುತ್ತಿರಬೇಕು.  

ದುಡಿಯದೇ, ಬೆವರುಸುರಿಸದೇ ಪುಕ್ಕಟೆ ದೊರೆಯುವ  ನೂರು  ರೂಪಾಯಿಗಳಿಗಿಂತ  ಕಷ್ಟಪಟ್ಟು  ಬೆವರು ಸುರಿಸಿ ದುಡಿದು  ಸಂಪಾದಿಸುವ  ಮೂರು  ರೂಪಾಯಿಗಳು   ಶ್ರೇಷ್ಠವೆಂದು  ಹೇಳಿಕೊಡಿ.

ಜೀವನವೆಂಬುದು ಹೂವಿನ  ಹಾಸಿಗೆಯಲ್ಲ  ಅದು ಹೂ ಮುಳ್ಳುಗಳ  ಮಧುರ  ಸಂಗಮ. ಅದು  ಸುಖ-ದುಃಖಗಳ, ನೋವು-ನಲಿವುಗಳ  ಸುಂದರ  ಮಿಲನ. ದುಃಖ,ನೋವುಗಳ ನಡುವೆಯೂ ನಗುವುದನ್ನು  ಕಲಿಸಿಕೊಡಿ. 

ಮಕ್ಕಳಿಗೆ  ಪ್ರಕೃತಿಯನ್ನು  ಆರಾಧಿಸುವುದನ್ನು ಕಲಿಸಿಕೊಡಿ., ನೀರು, ಗಾಳಿ, ಗಿಡ, ಮರ, ಬಳ್ಳಿ, ಹೂವು ಪ್ರಾಣಿ, ಪಕ್ಷಿಗಳನ್ನು  ಪ್ರೀತಿಸುವುದನ್ನು ಕಲಿಸಿಕೊಡಿ. ದೇಶ  ಸುತ್ತುವ  ಕೋಶ  ಓದುವ  ಅವಕಾಶವನ್ನು ಮಕ್ಕಳಿಗೆ ಒದಗಿಸಿಕೊಡಿ.

ಮಕ್ಕಳು   ಎಲ್ಲರನ್ನೂ ಪ್ರೀತಿಸಲಿ,ಹಲವರನ್ನು  ನಂಬಲಿ ಆದರೆ  ಕೆಲವರಲ್ಲಿ  ಮಾತ್ರ ವಿಶ್ವಾಸವಿಡಲಿ. ವಿಶ್ವಾಸವಿಡಬೇಕಾದವರನ್ನು  ನೂರುಬಾರಿ  ಪರಾಮಶರ್ಿಸಿ  ನಿರ್ಧರಿಸಿಕೊಳ್ಳುವುದನ್ನು  ಹೇಳಿಕೊಡಿ.

          ಮೂರುವರ್ಷದ  ಬುದ್ಧಿ  ನೂರು  ವರ್ಷದವರೆಗೆ   ಎಂಬಂತೆ  ಚಿಕ್ಕಂದಿನಲ್ಲಿ  ಕಲಿಸುವ   ಎಲ್ಲ  ಗುಣ, ರೀತಿ, ನೀತಿ, ಸಂಸ್ಕೃತಿಗಳು  ಮಕ್ಕಳ  ಭವಿಷ್ಯವನ್ನು  ರೂಪಿಸುತ್ತವೆ. ಮಕ್ಕಳು ಸಜ್ಜನರಾಗಿ  ಬೆಳೆದು  ಸಮಾಜದ  ಕಣ್ಮಣಿಯಾಗುವುದು, ದುರ್ಜನರಾಗಿ  ಬೆಳೆದು  ಸಮಾಜ ಕಂಟಕನಾಗುವುದು  ಚಿಕ್ಕಂದಿನಲ್ಲಿ  ತಾಯಂದಿರು  ನೀಡಿದ  ಶಿಕ್ಷಣದಿಂದಲೇ  ಎನ್ನಬಹುದು. ಹೀಗಾಗಿ  ತಾಯಂದಿರು  ಮಕ್ಕಳನ್ನು  ಕಣ್ಣಲ್ಲಿ ಕಣ್ಣಿಟ್ಟು  ಬೆಳೆಸಬೇಕು. ಪ್ರಾಮಾಣಿಕತೆ, ಶಿಸ್ತು, ಅತ್ಮವಿಶ್ವಾಸ, ಹೊಂದಾಣಿಕಾಮನೋಭಾವ , ಪರೋಪಕಾರ ಬುದ್ಧಿ, ಗುರುಹಿರಿಯರನ್ನು  ಗೌರವಿಸುವ  ಗುಣಗಳನ್ನು  ತಾಯಂದಿರು  ಚಿಕ್ಕಂದಿನಲ್ಲಿ  ಬೆಳೆಸಿ  ಸಮಾಜದ  ಸತ್ಪ್ರಜ್ಞೆಗಳನ್ನು  ರೂಪಿಸುವತ್ತ  ಮನಸ್ಸು  ಮಾಡಲಿ. 


ಸುದ್ದಿ ಓದಿ