ಸೌತ್ ಯುನೈಟೆಡ್ -ಬಿಎಫ್ ಸಿಗೆ ಜಯ
ಬೆಂಗಳೂರು, ಡಿ.24 - ಬೆಂಗಳೂರು ಜಿಲ್ಲಾ ಫುಟ್ಬಾಲ್ ಸಂಸ್ಥೆಯ ಆಶ್ರಯದಲ್ಲಿ ನಡೆಯುತ್ತಿರುವ ಸೂಪರ್ ಡಿವಿಜನ್ ಟೂರ್ನಿಯಲ್ಲಿ ಸೌತ್ ಯುನೈಟೆಡ್ ಹಾಗೂ ಬಿಎಫ್ ಸಿ ತಂಡಗಳು ಗೆಲುವು ದಾಖಲಿಸಿವೆ.
ಅಶೋಕನಗರದ ಮೈದಾನದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಸೌತ್ ಯುನೈಟೆಡ್ 2-0 ಯಿಂದ ಎಂಇಜಿ ಹಾಗೂ ಸೆಂಟರ್ ಎಫ್.ಸಿ ತಂಡವನ್ನು ಸೋಲಿಸಿತು. ವಿಜೇತ ತಂಡದ ಪರ ಅಭಿಲಾಷ್ ಎಂ ಕೃಷ್ಣ 37 ಹಾಗೂ ಮಹೇಶ್ ಹೆಚ್ಚುವರಿ ಸಮಯದಲ್ಲಿ ಗೋಲು ದಾಖಲಿಸಿ ಜಯದಲ್ಲಿ ಮಿಂಚಿದರು.
ಬೆಂಗಳೂರು ಫುಟ್ಬಾಲ್ ಕ್ಲಬ್ 2-1 ರಿಂದ ಬೆಂಗಳೂರು ಯುನೈಟೆಡ್ ತಂಡವನ್ನು ಮಣಿಸಿತು. ಈ ಮೂಲಕ ಬಿಎಫ್ ಸಿ ತಂಡ 25 ಅಂಕಗಳನ್ನು ಕಲೆ ಹಾಕಿ, ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.